ವೀರಾಜಪೇಟೆ, ಸೆ. 1: ತೂಕ್‍ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವತಿಯಿಂದ ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಆಯೋಜಿಸಿ ರುವ ಜಿಲ್ಲಾ ಮಟ್ಟದ ನೃತ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಪುರಭವನದಲ್ಲಿ ನಡೆಯಿತು.

ಮುಲ್ಲೆಂಗಡ ಶಂಕರಿ ಪೂವಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಹಲವಾರು ಕಲೆ ಪ್ರತಿಭೆಗಳ ಕಲಾವಿದರಿದ್ದಾರೆ. ಅಂತಹ ಪ್ರತಿಭೆಗಳನ್ನು ಬೆಳಕಿಗೆ ತಂದು ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವದು ಸಂಸ್ಥೆಯ ಉದ್ದೇಶವಾಗಿದೆ. ಕಳೆದ ಬಾರಿ ವೀರಾಜಪೇಟೆ ತಾಲೂಕಿನ ಕಂಡಂಗಾಲ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ವೀರಾಜಪೇಟೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವೀರಾಜಪೇಟೆ ಪಟ್ಟಣ ಯಾವ ರೀತಿ ಉದಯವಾಯಿತು. ಅದರ ಸುತ್ತ ಯಾವ ಗ್ರಾಮಗಳಿದೆ ಅವುಗಳ ಪರಿಚಯವನ್ನು ಮಾಡಿ ಕೊಡಲಾಗುವದು. ಗ್ರಾಮದ ಹಿರಿಯ ಚೇತನಗಳ ದ್ವಾರವನ್ನು ನಿರ್ಮಿಸ ಲಾಗುವದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕವನ್ನು ನೀಡಲಾಗುವದು ಎಂದು ಹೇಳಿದರು. ವೇದಿಕೆಯಲ್ಲಿ ಪ. ಪಂ. ಅಧ್ಯಕ್ಷ ಇ.ಸಿ ಜೀವನ್, ಅಪ್ಪನೆರವಂಡ ಶಾಂತಿ ಅಚ್ಚಪ್ಪ, ರಾಜ್ಯ ಪ್ರಶಸ್ತಿ ವಿಜೇತ ಎಸ್.ಎಲ್ ಶಿವಣ್ಣ, ನೆಲ್ಲಮಕ್ಕಡ ಮೊಣ್ಣಪ್ಪ, ಮೇಕತಂಡ ಕಾವೇರಪ್ಪ, ಪುಲಿಯಂಡ ಪೊನ್ನಪ್ಪ ಉಪಸ್ಥಿತರಿದ್ದರು.