ಮಡಿಕೇರಿ, ಸೆ. 1: ಸ್ವಚ್ಛತಾ ಅಭಿಯಾನದ ಅಂಗವಾಗಿ ಕುಡಿಯುವ ನೀರು ಹಾಗೂ ಸ್ವಚ್ಛತಾ ಮಂತ್ರಾಲಯ ವಿವಿಧ ಕಾಲೇಜುಗಳ ರಾಷ್ಟೀಯ ಸೇವಾ ಯೋಜನೆ, ಎನ್.ಸಿ.ಸಿ. ಹಾಗೂ ನೆಹರು ಯುವ ಕೇಂದ್ರದ ರಾಷ್ಟೀಯ ಯುವದಳ ಕಾರ್ಯಕರ್ತರುಗಳು ಹಾಗೂ ಸಂಘ-ಮಂಡಳಿಗಳಿಗಾಗಿ ಮತ್ತು ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ಸ್‍ನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಸ್ವಚ್ಛತಾ ಅಭಿಯಾನ ಬಗ್ಗೆ ಜಾಗೃತಿ ಉಂಟುಮಾಡುವ ಸಲುವಾಗಿ “ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿ” ಎಂಬ ಸಂದೇಶದನುಸಾರ ವಿವಿಧ ಸ್ಪರ್ಧೆಗಳನ್ನು ಜಿಲ್ಲೆಯಲ್ಲಿ ವ್ಯವಸ್ಥೆಗೊಳಿಸಲು ಸೂಚಿಸಿದೆ. ಅದರ ಅನುಸಾರ ಕಾಲೇಜಿನ ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸ್ಪರ್ಧೆ ನಡೆಯಲಿದೆ.

ಪ್ರಬಂಧ ಸ್ಪರ್ಧೆ: ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕಾಲೇಜಿನ ಇಬ್ಬರು (2) ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್‍ನ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಅವರುಗಳನ್ನು ತಾ. 7 ರಂದು ಬೆಳಿಗ್ಗೆ 10.30 ಕ್ಕೆ ಫೀಲ್ಡ್ ಮಾóರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣ, ಮಡಿಕೇರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಕಾಲೇಜಿನ ಅಧಿಕೃತ ಪತ್ರದೊಡನೆ ಕಳುಹಿಸಿ ಕೊಡಬೇಕು. ಪ್ರಬಂಧ ಸ್ಪರ್ಧೆಗೆ ಇಟ್ಟಿರುವ ವಿಷಯ “ಸ್ವಚ್ಛತೆಗೋಸ್ಕರ ನಾನೇನು ಮಾಡುವೆ” (Wಊಂಖಿ WIಐಐ I ಆಔ ಈಔಖ ಅಐಇಂಓಐIಓಇSS) ಈ ವಿಷಯದ ಬಗ್ಗೆ 1 ಘಂಟೆಯ ಅವಧಿಯಲ್ಲಿ 250 ಪದಗಳಿಗೆ ಮೀರದಂತೆ ನೀಲಿ ಬಾಲ್ ಪಾಯಿಂಟ್ ಪೆನ್‍ನಲ್ಲಿ ಪ್ರಬಂಧ ಬರೆಯಬೇಕು.

ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಸಲ್ಲಿಕೆಯಾಗುವ ಎಲ್ಲಾ ಪ್ರಬಂಧಗಳನ್ನು ಮೌಲ್ಯಮಾಪನ ಮಾಡಿಸಿ ಅವುಗಳಲ್ಲಿ ಆಯ್ಕೆಯಾಗುವ ಉತ್ತಮವಾದ ಒಂದು ಪ್ರಬಂಧಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವದು. ರಾಜ್ಯಮಟ್ಟದಲ್ಲಿ ಆಯ್ಕೆಯಾಗುವ ಪ್ರಬಂಧಗಳನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ ಪ್ರಬಂಧ ರಚನಾಕಾರರನ್ನು ಅಕ್ಟೋಬರ್ 2 ರಂದು ಭಾರತ ಸರ್ಕಾರದ ಕುಡಿಯುವ ನೀರು ಹಾಗೂ ಸ್ವಚ್ಛತಾ ಮಂತ್ರಾಲಯವು ನಗದು ಬಹುಮಾನ ಹಾಗೂ ರಾಷ್ಟ್ರೀಯ ಸ್ವಚ್ಛ ಭಾರತ್ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಸಾಕ್ಷ್ಯಚಿತ್ರ ಸ್ಪರ್ಧೆ: ನನ್ನ ದೇಶವನ್ನು ಸ್ವಚ್ಛಗೊಳಿಸಲು ನನ್ನ ಕೊಡುಗೆ (ಒಙ ಅಔಓಖಿಖIಃUಖಿIಔಓ ಖಿಔ ಒಂಏಇ ಒಙ ಅಔUಓಖಿಖಙ ಅಐಇಂಓ) ಎಂಬ ವಿಷಯದ ಬಗ್ಗೆ ಎರಡರಿಂದ ಮೂರು ನಿಮಿಷದ ಅವಧಿಯ ಕಿರು ಸಾಕ್ಷ್ಯಚಿತ್ರವೊಂದನ್ನು ತಯಾರಿಸಿ ನೆಹರು ಯುವ ಕೇಂದ್ರಕ್ಕೆ ಸಲ್ಲಿಸಬೇಕು. ಸಲ್ಲಿಕೆಯಾಗುವ ಒಟ್ಟು ಕಿರು ಸಾಕ್ಷ್ಯಚಿತ್ರಗಳಲ್ಲಿ ಅತ್ಯುತ್ತಮವಾದ ಒಂದನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವದು. ಈ ಸ್ಪರ್ಧೆಯಲ್ಲಿ ಕಾಲೇಜಿನ ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಬಹುದು.

