ಮಡಿಕೇರಿ, ಆ. 31: ಜಿಲ್ಲ್ಲೆಯಲ್ಲಿ ಹೋಂಸ್ಟೇಗಳ ವ್ಯವಹಾರ ಈಗೆಲ್ಲ ಆನ್‍ಲೈನ್‍ಮಯ. ಅಧಿಕೃತ ನೊಂದಾವಣೆಗೆ ಪ್ರÀವಾಸೋದ್ಯಮ ಇಲಾಖೆಯ ಣಚಿಥಿಜಿ.iಟಿ/hs ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೊಡಗಿನಲ್ಲಿ ಪ್ರಸ್ತುತ 638 ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಈ ಪೈಕಿ ನೋಂದಾವಣೆ ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸಿದವರು 291 ಮಂದಿ ಮಾತ್ರ. ಉಳಿದವರು ಶುಲ್ಕ ಪಾವತಿಸಿದರೆ ಮಾತ್ರ ಅಂಗೀಕರಿಸಲ್ಪಡುತ್ತದೆ. ಈ ಅರ್ಜಿಗಳ ಪೈಕಿ ಹಲವು ವಿಲೇವಾರಿಗೊಂಡಿದ್ದು ಅನೇಕ ಅರ್ಜಿ ನಮೂನೆಗಳೊಂದಿಗೆ ಅಗತ್ಯ ಲಗತ್ತ್ತಿಸಬೇಕಾದ ದಾಖಲಾತಿಗಳು ಅರ್ಜಿದಾರರ ಅನುಭವ ಕೊರತೆಯಿಂದಾಗಿ ಸ್ಕ್ಯಾನಿಂಗ್ ಸಮರ್ಪಕವಾಗಿ ಮಾಡದೆ ತೊಡಕುಂಟಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಹಂಗಾಮಿ ಸಹಾಯಕ ನಿರ್ದೇಶಕ ಜಗನ್ನಾಥ್ “ಶಕ್ತಿ”Àಗೆ ಮಾಹಿತಿಯಿತ್ತರು. ಸಮರ್ಪಕವಾಗಿ ಸ್ಕ್ಯಾನಿಂಗ್ ಮಾಡದೆ ಯಾವದೆ ಅಗತ್ಯ ದಾಖಲಾತಿಗಳು ಗ್ರಹಿಸಲು, ಓದಲು ಸಾಧ್ಯವಾಗುತ್ತಿಲ್ಲ. ತೀರಾ ಅಸ್ಪಷ್ಟವಾಗಿವೆ ಎಂದು “ಶಕ್ತಿ”ಗೆ ಕಂಪ್ಯೂಟರ್ ಮೂಲಕವೇ ತೋರಿಸಿದರು.

ಇದೀಗ ಅಸ್ಪಷ್ಟ ಮಾಹಿತಿ ಒದಗಿಸಿದ ಅರ್ಜಿದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಪಷ್ಟತೆಯಿರುವ ದಾಖಲಾತಿಯನ್ನು ಅಪ್‍ಲೋಡ್ ಮಾಡುವಂತೆ ಸೂಚಿಸುತ್ತಿರುವದಾಗಿ ಅವರು ತಿಳಿಸಿದರು. ಅರ್ಜಿಗಳ ಪರಿಶೀಲನೆ, ಸಂಶಯಗಳಿದ್ದರೆ ಹೋಂಸ್ಟೇಗಳಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಬಳಿಕ ಸಮರ್ಪಕವೆಂದು ಕಂಡುಬಂದ ಅರ್ಜಿಗಳನ್ನು ಅಂಗೀಕರಿಸಿ, ಪರಿಶೀಲಿಸಿ ಪರವಾನಗಿ ನೀಡಲು ಜಿಲ್ಲಾಧಿಕಾರಿಯವರು ಇತ್ತೀಚೆಗೆ ನೀಡಿರುವ ನಿರ್ದೇಶನದ ಮೇರೆಗೆ ಆನ್‍ಲೈನ್ ಮೂಲಕವೇ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ನೋಂದಾವಣೆ ಪ್ರಕ್ರಿಯೆ ಪೂರ್ಣಗೊಂಡು ಅರ್ಜಿದಾರರಿಗೆ ನೋಂದಾಯಿತ ಪರವಾನಗಿ ಲಭ್ಯವಾಗುತ್ತದೆ. ಇದನ್ನು ಮಾಲೀಕರು ಖುದ್ದಾಗಿ ಕಚೇರಿಗೆ ಬಂದು ಪಡೆಯಬೇಕಿದೆ. ಪ್ರಸ್ತುತ ಪ್ರವಾಸೋದ್ಯಮ ನೀತಿಯನ್ವಯ ಹೋಂಸ್ಟೇಗಳಲ್ಲಿ ಗರಿಷ್ಠ 5 ಕೊಠಡಿಗಳ ಪರಿಮಿತಿ ಕಲ್ಪಿಸಲಾಗಿದೆ. ಐದಕ್ಕಿಂತ ಅಧಿಕ ಕೊಠಡಿಗಳಿಗೆ ಅವಕಾಶವಿಲ್ಲ. ಈ ಹಿಂದೆ ಇದ್ದಂತೆ ಕೊಠಡಿಗಳ ಅಳತೆಗಳಿಗೆ ನಿರ್ಬಂಧ ವಿಧಿಸಿಲ್ಲ. ಆದರೆ ಓರ್ವ ವ್ಯಕ್ತಿ ಒಂದು ಹೋಂಸ್ಟೇಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದೆ.

