ಮಡಿಕೇರಿ, ಆ. 31: ಕಕ್ಕಬೆ ಶ್ರೀ ಭಗವತಿ ದೇವಾಲಯ ಆವರಣವನ್ನು ಅಪವಿತ್ರಗೊಳಿಸಿದ ಪ್ರಕರಣವನ್ನು ಬಿಜೆಪಿ, ಹಿಂದೂಪರ ಸಂಘಟನೆಗಳು, ಮುಸ್ಲಿಂ ಸಮಾಜ ಬಾಂದವರು ಖಂಡಿಸಿದ್ದು, ಈ ಸಂಬಂಧಿತ ಆರೋಪಿಗಳನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿ, ಪ್ರತಿಭಟನೆ ಕೂಡ ನಡೆಸಲಾಗಿದೆ.

ಅಹೋರಾತ್ರಿ ಧರಣಿ ಎಚ್ಚರಿಕೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ಎಲ್ಲಾ ಧರ್ಮದ ವರೊಂದಿಗೆ ಶಾಂತಿ ಸಹಬಾಳ್ವೆಯಿಂದ ನಡೆದುಕೊಳ್ಳುತ್ತಿರುವ ಹಿಂದೂಗಳನ್ನು ಕೆಣಕುವ ಷಡ್ಯಂತ್ರ ಜಿಲ್ಲೆಯಲ್ಲಿ ನಡೆಯುತ್ತಿದೆÀ ಎಂದು ಆರೋಪಿಸಿದರು. ಪೊಲೀಸರು ಮುಂದಿನ ಮೂರು ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವದು. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡಿದರೆ ಅದಕ್ಕೆ ಪೆÀÇಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರವೇ ನೇರ ಹೊಣೆಯಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ತಾ. 3ರ ನಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪಕ್ಷದ ವತಿಯಿಂದ ಆರಂಭಿಸ ಲಾಗುವದೆಂದರು. ರಾಜ್ಯ ಸರ್ಕಾರ ಒಂದು ಜನಾಂಗವನ್ನು ತುಷ್ಟೀಕರಣ ಗೊಳಿಸುತ್ತಿರುವದರಿಂದ ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಕೊಡಗು ಜಿಲ್ಲೆಯಲ್ಲಿ ಗೋವುಗಳ ಹತ್ಯೆಗೆ ಅವಕಾಶವಿಲ್ಲ. ಆದರೂ, ಗೋವುಗಳ ಕಳ್ಳತನ, ಹತ್ಯೆ ನಡೆಯುತ್ತಿದ್ದು, ಇದೀಗ ದೇವಾಲಯದ ಬಳಿ ಗೋವಿನ ಕಾಲುಗಳನ್ನು ಇಡುವ ಮೂಲಕ ಉದ್ದೇಶಪೂರ್ವಕವಾಗಿ ಕೆಣಕಲಾಗುತ್ತಿದೆ. ಈ ಪ್ರಕರಣದ ಹಿಂದೆ ಕೆಎಫ್‍ಡಿ ಮತ್ತು ಪಿಎಫ್‍ಐ ಷಡ್ಯಂತ್ರವಿದೆ ಎಂದು ಆರೋಪಿಸಿದರು.

ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ, ಆಯಾ ಪ್ರದೇಶದಲ್ಲಿ ವಾಸಿಸುವವರು ಅಲ್ಲಿನ ಸಂಸ್ಕøತಿ ಮತ್ತು ಭಾವನೆಯನ್ನು ಗೌರವಿಸಬೇಕು. ಆದರೆ, ಕೊಡಗಿನಲ್ಲಿ ಗೋ ಹತ್ಯೆಗೆ ಅವಕಾಶವಿಲ್ಲವೆಂದು ತಿಳಿದಿದ್ದರೂ ಹಿಂದೂಗಳ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಂಗಳೂರು ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲು ಅಶಾಂತಿ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಉತ್ತಮ ರೀತಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿಗಳು ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಅಮಾಯಕರನ್ನು ಬಂಧಿಸಬಾರದೆಂದು ರವಿ ಕಾಳಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಎಸ್.ಸಿ. ಸತೀಶ್, ತಾಪಂ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಪಕ್ಷದ ಸಾಮಾಜಿಕ ಜಾಲತಾಣ ಮೋರ್ಚಾದ ಅಧ್ಯಕ್ಷ ಕಾಳಚಂಡ ಅಪ್ಪಣ್ಣ ಉಪಸ್ಥಿತರಿದ್ದರು.

