ಗೋಣಿಕೊಪ್ಪಲು, ಸೆ. 2: ಜಪಾನ್ ಹಾಗೂ ಭಾರತೀಯ ಸಂಸ್ಕøತಿಯನ್ನು ಅನಾವರಣ ಪಡಿಸುವ ಮೂಲಕ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮ ಇಲ್ಲಿನ ಕಾಪ್ಸ್ ಶಾಲೆಯಲ್ಲಿ ನಡೆಯಿತು.

ಅಂತರಾಷ್ಟ್ರೀಯ ಗೆಳೆಯರ ಸಂಘ (ಫೀಕೋ) ಸಂಸ್ಥೆ ಆಯೋಜಿಸಿದ್ದ ಭಾರತ ಅನುಭವ -2017 ರಂತೆ ಶಾಲೆಯ ಕಲಾಮಂಚ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಪಾನ್ ತಂಡದವರು ಜಪಾನಿನ ಪ್ರಸಿದ್ದ ‘ಚಿಗರಿಯೇ’ ಎಂಬ ಕರಕುಶಲ ಕಲೆಯನ್ನು ಅನಾವರಣಗೊಳಿಸಿದರು. ಕಾಪ್ಸ್ ಶಾಲಾ ವಿದ್ಯಾರ್ಥಿಗಳು ಪಂಜಾಬ್ ಸೇರಿದಂತೆ ಭಾರತೀಯ ಕಲೆ ಹಾಗೂ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ನೃತ್ಯಗಳು ಅನಾವರಣಗೊಳಿಸಿದರು. ಜಪಾನಿನ ನಾಗೋಯದ ಗುಡ್‍ವಿಲ್ ಸೇವಾ ಸಂಸ್ಥೆಯ ರಾಯಬಾರಿ ಡಾ.ಜಿ. ಉಪೇಂದ್ರ ರೆಡ್ಡಿ ನೇತೃತ್ವದಲ್ಲಿ ಜಪಾನ್ ತಂಡವು ಭೆÉೀಟಿ ನೀಡಿತ್ತು.

ಜಪಾನ್ ಪ್ರತಿನಿಧಿಗಳನ್ನು ಕಾಪ್ಸ್ ಆವರಣದಲ್ಲಿ ಕೊಡಗಿನ ಸಂಪ್ರದಾಯದಂತೆ ವಾಲಗದ ಮೂಲಕ ಸ್ವಾಗತಿಸಲಾಯಿತು. ಕಾಪ್ಸ್ ಪ್ರಾಂಶುಪಾಲೆ ಡಾ. ಎನ್.ಎ. ಬೊಳ್ಳಮ್ಮ ಉಪಸ್ಥಿತರಿದ್ದರು.