ವೀರಾಜಪೇಟೆ, ಸೆ. 4: ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿ ಅವರು ಪಡೆಯುವ ಶಿಕ್ಷಣಕ್ಕೆ ಮಾನದಂಡವಲ್ಲ. ಎಂದು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|| ಟಿ. ಕೆ. ಬೋಪಯ್ಯ ತಿಳಿಸಿದ್ದಾರೆ. ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳೂ ಕಲಿಕೆಯ ಮಹತ್ವವನ್ನು ಅರಿಯಬೇಕು. ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸುವಂತಹ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ|| ಫಾ||. ಐಸಕ್ ರತ್ನಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಾಂಶುಪಾಲ ಆರ್.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಚಾಲ್ರ್ಸ್ ಡಿಸೋಜ ಪ್ರತಿಜ್ಞಾವಿಧಿ ಭೋದಿಸಿದರು, ವಿದ್ಯಾರ್ಥಿ ಸಂಘದ ವಾರ್ಷಿಕ ವರದಿಯನ್ನು ಪಿ.ಎ.ಸುಜಾತ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ವರದಿಯನ್ನು ಯೋಜನಾಧಿಕಾರಿ ಎಂ.ದಿನೇಶ್ ಮಂಡಿಸಿದರು, ಅಂತೋಣಿ ಆಳ್ವಾರೀಸ್ ದತ್ತಿ ನಿಧಿ ಬಹುಮಾನದ ಬಗ್ಗೆ ವಿವರÀಣೆ ನೀಡಿದರು.

ಈ ಸಂದರ್ಭ ಕಾಲೇಜಿನ ಪ್ರಯೋಗಾಲಯ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ. ಎಲ್. ಕೃಷ್ಣರಾಜ್ ಅವರನ್ನು ಬೀಳ್ಕೊಡಲಾಯಿತು. ಹಿರಿಯ ಉಪನ್ಯಾಸಕಿ ಎನ್. ಕೆ. ಜ್ಯೋತಿ ಸ್ವಾಗತಿಸಿದರು. ಕೆ.ಬಿ.ಗೌರಿ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಡಾ||. ಎಸ್. ಹೆಚ್. ಖಂಡೋಬಾ ವಂದಿಸಿದರು.