ಗಡೀಪಾರಿಗೆ ಆಗ್ರಹ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಕೆಎಫ್‍ಡಿ ಮತ್ತು ಪಿಎಫ್‍ಐ ಸಂಘಟನೆಗಳು ನಿರಂತರವಾಗಿ ಮಾಡುತ್ತಿವೆ ಎಂದು ಆರೋಪಿಸಿದರು. ಮುಂದಿನ ಮೂರು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.

ದೇಶದ ಏಕತೆ ಮತ್ತು ಐಕ್ಯತೆ ಗಾಗಿ ಹಿಂದೂಗಳು ಸಹನಶೀಲರಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಪಿಎಫ್‍ಐ ಮತ್ತು ಕೆಎಫ್‍ಡಿ ಸಂಘಟನೆÀಗಳು ಅಮಾಯಕರ ಮುಖವಾಡ ತೊಟ್ಟು ಪಕ್ಷುಬ್ಧ ವಾತಾವರಣವನ್ನು ಸೃಷ್ಟಿಸಲು ಮುಂದಾಗಿವೆ. ಪ್ರಕರಣದ ಸಮಗ್ರ ತನಿಖೆÉ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಬೇಕೆಂದು ನರಸಿಂಹ ಆಗ್ರಹಿಸಿದರು.

ಬಜರಂಗದಳದ ಜಿಲ್ಲಾ ಸಂಚಾಲಕ ಎನ್.ಕೆ. ಅಜಿತ್ ಕುಮಾರ್ ಮಾತನಾಡಿ, ಗೋಹತ್ಯೆ ಯಂತಹ ಪ್ರಕರಣಗಳಿಗೆ ಪೆÀÇಲೀಸರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ದುರ್ಬಲ ಅಧಿಕಾರಿಗಳ ಅಸಹಾಯಕತೆಯಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆಯೆಂದು ಆರೋಪಿಸಿದರು. ದಕ್ಷ ಅಧಿಕಾರಿ ಗಳನ್ನು ಪೊಲೀಸ್ ಠಾಣೆಗಳಿಗೆ ನೇಮಿಸುವಂತೆ ಒತ್ತಾಯಿಸಿದರು. ನೆಲ್ಯಹುದಿಕೇರಿ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪÀÅರ ಠಾಣಾಧಿಕಾರಿ ವಾಹನವನ್ನು ವಶಪಡಿಸಿಕೊಳ್ಳದೆ, ಆರೋಪಿಗಳನ್ನು ಬಂಧಿಸದೆ, ಗೋ ಸಾಗಾಟಗಾರರ ಪರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಟೀಕಿಸಿದರು.

ಗೋರಕ್ಷಕ್ ಸಮಿತಿಯ ಅಧ್ಯಕ್ಷ ಕಂಠಿ ಕಾರ್ಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದ್ದರೂ ಪೆÀÇಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು. ರಾಜಕೀಯ ಒತ್ತಡ ಮತ್ತು ಆಮಿಷಗಳಿಗೆ ಪೆÇಲೀಸರು ಬಲಿಯಾಗುತ್ತಿದ್ದಾರೆ. ನೆಲ್ಯಹುದಿಕೇರಿ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರಲ್ಲದವರು ಗೋ ಸಾಕಾಣಿಕೆಯ ಹೇಳಿಕೆ ನೀಡಿದ್ದಾರೆ. ಇದೀಗ ದೇವಾಲಯದ ಗೇಟ್‍ನಲ್ಲಿ ಗೋವಿನ ಕಾಲುಗಳನ್ನು ನೇತು ಹಾಕುವ ಮೂಲಕ ಅತ್ಯಂತ ಕೀಳಾಗಿ ನಡೆದುಕೊಂಡಿದ್ದಾರೆ. ಮರೆಯಲ್ಲಿ ಈ ಕಾರ್ಯ ಮಾಡುತ್ತಿರುವವರು ಸಾರ್ವಜನಿಕವಾಗಿ ಎದುರಿಗೆ ಬರಲಿ ಎಂದು ಕಂಠಿ ಕಾರ್ಯಪ್ಪ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಅಧ್ಯಕ್ಷÀ ಟಾಟಾ ಬೋಪಯ್ಯ, ಬಜರಂಗದಳದ ಸಹ ಸಂಚಾಲಕ ಕೆ.ಹೆಚ್. ಚೇತನ್ ಹಾಗೂ ವೀರಾಜಪೇಟೆ ಅಧ್ಯಕ್ಷ ಜಗತ್ ಉಪಸ್ಥಿತರಿದ್ದರು.

