ವೀರಾಜಪೇಟೆ, ಸೆ. 2: ವೀರಾಜಪೇಟೆ ಸಮೀಪದ ಅರಮೇರಿ ಶ್ರೀ ಕಳಂಚೇರಿ ಮಠದ ಎಸ್.ಎಂ.ಎಸ್. ವಿದ್ಯಾಪೀಠದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಸಮಿತಿ ವತಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನದ ಅಂಗವಾಗಿ ವಚನ ದಿನವನ್ನು ಆಚರಿಸಲಾಯಿತು.

ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಉಂಟಾದ ಸಾಮಾಜಿಕ ವೀರಾಜಪೇಟೆ, ಸೆ. 2: ವೀರಾಜಪೇಟೆ ಸಮೀಪದ ಅರಮೇರಿ ಶ್ರೀ ಕಳಂಚೇರಿ ಮಠದ ಎಸ್.ಎಂ.ಎಸ್. ವಿದ್ಯಾಪೀಠದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಸಮಿತಿ ವತಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನದ ಅಂಗವಾಗಿ ವಚನ ದಿನವನ್ನು ಆಚರಿಸಲಾಯಿತು.

ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಉಂಟಾದ ಸಾಮಾಜಿಕ ಹಿಡಿದಿದ್ದವು ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಸಂತ ಅನ್ನಮ್ಮ ಪ್ರೌಢಶಾಲೆಯ ಕನ್ನಡ ಶಿಕ್ಷಕ ಬಿ.ಎಸ್. ದೇವರ್ ಮಾತನಾಡಿ, ಶರಣರ ಚಿಂತನೆಗಳಿಗೆ ಹಿಂದೆಗಿಂತ ಹೆಚ್ಚು ಪ್ರಸ್ತುತತೆ ಇಂದು ಇದೆ. ಶರಣರ ಸುಧಾರಣಾ ಕ್ರಾಂತಿಯಲ್ಲಿ ಜಾತಿ-ಧರ್ಮದ ಚಿಂತನೆ ಕಾಣಲು ಸಿಗುವದಿಲ್ಲ ಎಂದರು.

ಶರಣ ಸಾಹಿತ್ಯ ಪರಿಷತ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಎಸ್. ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎನ್. ಸಂದೀಪ್, ಮಾಯಮುಡಿಯ ಕಾಫಿ ಬೆಳೆಗಾರ ಕೆ.ಟಿ. ಬಿದ್ದಪ್ಪ, ವಕೀಲ ಕೆ.ಬಿ. ಹೇಮಚಂದ್ರ, ಶರಣ ಸಾಹಿತ್ಯ ಪರಿಷತ್ ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಎಸ್.ಎಂ. ರಾಜೇಂದ್ರ ಪ್ರಸಾದ್ ಹಾಗೂ ಎಸ್.ಬಿ. ಪರಶಿವ ಮೂರ್ತಿ ಹಾಜರಿದ್ದರು.