ಮಡಿಕೇರಿ, ಆ. 31: ಇತ್ತೀಚೆಗೆ ಗೋವದ ಪಣಜಿಯ ಕಂಪಾಲ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಓಪನ್ ಅಂತರಾಷ್ಟ್ರೀಯ ಏರೋಬಿಕ್ಸ್ ಹಿಪ್ ಹಾಪ್ ಚಾಂಪಿಯನ್ ಶಿಪ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸಿಗ್ನೇಚರ್ ತಂಡ 3 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದುಕೊಂಡಿದೆ.

ಕೊಡಗಿನ ರಾಹುಲ್ ಎಸ್. ರಾವ್, ರಾಶಿ ಎಸ್. ರಾವ್ ಹಾಗೂ ಯಶಸ್ವಿನಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಅದರಲ್ಲೂ ರಾಹುಲ್ ರಾವ್ ತಂಡ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಪಡೆದು ಗಮನ ಸೆಳೆದರು. 92 ಸ್ಪರ್ಧಿಗಳನ್ನು ಮಣಿಸಿ ಅತ್ಯುತ್ತಮ ಆಟಗಾರನಿಗೆ ನೀಡುವ ಫಿಟ್‍ನೆಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

14 ವರ್ಷದೊಳಗಿನವರ ಹಿಪ್ ಹಾಪ್ ವಿಭಾಗದಲ್ಲಿ ಕುಶಾಲ್ ಅಣ್ವೇಕರ್, ವಿಶಾಲ್ ಅಣ್ವೇಕರ್, ತರುಣ್ ಎಸ್. ಕುಶಾಲ್ ಜಿ. ಹಾಗೂ ತರುಣ್ ಸಂತೋಷ್ ಅವರುಗಳಿದ್ದ ತಂಡ ಚಿನ್ನಗಳಿಸಿದರೆ. 19 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನ ಪಡೆದ ತಂಡದಲ್ಲಿ ರಾಹುಲ್ ರಾವ್, ಶಿವಶಂಕರ್, ರಾಶಿ ರಾವ್, ಯಶಸ್ವಿನಿ ಹಾಗೂ ಲಿಖಿತ ಎಸ್ ಇದ್ದರು

ಕರ್ನಾಟಕ ಸ್ಪೋಟ್ರ್ಸ್ ಏರೋಬಿಕ್ಸ್ ಸಂಸ್ಥೆಯ ಕಾರ್ಯದರ್ಶಿ ರವಿ ಸಿ. ತರಬೇತುದಾರ ವಿನೋದ್ ಕರ್ಕೇರಾ, ತಾಂತ್ರಿಕ ನಿರ್ದೇಶಕ ವಿಜಯ್ ಕುಮಾರ್ ಹಾಗೂ ವ್ಯವಸ್ಥಾಪಕ ಸಂತೋಷ್ ಕುಮಾರ್ ತಂಡದ ಜೊತೆಗೆ ತೆರಳಿದ್ದರು.