ವೀರಾಜಪೇಟೆ : ಕಕ್ಕಬೆಯ ನಿಟ್ಟುಮಾಡು ಭಗವತಿ ದೇವಾಲಯದ ಕಮಾನು ಗೇಟಿಗೆ ಗೋಣಿಚೀಲದಲ್ಲಿ ಜಾನುವಾರು ಕಾಲುಗಳನ್ನು ಕಿಡಿಗೇಡಿಗಳು ನೇತು ಹಾಕಿದ್ದುದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಇಂದು ಇಲ್ಲಿನ ಗಡಿಯಾರ ಕಂಬದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ ಅವರು ಡಿವೈಎಸ್‍ಪಿ ನಾಗಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಈ ಪ್ರಕರಣ ಹಿಂದೂ ಜಾಗರಣಾ ವೇದಿಕೆ ಖಂಡಿಸುತ್ತದೆ. ಇದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮತ್ತು ಜಿಲ್ಲೆಯಲ್ಲಿ ಶಾಂತಿ ಕದಡುವ ಯತ್ನವಾಗಿದೆ. ದುಶ್ಕøತ್ಯ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟವನ್ನು ನಡೆಸಲಾಗುವದೆಂದು ತಿಳಿಸಲಾಗಿದೆ.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕ ಐನಂಡ ಲಾಲ ಅಯ್ಯಣ್ಣ, ನಗರ ಅಧ್ಯಕ್ಷ ಚಂದ್ರನ್, ತಾಲೂಕು ಸಂಚಾಲಕ ಯೋಗೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್, ಭಜರಂಗದಳದ ನಗರ ಅಧ್ಯಕ್ಷ ನಾಗೇಶ್, ಬಿಜೆಪಿ ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಫೆಡರೇಷನ್ ಉಪಾಧ್ಯಕ್ಷ ಮಧು ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.

ರಸ್ತೆ ತಡೆ-ಪ್ರತಿಭಟನೆ

ಸೋಮವಾರಪೇಟೆ: ಪ್ರಕರಣವನ್ನು ಖಂಡಿಸಿ, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿ ಗಳು ಮಾದಾಪುರ ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ಸೋಮವಾರಪೇಟೆ-ಮಡಿಕೇರಿ ಮುಖ್ಯರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಜಿಲ್ಲೆಯಿಂದ ಗಡೀಪಾರು ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ದರ್ಶನ್ ಜೋಯಪ್ಪ, ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲಿನ ಧಾಳಿ ಖಂಡನೀಯ. ಜಿಲ್ಲೆಯಲ್ಲಿರುವ ಕೆಲ ಮತಾಂಧರು ಇಂತಹ ದುಷ್ಕøತ್ಯಕ್ಕೆ ಕೈಹಾಕಿದ್ದಾರೆ. ಕೋಮು ಭಾವನೆಯನ್ನು ಕೆರಳಿಸಿ ಗಲಭೆಗೆ ಹವಣಿಸುತ್ತಿರುವ ಇಂತಹ ದುಷ್ಟಶಕ್ತಿಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಆರೋಪಿಗಳನ್ನು ತಕ್ಷಣ ಬಂಧಿಸಿ ಗಡೀಪಾರು ಮಾಡಬೇಕು. ತಪ್ಪಿದಲ್ಲಿ ಕೊಡಗು ಜಿಲ್ಲೆಯಾದ್ಯಂತ ಹೋರಾಟ ವನ್ನು ತೀವ್ರಗೊಳಿಸಲಾಗುವದು ಎಂದು ದರ್ಶನ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಹ ಸಂಚಾಲಕ ಸುನಿಲ್, ಪ್ರಮುಖರಾದ ರವಿ ಕರ್ಕಳ್ಳಿ, ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿಷೇಧಕ್ಕೆ ಬಿಜೆಪಿ ಆಗ್ರಹ

