ಮಡಿಕೇರಿ, ಸೆ. 2: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 100 ಇಂಚು ಮಳೆ ದಾಖಲಾಗಿದ್ದು, ಕಳೆದ ವಷರ್À ಇದೇ ಅವಧಿಗೆ 93 ಇಂಚು ಮಳೆಯೊಂದಿಗೆ ಈ ಅವಧಿಗಿಂತಲೂ 7 ಇಂಚು ಕಡಿಮೆಯಾಗಿತ್ತು.ಇನ್ನು ಕೊಡಗು ಜಿಲ್ಲೆಯಲ್ಲಿ ವರ್ಷಾರಂಭದಿಂದ ಇದುವರೆಗೆ ಸರಾಸರಿ 70 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಈ ಅವಧಿ ತನಕ 60.80 ಇಂಚು ಮಳೆಯೊಂದಿಗೆ ಸುಮಾರು 10 ಇಂಚು ಅಧಿಕ ಮಳೆ ದಾಖಲಾಗಿರುವದು ಕಂಡುಬಂದಿದೆ.ಅತ್ತ ಸೋಮವಾರಪೇಟೆ ತಾಲೂಕಿನಲ್ಲಿ ಈ ಅವಧಿಯಲ್ಲಿ ಸರಾಸರಿ 54.20 ಇಂಚು ಮಳೆ ಬಿದ್ದಿದ್ದು, ಕಳೆದ ವರ್ಷ ಈ ಸಮಯಕ್ಕೆ 47 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಪ್ರಸಕ್ತ ಸಾಲಿಗೆ ಒಟ್ಟು 54 ಇಂಚು ಮಳೆ ಆಗಿದ್ದು, ಹಿಂದಿನ ವರ್ಷ 43 ಇಂಚು ಮಳೆ ದಾಖಲಾಗಿತ್ತು.

ಇತ್ತ ಮಡಿಕೇರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಆಶಾದಾಯಕ ಮಳೆಯೊಂದಿಗೆ 97.64 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 92.86 ಇಂಚು ಮಳೆಯಾಗಿತ್ತು. ಇನ್ನು ತಲಕಾವೇರಿಗೆ ವರ್ಷಾರಂಭದಿಂದ ಇದುವರೆಗೆ 192 ಇಂಚು ಮಳೆ ಪ್ರಸಕ್ತ ದಾಖಲಾಗಿದ್ದು, ಕಳೆದ ವರ್ಷ ಈ ಸಮಯಕ್ಕೆ 185 ಇಂಚು ಮಳೆಯಾಗಿತ್ತು.

ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಲ್ಲಲ್ಲಿ ಎದುರಾಗಿದ್ದ ಭರದ ಛಾಯೆ ದೂರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಜಲ ಕಾಣಿಸಿಕೊಂಡಿದೆ. ಹೀಗಾಗಿ ಕುಡಿಯುವ ನೀರಿನ ಅಭಾವ ತಕ್ಕಮಟ್ಟಿಗೆ ನೀಗುವಂತಾಗಿದೆ.