ಮಡಿಕೇರಿ ತಾಲೂಕಿನಿಂದ 153, ಸೋಮವಾರಪೇಟೆ ತಾಲೂಕಿನಿಂದ 48 ಹಾಗೂ ವೀರಾಜಪೇಟೆ ತಾಲೂಕಿನಿಂದ 90 ಅರ್ಜಿಗಳು ಇದುವರೆಗೆ ಸಮರ್ಪಕವಾಗಿ ಸಲ್ಲಿಸಲ್ಟಟ್ಟಿವೆ ಎಂದು ಜಗನ್ನಾಥ್ ವಿವರಿಸಿದರು.

(ಮೊದಲ ಪುಟದಿಂದ) ಸೋಮವಾಪೇಟೆ ಹೋಂಸ್ಟೇ ಸಂಘದ ವತಿಯಿಂದ ಈ ಕುರಿತಾಗಿ ಸಭೆಗಳನ್ನು ಏರ್ಪಡಿಸಿ ಹೊಸ ನೋಂದಾವಣೆ ಕ್ರಮಗಳ ಬಗ್ಗೆ ಅರಿವು ನೀಡಲಾಗಿದೆ. ಜಿಲ್ಲೆಯ ಇನ್ನಿvರÀ ಹಲವೆಡೆಯೂ ಸಭೆ ನಡೆಸಲಾಗಿದೆ ಎಂದರು.

ಎಸ್.ಪಿ. ಸ್ಪಷ್ಟನೆ

ಹೋಂಸ್ಟೇ ಮಾಲೀಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಿಂದ ನಿರಾಕ್ಷೇಪಣಾ ದೃಢೀಕರಣ ಪತ್ರವನ್ನು ಪಡೆಯಬೇಕಿದೆ. ಈ ಬಗ್ಗೆ ಎಸ್.ಪಿ. ರಾಜೇಂದ್ರ ಪ್ರಸಾದ್ ಅವರಿಂದ ಮಾಹಿತಿ ಬಯಸಿದಾಗ ಹೋಂಸ್ಟೇ ಮಾಲೀಕರಿಗೆ ವಿಳಂಬವಿಲ್ಲದಂತೆ ಇಲಾಖೆಯಿಂದ ದೃಢೀಕರಣ ಪತ್ರ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಮುಖ್ಯವಾಗಿ ಸಿ.ಸಿ. ಟಿವಿ ಅಳವಡಿಸಿರಬೇಕು, ಅತಿಥಿ ಪ್ರವಾಸಿಗರ ಮಾಹಿತಿಯಿರುವ ಡೈರಿ ನಿರ್ವಹಿಸಬೇಕು. ವಿದೇಶೀ ಪ್ರವಾಸಿಗರ ಕುರಿತು ಇಲಾಖೆಗೆ ಮೊದಲೇ ಮಾಹಿತಿ ನೀಡಬೇಕು ಎಂದು ಮಾಹಿತಿಯಿತ್ತರು. ಅನಧಿಕೃತ ಹೊಂಸ್ಟೇಗಳ ಕುರಿತು ಪ್ರಶ್ನಿಸಿದಾಗ ಇಲಾಖೆಯಿಂದ ಈ ಹಿಂದೆ ಖುದ್ದು ಸ್ಥಳಕ್ಕೆ ತೆರಳಿ ಅನಧಿಕೃತ ಹೋಂಸ್ಟೇಗಳ ಬಗ್ಗೆ ಕ್ರಮ ಕೈಗೊಳ್ಳಲು ಪ್ರಯತ್ನ ನಡೆಸಲಾಗಿದೆ. ಆದರೆ, ಆಯಾ ಸಂದರ್ಭ ಮನೆ ಮಾಲೀಕರು ಇವರು ನಮ್ಮ ಪರಿಚಯಸ್ಥ ಅತಿಥಿಗಳು, ಬಂಧುಗಳು ಎಂದು ಸಮಜಾಯಿಷಿಕೆ ನೀಡುವಾಗ ಇದರ ವಿರುದ್ಧ ಕಾನೂನು ಪ್ರಕಾರ ಬಲಾತ್ಕಾರದ ಕ್ರಮಾನುಸರಣೆ ಅಸಾಧ್ಯ ಎಂದು ವಿವರಿಸಿದರು. ಅಷ್ಟೇ ಅಲ್ಲ, ಕೆಲವೊಮ್ಮೆ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಕೆಲವರು ಮಾಹಿತಿ ನೀಡಿದಾಗ ಅಲ್ಲಿಗೆÀ ತೆರಳಿದ ಪೊಲೀಸರಿಗೆ ಅತಿಥಿಗಳೆನಿಕೊಂಡವರು, ಈಕೆ ನನ್ನ ಪತ್ನಿ ಅಥವ ಬಂಧು, ಇಲ್ಲವೆ ಸಹೋದರಿ ಎಂದು ಹೇಳಿದಾಗ ಮಹಿಳೆಯರ ಯಾವದೇ ವಿರೋಧವಿಲ್ಲದಿದ್ದಾಗ ವೈಯಕ್ತಿಕ ಬದುಕಿನ ಒಳಹೊಕ್ಕು ಕಾನೂನು ಕ್ರಮ ಅಸಾಧ್ಯ ಎಂದು ಎಸ್.ಪಿ. ಸ್ಪಷ್ಟಪಡಿಸಿದರು. ಆದರೆ, ಅನಧಿಕೃತ ಹೋಂಸ್ಟೇ ನಡೆಸುವವರು ಏನಾದರೂ ಅನಾಹುತ ಸಂಭವಿಸಿದರೆ ಬಳಿಕ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಮುನ್ನೆಚ್ಚರಿಕೆಯಿತ್ತ ಅವರು ಈ ಹಿನ್ನೆಲೆಯಲ್ಲಿ ನೋಂದಾವಣೆ ಮೂಲಕ ಅಧಿಕೃತ ವ್ಯವಹಾರ ನಡೆಸುವಂತೆ ಸೂಚಿಸಿದ್ದಾರೆ. ಹೋಂಸ್ಟೇಗಳಿಗೆ ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಗಮನಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದರೆ ಇತರ ವಾಹನಗಳ ಸಂಚಾರಕ್ಕೆ ಧಕ್ಕೆಯಾಗುತ್ತದೆ ಎಂಬ ದೃಷ್ಟಿಯಿಂದ ಈ ವಿಚಾರ ಗಮನಾರ್ಹ. ಹೋಂಸ್ಟೇ ಮಾಲೀಕರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದರೆ ಪೊಲೀಸ್ ಇಲಾಖೆ ನಿರಾಕ್ಷೇಪಣಾ ಪತ್ರ ನೀಡುವದಿಲ್ಲ ಎಂದು ರಾಜೇಂದ್ರ ಪ್ರಸಾದ್ ವಿವರಿಸಿದರು.

