ಮಡಿಕೇರಿ, ಸೆ. 1: ಜಿಲ್ಲೆಯ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಸರ್ಜನೆಯನ್ನು ನೆರವೇರಿಸಲಾಯಿತು. ಮಡಿಕೇರಿ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಜ್ಯೋತಿ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣಪತಿ, ತ್ಯಾಗರಾಜನಗರ ಅಭೀಷ್ಠಪ್ರದ ಯುವಕ ಸಂಘ ಹಾಗೂ ಪುಟಾಣಿ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಗಳನ್ನು ನಗರದಲ್ಲಿ ಶೋಭಾ ಯಾತ್ರೆ ಬಳಿಕ ಗೌರಿಕೆರೆಯಲ್ಲಿ ವಿಸರ್ಜಿಸಲಾಯಿತು.

ಮೂರ್ನಾಡು

ಅಧ್ಯಾತ್ಮಿಕತೆಯಿಂದ ಸರ್ವ ವಿಧದ ಯಶಸ್ಸು ಸಾಧ್ಯವೆಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಿಸಿದರು.

ಮೂರ್ನಾಡಿನ ಶ್ರೀ ಗಜಾನನ ಯುವಕ ಸಂಘದ ಆಶ್ರಯದಲ್ಲಿ ಮೂರ್ನಾಡಿನ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಆಯೋಜಿತವಾಗಿದ್ದ 14ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆಧ್ಯಾತ್ಮಿಕತೆಯಿಂದ ಮಾನವನ ಮನಸ್ಸು ಪರಿಪಕ್ವವಾಗುತ್ತದೆ. ಪರಿಪಕ್ವವಾದ ಮನಸ್ಸಿನಿಂದ ಸಮಾಜಕ್ಕೆ ಒಳಿತಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಮನಸ್ಸನ್ನು ಹಿಡಿತದಲ್ಲಿಡುವ ಸಲುವಾಗಿ ಪ್ರತಿಯೋರ್ವರೂ ಪ್ರತಿ ದಿನ ಕನಿಷ್ಟ 15 ನಿಮಿಷಗಳನ್ನು ಪ್ರಾರ್ಥನೆಗಾಗಿ ಮೀಸಲಿಡುವಂತೆ ಸ್ವಾಮೀಜಿ ಸಲಹೆ ನೀಡಿದರು.

ಸಭಾಧ್ಯಕ್ಷತೆಯನ್ನು ಶ್ರೀ ಗಜಾನನ ಸಂಘದ ಅಧ್ಯಕ್ಷ ಚೆಟ್ಟಿಮಾಡ ಎಲ್. ಜಯಂತ್ ಕುಮಾರ್ ವಹಿಸಿದ್ದರು. ಈ ಸಂದರ್ಭ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತರನ್ನು ಗಣ್ಯರು ಗೌರವಿಸಿ, ಪುರಸ್ಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಳ್ಯದ ಶ್ಯಾಂ ಜಾದೂಗಾರ ಅವರಿಂದ ಜಾದೂ ಪ್ರದರ್ಶನ, ಕಲ್ಲಡ್ಕದ ತಂಡದವರಿಂದ ಗೊಂಬೆಯಾಟದ ಪ್ರದರ್ಶನ ನಡೆಯಿತು. ಸುಶ್ಮಿತಾ ಪ್ರಾರ್ಥಿಸಿ, ಕಿಶೋರ್ ಚಿನ್ನ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ಸುವರ್ಣ ನಿರೂಪಿಸಿ, ಹರೀಶ್ ಪೃಥ್ವಿ ವಂದಿಸಿದರು.

ಸಭಾ ಕಾರ್ಯಕ್ರಮದ ತರುವಾಯ ಅನ್ನಸಂತರ್ಪಣೆ ನಡೆಯಿತು. ಶೋಭಾಯಾತ್ರೆಯ ಬಳಿಕ ಬಲಮುರಿಯ ಕಾವೇರಿ ನದಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಗಣೇಶೋತ್ಸವದ ಪ್ರಯುಕ್ತ ವಾರದ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಾಪೆÇೀಕ್ಲುs

ಆ. 25ರ ಗಣೇಶ ಚತುರ್ಥಿಯಂದು ಪಟ್ಟಣದ ಐದು ಕಡೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಇಂದು ಅಲಂಕೃತ ಮಂಟಪಗಳಲ್ಲಿರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸಮೀಪದ ಕಾವೇರಿ ನದಿಯಲ್ಲಿ ವಿಸರ್ಜಿಸುವದರೊಂದಿಗೆ ಗಣೇಶೋತ್ಸವವು ಸಂಪನ್ನಗೊಂಡಿತು.