ಸೋಮವಾರಪೇಟೆ: ಕೊಡಗಿನಲ್ಲಿ ನಿರಂತರವಾಗಿ ಅಶಾಂತಿ ಸೃಷ್ಟಿಸಲು ಹವಣಿಸುತ್ತಿರುವ, ಕೇರಳದಲ್ಲಿ ಲವ್ ಜಿಹಾದ್ ನಡೆಸಲು ಪ್ರಮುಖ ಪಾತ್ರ ವಹಿಸುತ್ತಿರುವ ಪಿ.ಎಫ್.ಐ. ಸಂಘಟನೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಗೋವುಗಳನ್ನು ಕಳ್ಳತನ ಮಾಡಿ ವಧೆ ನಡೆಸುವ ದುಷ್ಕøತ್ಯ ನಡೆಯುತ್ತಲೇ ಇದೆ. ಇದರೊಂದಿಗೆ ಗೋವುಗಳನ್ನು ಅಕ್ರಮವಾಗಿ ಸಾಗಿಸುವ ಬೃಹತ್ ಜಾಲವೂ ಕಾರ್ಯಾಚರಿಸುತ್ತಿದ್ದು, ಇಂತಹ ಸಮಾಜ ವಿರೋಧಿ ಕೃತ್ಯ ನಡೆಸುವವರಿಗೆ ಪಿಎಫ್‍ಐ ಬೆಂಬಲ ವಾಗಿ ನಿಂತಿದೆ ಎಂದು ಆರೋಪಿಸಿದರು.

ಹಿಂದೂಗಳ ಮನಸ್ಸಿಗೆ ಘಾಸಿ ಮಾಡುವ ಗೋ ಹತ್ಯೆಯಂತಹ ಕೃತ್ಯಗಳನ್ನು ಪದೇ ಪದೇ ನಡೆಸುತ್ತ ಸಕ್ರಿಯರಾಗಿರುವ ಕಿಡಿಗೇಡಿಗಳಿಗೆ ಪಿ.ಎಫ್.ಐ. ನಿರಂತರ ಬೆಂಬಲ ನೀಡುತ್ತಿದೆ. ಕೇರಳದಲ್ಲಿ ಲವ್ ಜಿಹಾದ್ ಮೂಲಕ ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿರುವದರ ಹಿಂದೆ ಪಿ.ಎಫ್.ಐ. ಸಂಘಟನೆಯ ಕೈವಾಡ ಇದೆಯೆಂದು ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ ತಿಳಿದು ಬಂದಿದೆ. ಜಿಲ್ಲೆಯಲ್ಲೂ ತನ್ನ ಕಬಂಧಬಾಹುವನ್ನು ವಿಸ್ತರಿಸುತ್ತಿರುವ ಪಿ.ಎಫ್.ಐ. ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವದೇ ಸೂಕ್ತ ಎಂದು ಅಭಿಪ್ರಾಯಿಸಿದರು.

ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳು ಯಾವದೇ ಧರ್ಮಕ್ಕೆ ಸೇರಿದ್ದರೂ ಅವರನ್ನು ತಕ್ಷಣವೇ ಬಂಧಿಸಬೇಕು. ಗೌರಿ ಗಣೇಶ, ಬಕ್ರೀದ್ ಹಬ್ಬ ನಡೆಯುತ್ತಿರುವ ಸಂದರ್ಭ ಕೊಡಗಿನಲ್ಲಿ ಶಾಂತಿ ಸಾಮರಸ್ಯವನ್ನು ಕದಡಲು ಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ತಕ್ಷಣವೇ ಪೋಲಿಸ್ ಇಲಾಖೆ ಬಂಧಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗಣೇಶ್, ನಗರ ಬಿಜೆಪಿ ಅಧ್ಯಕ್ಷ ಎಸ್.ಆರ್. ಸೋಮೇಶ್ ಉಪಸ್ಥಿತರಿದ್ದರು.

ಜೆಡಿಎಸ್ ಖಂಡನೆ

ನಾಪೆÇೀಕ್ಲು: ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿದ ಅವರು ಕೊಡಗಿನ ಜನ ಶಾಂತಿ ಸೌಹಾರ್ದತೆಯಿಂದ ಬದುಕುವದನ್ನು ಸಹಿಸದ ಕಿಡಿಗೇಡಿಗಳು ಇಲ್ಲಿ ಮತೀಯ ಕಲಹವನ್ನು ಸೃಷ್ಟಿಸುವ ಸಂಚು ಹೂಡಿದ್ದಾರೆ. ಇವರ ಸಂಚಿಗೆ ನಾವು ಬಲಿಪಶುಗಳಾಗುವದಿಲ್ಲ. ಅಶಾಂತಿ ಕದಡುವವರ ವಿರುದ್ಧ ಪೆÇಲೀಸರು ಜಾತಿ, ಮತ, ಧರ್ಮದ ಬೇಧವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದಿದ್ದಾರೆ.