ಚಿತ್ರಕಲೆ ಸ್ಪರ್ಧೆ: (ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ) ಸ್ವಚ್ಛ ಭಾರತ ನನ್ನ ಕನಸು (ಖಿhe ಛಿಟeಚಿಟಿ Iಟಿಜiಚಿ oಜಿ mಥಿ ಜಡಿeಚಿm) ಚಿತ್ರಕಲೆ ಸ್ಪರ್ಧೆಗೆ ಬೇಕಾಗುವ ಎಲ್ಲಾ ಪರಿಕರಗಳನ್ನು ಸ್ಪರ್ಧಾರ್ಥಿಗಳೇ ತರತಕ್ಕದ್ದು. ಚಿತ್ರಕಲೆ ಸ್ಪರ್ಧೆಯ ಸಮಯ 1 ಗಂಟೆ ಅವಧಿ.

ವಿಶೇಷ ಸೂಚನೆ: ಪ್ರಬಂಧವು 250 ಪದಗಳನ್ನು ಮೀರಿದರೆ ಅಂಕಗಳನ್ನು ಕಡಿತಗೊಳಿಸಲಾಗುವದು. ಭಾಗವಹಿಸಿದ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವದು. ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವದು. ಪ್ರಬಂಧ ಮತ್ತು ಸಾಕ್ಷ್ಯಚಿತ್ರದ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ವರ್ಧಾರ್ಥಿಗಳ ವಯೋಮಿತಿ 15 ರಿಂದ 29 ವರ್ಷಗಳು. ಚಿತ್ರಕಲೆ ಸ್ಪರ್ಧೆಯಲ್ಲಿ 1 ರಿಂದ 5ನೇ ತರಗತಿ ಮಕ್ಕಳು ಭಾಗವಹಿಸಬಹುದು. ಶಾಲೆಯಿಂದ ವಯಸ್ಸಿನ ದೃಢೀಕರಣ ಪತ್ರ ಕಡ್ಡಾಯವಾಗಿರುತ್ತದೆ. ಸ್ಪರ್ಧಾರ್ಥಿಗಳು ಇಂಗ್ಲೀಷ್ ಅಥವಾ ಕನ್ನಡ ಮಾಧ್ಯಮದಲ್ಲಿ ಭಾಗವಹಿಸಬಹುದು.

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಾಲೇಜಿನ ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳನ್ನು ಆಯ್ಕೆ ಮಾಡಿ ಸ್ಪರ್ಧೆಯ ದಿನಾಂಕದಂದು ಇಪ್ಪತ್ತು ನಿಮಿಷಗಳ ಮುಂಚಿತವಾಗಿ ಕಳುಹಿಸತಕ್ಕದ್ದು. ತಾ. 5 ರ ಸಂಜೆ 5 ಗಂಟೆಯೊಳಗೆ ಕಾಲೇಜಿನಿಂದ ಬಂದು ಭಾಗವಹಿಸುವವರ ಹೆಸರನ್ನು ಕಳುಹಿಸಿ ಕೊಡಲು ಕೊನೆ ದಿನಾಂಕವಾಗಿರುತ್ತದೆ ಅಥವಾ ಇ-ಮೇಲ್ ಮುಖಾಂತರ ಕಳುಹಿಸಲು ಕೋರಿದೆ. ಇ-ಮೇಲ್ ವಿಳಾಸ ಜಥಿಛಿ.ಞoಜಚಿgu@gmಚಿiಟ.ಛಿom ಫೋನ್ ನಂ-08272-225470, 7760775592, 9901312526 ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಅನಂತಪ್ಪ ತಿಳಿಸಿದ್ದಾರೆ.