ಕಳೆದ ಏಳು ದಿನಗಳಿಂದ ವಿವಿಧ ಗಣೇಶ ಪ್ರತಿಷ್ಠಾಪನಾ ಸಮಿತಿಯವರು ತಾವು ಸ್ಥಾಪಿಸಿದ ಗಣೇಶನಿಗೆ ವಿಶೇಷ ಪೂಜೆ, ಹೋಮ ಹವನಾದಿಗಳನ್ನು ಅರ್ಪಿಸಿದರು. ಒಂದೊಂದು ಸಮಿತಿಯವರು ನಾ ಮುಂದು ತಾ ಮುಂದು ಎಂಬಂತೆ ಸಂಜೆ ಸಂಗೀತಾ, ಸಾಂಸ್ಕøತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ ತಮ್ಮ ಪ್ರತಿಷ್ಠೆ ಮೆರೆದರು.

ಇಂದು ಅಪರಾಹ್ನ 3 ಗಂಟೆಗೆ ಪ್ರಾರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆ ರಾತ್ರಿ 9 ಗಂಟೆಯವರೆಗೂ ನಡೆಯಿತು. ಬೇರೆ ಬೇರೆ ಗಣೇಶೋತ್ಸವ ಸಮಿತಿಯವರು ತಮ್ಮ ಅಲಂಕೃತ ಮಂಟಪದೆದುರು ವಿವಿಧ ತರದ ಮನೋರಂಜನೆ, ಗೊಂಬೆ ಕುಣಿತ, ಸಂಗೀತ, ಡೊಳ್ಳುಕುಣಿತ, ನೃತ್ಯ, ಹುಲಿವೇಶದಾರಿಗಳೊಂದಿಗೆ ನಲಿದು, ಕುಣಿದು ಕುಪ್ಪಳಿಸಿದರು. ಬಾಲಕರಿಗಿಂತ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದುದು ಕಂಡು ಬಂತು.

ಅಪರಾಹ್ನ 2 ಗಂಟೆಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್, ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಪ್ರದೀಪ್ ನೇತೃತ್ವದಲ್ಲಿ ನಾಪೆÇೀಕ್ಲು ಠಾಣಾಧಿಕಾರಿ ನಂಜುಂಡ ಸ್ವಾಮಿ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಗುಡ್ಡೆಹೊಸೂರು

ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯ ಅದ್ದೂರಿಯಾಗಿ ನೆರವೇರಿತು. ವಿಸರ್ಜನೆ ದಿನ ಅನ್ನಸಂತರ್ಪಣೆ ನಡೆಸಲಾಯಿತು. ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಅವರ ತಂಡ ಸೂಕ್ತಬಂದೋಬಸ್ತು ವ್ಯವಸ್ಥೆ ಕಲ್ಪಿಸಿತ್ತು. ಮೆರವಣಿಗೆಯುದ್ದಕ್ಕೂ ಸಾರ್ವಜನಿಕರು ತಮ್ಮ ಮನೆಯ ಮುಂದೆ ಪೂಜೆ ನಡೆಸುತ್ತಿದ್ದುದು ಕಂಡುಬಂತು.

*ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಯಿತು.

ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ಗಣೇಶ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು ರಾತ್ರಿ 10 ಗಂಟೆಗೆ ವಿಸರ್ಜಿಸಲಾಯಿತು. ಸಮಿತಿಯ ಅಧ್ಯಕ್ಷ ಐಲಪಂಡ ಕುಶಾಲಪ್ಪ, ಕಾರ್ಯದರ್ಶಿ ಆನೇರ ಗಿರೀಶ್, ರವಿ, ಎಂ.ಜಿ. ರವಿ, ನಂದ ಮುಂತಾದವರು ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾಲ ಗ್ರಾಮದ ವಿವಿಧ ಭಕ್ತರಿಂದ ಪೂಜಾಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕತ್ತಲೆಕಾಡು

ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಕತ್ತಲೆಕಾಡುವಿನಲ್ಲಿ ಶ್ರೀ ವಿಘ್ನೇಶ್ವರ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ್ ಉತ್ಸವ ಮೂರ್ತಿಯ ವಿಸರ್ಜನೋತ್ಸವ ಅದ್ದೂರಿಯಾಗಿ ನೆರವೇರಿತು. ಮೂರು ದಿನಗಳ ಕಾಲ ಪೂಜಾದಿ ಕಾರ್ಯಗಳನ್ನು ನೆರವೇರಿಸಿ, ಗ್ರಾಮದ ಮುಖ್ಯಬೀದಿಯಲ್ಲಿ ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು, ಮಾಣಿಕ್ಯ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಗ್ರಾಮಸ್ಥರು, ಉತ್ಸಾಹದಿಂದ ಪಾಲ್ಗೊಂಡಿದ್ದರು.