ಸೋಮವಾರಪೇಟೆ, ಸೆ. 2: ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜ ನೋತ್ಸವ ತಾ. 3ರಂದು (ಇಂದು) ನಡೆಯಲಿದೆ. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ರಾತ್ರಿ ಮೆರವಣಿಗೆಯ ಮೂಲಕ ಚೌಡ್ಲು ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ ಇದರೊಂದಿಗೆ ಕಕ್ಕೆಹೊಳೆ ವಿದ್ಯಾ ಗಣಪತಿ ಸೇವಾ ಸಮಿತಿ, ಆಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘ, ಸೋಮೇಶ್ವರ ದೇವಾಲಯ, ಮಾನಸ ಹಾಲ್ ಸಮೀಪದ ಜೈ ಭಾರತ್ ಯುವಕ ಸಂಘ, ಕರ್ಕಳ್ಳಿ ಕಟ್ಟೆ ಬಸವೇಶ್ವರ ದೇವಸ್ಥಾನ ಸಮಿತಿ, ಚೌಡ್ಲು ಸಿದ್ದಿ ವಿನಾಯಕ ಯುವಕ ಸಂಘ, ಕಿಬ್ಬೆಟ್ಟ ಚೌಡೇಶ್ವರಿ ಯುವಕ ಸಂಘ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪ್ರತಿಷ್ಠಾಪಿ ಸಲಾಗಿರುವ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ.

(ಮೊದಲ ಪುಟದಿಂದ)

ಮದ್ಯ ಮಾರಾಟ ನಿಷೇಧ : ಈ ಸಂಬಂಧ ಶಾಂತಿಯುತ ಕಾರ್ಯಕ್ರಮಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ತಾ. 2ರ ಮಧ್ಯರಾತ್ರಿಯಿಂದ ತಾ. 4ರ ಬೆಳಿಗ್ಗೆ 6 ಗಂಟೆಯವರೆಗೆ ಸೋಮವಾರಪೇಟೆಯ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಶಿಫಾರಸ್ಸಿನ ಮೇರೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಈ ಆದೇಶ ಹೊರಡಿಸಿದ್ದಾರೆ.

20 ಸಿಸಿ ಕಣ್ಗಾವಲು : ಗೌರಿ - ಗಣೇಶೋತ್ಸವ ವಿಸರ್ಜನಾ ಮಹೋತ್ಸವ ಶಾಂತಿಯುತವಾಗಿ ನೆರವೇರಲು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪೊಲೀಸ್ ಗೃಹ ರಕ್ಷಕ ಸಿಬ್ಬಂದಿಗಳು ಸೇರಿದಂತೆ 150ಕ್ಕೂ ಅಧಿಕ ಮಂದಿಯನ್ನು ನಿಯೋಜಿಸಲಾಗಿದೆ. ನಗರದ ಆಯಾ ಕಟ್ಟಿನ ಸ್ಥಳಗಳಲ್ಲಿ ಈಗಾಗಲೇ 8 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವಿಸರ್ಜನೋತ್ಸವಕ್ಕಾಗಿಯೇ 12 ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.

ವೀರಾಜಪೇಟೆ : ಗೌರಿ ಗಣೇಶೋತ್ಸವ ಪ್ರಯುಕ್ತ ತಾ. 3 ರಂದು (ಇಂದು) ಇಲ್ಲಿನ ಜೈನರಬೀದಿಯಲ್ಲಿರುವ ಬಸವೇಶ್ವರ ದೇವಾಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯಿಂದ ರಾತ್ರಿ 9.30ಗಂಟೆಗೆ

ಮೈಸೂರಿನ ಖ್ಯಾತ ಎಂ.ಪಿ. ಪ್ರಕಾಶ್ ನಿರ್ದೇಶನದ ‘ವಾಯ್ಸ್ ಆಫ್ ಮೈಸೂರು’ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾ. 4ರಂದು ಸೋಮವಾರ ರಾತ್ರಿ 9.30 ಗಂಟೆಗೆ ಖ್ಯಾತ ತರೀಕೆರೆಯ ದಶರಥ ನಿರ್ದೇಶನದಲ್ಲಿ ‘ಗೀತಾಂಜಲಿ ಆರ್ಕೆಸ್ಟ್ರಾ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾ. 4 ರಂದು ಸೋಮವಾರ ದಖ್ಖನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿಯಿಂದ ರಾತ್ರಿ ಮಹಾ ಪೂಜಾ ಸೇವೆಯ ಬಳಿಕ 7.30 ಗಂಟೆಗೆÀ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಿ.ಜಿ. ಕೇಶವ ತಿಳಿಸಿದ್ದಾರೆ.