ಗ್ರಾ.ಪಂ.ಗಳಿಂದ ಅಧಿಕ ವಸೂಲಾತಿ

ಹೋಂಸ್ಟೇ ಮಾಲೀಕರು ವ್ಯವಹಾರ ನಡೆಸುವ ಸ್ಥಳ ವ್ಯಾಪ್ತಿಯ ಆಯಾ ಸ್ಥಳೀಯ ಸಂಸ್ಥೆಗಳಾದ ಗ್ರ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಅಥವ ನಗರ ಸಭೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವದು ಕಡ್ಡಾಯವಾಗಿದೆ. ಹೋಂಸ್ಟೇ ಸಂಘದ ಸಲಹೆಗಾರರರಾದ ಕರುಂಬಯ್ಯ ಅವರ ಹೇಳಿಕೆಯಂತೆ ಇದೀಗ ನೂತನÀ ನೀತಿಯನ್ವಯ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೋಂಸ್ಟೇಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ರೂ. 500 ರೊಳಗೆ ಶುಲ್ಕ ಪಡೆಯಬೇಕು. ಕೆಲವು ಪಂಚಾಯಿತಿ ಮಟ್ಟಗಳಲ್ಲಿ ಅನವಶ್ಯಕವಾಗಿ ಅಧಿಕ ಶುಲ್ಕ ವಿಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು. ಮಡಿಕೇರಿ ನಗರಸಭಾ ಮಟ್ಟದಲ್ಲಿ ರೂ. 2500 ರೊಳಗೆ ಶುಲ್ಕ ವಸೂಲಿ ಮಾಡಬಹುದಾಗಿದೆ ಎಂದು ಮಾಹಿತಿಯಿತ್ತÀರು. ಕರುಂಬಯ್ಯ ಅವರ ಪ್ರಕಾರ ಅಧಿಕೃತವಾಗಿ ಹೋಂಸ್ಟೇ ನಡೆಸುತ್ತಿರುವವರು ಎಲ್ಲ ರೀತಿಯ ಕಾನೂನು ಬದ್ಧತೆಗೆ ಒಳಗಾಗುತ್ತಾರೆ. ಆದರೆ, ಜಿಲ್ಲೆಯಲ್ಲಿ 2500 ಕ್ಕೂ ಮಿಕ್ಕಿ ಅನಧಿಕೃತ ಹೋಂಸ್ಟೇಗಳು ಅಸ್ತಿತ್ವದಲ್ಲಿದ್ದು ಈ ಮಂದಿಗೆ ಕಾನೂನಿನÀ ಯಾವದೇ ಅಡೆತಡೆಯಿಲ್ಲದೆ ನಿರ್ವಹಣೆಯಾಗುತ್ತಿದೆ ಎಂದು ಆಕ್ಷೇಪಿಸಿದರು.

-“ಚಕ್ರವರ್ತಿ”