ಕುಶಾಲನಗರ, ಸೆ. 2: “ಶಿಕ್ಷಕರು ದಿನನಿತ್ಯದ ತರಗತಿ ಜಂಜಾಟದಿಂದ ಹೊರಬಂದು ವರ್ಷದಲ್ಲಿ ಒಂದು ದಿನ ತಮ್ಮ ದಿನಾಚರಣೆಯ ಪ್ರಯುಕ್ತ ಕ್ರೀಡಾಕೂಟದಲ್ಲಿ ಬಾಗವಹಿಸಿ ಶಿಕ್ಷಕರ ದಿನಾಚರಣೆಗೆ ಕಳೆ ನೀಡಿರುವದು ತುಂಬಾ ಸಂತೋಷದ ವಿಷಯ” ಎಂದು ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಹೇಳಿದರು.

ಶಿಕ್ಷಕರ ಕಲ್ಯಾಣ ನಿಧಿ. ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ನಿಧಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ ಸೋಮವಾರಪೇಟೆ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಜನ್ಮ ದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ ಇಲ್ಲಿಗೆ ಸಮೀಪದ ಗುಡ್ಡೆಹೂಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಶಿಕ್ಷಕರಿಗಾಗಿ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಸ್. ಭಾರತಿ ವಹಿಸಿದ್ದರು. ವೇದಿಕೆಯಲ್ಲಿ ಕೂಡಿಗೆ ಡಯಟ್‍ನ ಪ್ರಾಂಶುಪಾಲ ವಾಲ್ಟರ್ ಹಿಲಾರಿ ಡಿ. ಮೆಲ್ಲೋ, ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಶಾಲಾ ಎಸ್.ಡಿ.ಎಂ.ಸಿ. ಅದ್ಯಕ್ಷ ಬಿ.ಎಸ್. ದಿನೇಶ್. ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್. ದೈಹಿಕ ಶಿಕ್ಷಣ ಶಿಕ್ಷಕರ ಅಧೀಕ್ಷ ವೆಂಕಟೇಶ, ಮುಖ್ಯೋಪಾಧ್ಯಾಯ ಸಣ್ಣಸ್ವಾಮಿ, ಧರ್ಮಪ್ಪ ಕೆ.ಬಿ. ಪ್ರಕಾಶ, ಯೋಗೇಶ್, ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ಕಾರ್ಯದರ್ಶಿ ಬಸವರಾಜು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ ಸರ್ವರನ್ನು ಸ್ವಾಗತಿಸಿದರು. ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ಮಾತನಾಡಿದರು.

ಥ್ರೋಬಾಲ್, ವಾಲಿಬಾಲ್, ಕಬ್ಬಡಿ, ಹಗ್ಗಜಗ್ಗಾಟ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.