ಮಡಿಕೇರಿ, ಸೆ. 1 : ಸಿ.ಎನ್.ಸಿ. ವತಿಯಿಂದ 22ನೇ ವರ್ಷದ ಸಾರ್ವತ್ರಿಕ ಕೈಲ್ ಪೊಳ್ದ್ ನಮ್ಮೆ ಪ್ರಯುಕ್ತ ಮಡಿಕೇರಿಯಲ್ಲಿ ವಾಹನ ಮೆರವಣಿಗೆ ನಡೆಯಿತು ಮತ್ತು ಸಂಭ್ರಮದ ಕೈಲ್ ಪೊಳ್ದ್ ನಮ್ಮೆ ಕೊಡವ ಸಾಂಪ್ರದಾಯಿಕ ವಿಧಿ ವಿಧಾನದಂತೆ ನಡೆಯಿತು.

ಕೊಡವ ಲ್ಯಾಂಡ್ ಹೋರಾಟಕ್ಕೆ ಪೂರಕವಾದ ಬುಡಕಟ್ಟು ಕುಲದ ಮಾನ್ಯತೆ, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್‍ಗೆ ಸೇರ್ಪಡೆ ಕೊಡವರ ಸ್ವಯಂ ನಿರ್ಣಯ ಹಕ್ಕು ಸಂಬಂಧ 13 ಹಕ್ಕೊತ್ತಾಯಗಳ ಗುರಿ ಸಾಧನೆಯಾಗುವಲ್ಲಿಯವರೆಗೆ ವಿಚಲಿತರಾಗದೆ ಅಚಲವಾಗಿ ಮತ್ತು ನಿರಂತರವಾಗಿ ಚಳುವಳಿ ಮುಂದುವರೆಸುವ ನಿರ್ಣಯದ ಪ್ರತಿಜ್ಞೆಯನ್ನು ಸಿ.ಎನ್.ಸಿ. ಅಧ್ಯಕ್ಷ ಎನ್.ಯು ನಾಚಪ್ಪ ನೇತೃತ್ವದಲ್ಲಿ ಕೈಗೊಳ್ಳಲಾಯಿತು.

ಇತಿಹಾಸ ಗರ್ಭದಲ್ಲಿ ಕೊಡವ ಜನಪದದ ಉಜ್ವಲ ಮಾಹಿತಿ ನಿಧಿಯನ್ನೇ ಬಚ್ಚಿಟ್ಟು ಕೊಂಡಿದೆ ಇದು ಬಗೆದಷ್ಟು ಬಸಿದಷ್ಟು ಮತ್ತು ಶೋಧಿಸಿದಷ್ಟು ನಿಗೂಢತೆಯ ಅದ್ಯಾಯವನ್ನೇ ತೆರದುಕೊಳ್ಳುತ್ತಾ ಮುಂದೆ ಸಾಗುತ್ತದೆಯಲ್ಲದೇ ಕೊಡವ ಶ್ರೀಮಂತ ನಾಗರೀಕತೆ ಮತ್ತು ಸಮೃದ್ದ ಸಾಂಸ್ಕøತಿಕ ಪರಂಪರೆಯನ್ನೇ ದೃಢೀಕರಿಸುತ್ತದೆ. ಈ ನಿಟ್ಟಿನಲ್ಲಿ ಸಿ.ಎನ್.ಸಿ. ಸಂಘಟನೆ ಕೊಡವ ಲ್ಯಾಂಡ್ ಹೋರಾಟಕ್ಕೆ ಪೂರಕ ಸಂವಿಧಾನಿಕ ಹಕ್ಕು ಮತ್ತು ಆಶೋತ್ತರಗಳಿಗೆ ಸತ್ವ ನೀಡಲು ಹೆಜ್ಜೆ ಇರಿಸಿದ್ದು, ಈ ಜನಪದೀಯ ಹಬ್ಬ ಆಚರಣೆಗಳು ಚಲನ ಶೀಲವಾಗಿಯೂ ಶಾಶ್ವತವಾಗಿ ಉಳಿಯಬೇಕಾದರೆ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲ್ಪಡುತ್ತಲೇ ಇರಬೇಕೆಂದು ಎನ್.ಯು ನಾಚಪ್ಪ ಕೊಡವ ಕರೆ ನೀಡಿದರು.

ದುಡಿಕೊಟ್ಟ್ ಪಾಟ್ ಮತ್ತು ಸಭಾ ಕಾರ್ಯಕ್ರಮದೊಂದಿಗೆ ತೆಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ಉತ್ಸವ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಮೊದಲಿಗೆ ಗುರುಕಾರೋಣರಿಗೆ ನಮನ ಅರ್ಪಿಸಿ ಕಾರೋಣ ಪಾಟನ್ನು ನಂದಿನೆರವಂಡ ನಿಶ ಅಚ್ಚಯ್ಯ ನೆರವೇರಿಸಿದರು. ಸಭೆಯಲ್ಲಿ ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಮದ್ರಿರ ಕರುಂಬಯ್ಯ, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಬೇಪಡಿಯಂಡ ದಿನು, ಪುಳ್ಳಂಗಡ ನಟೇಶ್, ಕಿರಿಯಮಾಡ ಶರೀನ್, ಅಪ್ಪೆಂಗಡ ಮಾಲೆ, ಮಾಚಿಮಾಡ ಲವ, ನೆಲಮಕ್ಕಡ ಶಂಕಿ, ಕೇಟೋಳಿರ ಹರೀಶ್ ಪೂವಯ್ಯ, ಅರೆಯಡ ರತ್ನ, ಚಂಬಂಡ ಜನತ್, ಪುಲ್ಲೆರ ಕಾಳಪ್ಪ, ಪುಲ್ಲೆರ ಸ್ವಾತಿ, ಅಪ್ಪಚ್ಚಿರ ರೀನ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಮಂದಪಂಡ ಮನೋಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.