ಗೋಣಿಕೊಪ್ಪಲು, ಸೆ. 2: ಇಲ್ಲಿನ ಕಾವೇರಿ ಕಾಲೇಜು ಬಿಸಿಎ ವಿಭಾಗದಿಂದ ರಾಜ್ಯಮಟ್ಟದ ಪಿಯುಸಿ ಹಾಗೂ ಬಿಸಿಎ ವಿದ್ಯಾರ್ಥಿಗಳಿಗಾಗಿ ಕಾವೇರಿ ಅಚಿಂತ್ಯಾ ಟೆಕ್‍ಫೆಸ್ಟ್ - 17 ಸ್ಪರ್ಧೆಯನ್ನು ತಾ. 13 ರಂದು ನಡೆಸಲಾಗುವದು ಎಂದು ಪ್ರಾಂಶುಪಾಲ ಪೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪರ್ಧೆಯನ್ನು ಕಾವೇರಿ ಕಾಲೇಜು ಸಂಸ್ಥೆ 5 ವರ್ಷಗಳಿಂದ ಆಯೋಜಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಅಡಗಿರುವ ಕಂಪ್ಯೂಟರ್ ಜ್ಞಾನವನ್ನು ಹೊಂದಲು ಉತ್ತಮ ವೇದಿಕೆಯಾಗಲಿದೆ. ಸ್ಪರ್ಧೆಗಳು ಕಾಲೇಜಿನ ಚಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು.

ಬಿಸಿಎ ವಿಭಾಗದ ಮುಖ್ಯಸ್ಥ ಪೆಮ್ಮಯ್ಯ ಮಾತನಾಡಿ, ಪಿಯುಸಿ ವಿಭಾಗದ ವಿಜ್ಞಾನ, ಕೆಮೆಸ್ಟ್ರಿ, ಕಾಮರ್ಸ್ ವಿಭಾಗದ ಕಂಪ್ಯೂಟರ್ ವಿಜ್ಞಾನದ ವಿದ್ಯಾರ್ಥಿಗಳಿಗೆ ಅರ್ಟಿಫ್ಯಾಕ್ಟ್ ಲಿಫ್ಟ್ ಆಫ್, ಪೇಪರ್ ಪ್ಯಾಪಿರೋರ್, ಐಕ್ಯು ಪಿಂಗ್, ಬಾಂಬ್ ಶೆಲ್, ಗೇಮ್ ಓನ್, ಜಸ್ಟ್ ಡ್ಯಾನ್ಸ್, ಸ್ಕ್ಯಾವೆಂಜರ್ ಹಂಟ್ ಸ್ಪರ್ಧೆ ನಡೆಯಲಿದೆ.

ಬಿಸಿಎ ವಿದ್ಯಾರ್ಥಿಗಳಿಗಾಗಿ ವೆಬ್ ಮ್ಯಾರಥಾನ್, ಅಲ್ಟಿಮೆಟ್ ಕೊಡರ್, ಐಕ್ಯು ಪಿಂಗ್, ಗೇಮ್ ಓನ್, ಶೂಟ್ ದ ಮೆಮೋರಿಸ್, ಜಸ್ಟ್ ಡ್ಯಾನ್ಸ್, ಸ್ಕ್ಯಾವೆಂಜರ್ ಹಂಟ್ ಹೀಗೆ 7 ಸ್ಪರ್ಧೆಗಳನ್ನು ನಡೆಸಲಾಗುವದು ಎಂದರು.

ಕಳೆದ ಬಾರಿ ಮೈಸೂರು, ಮಂಗಳೂರು ವಿಭಾಗಗÀಳಿಂದ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈಗಾಗಲೇ ಸುಮಾರು 25 ಕ್ಕೂ ಹೆಚ್ಚಿನ ಕಾಲೇಜುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.