ಮಡಿಕೇರಿ, ಸೆ. 4: ಪೊನ್ನಂಪೇಟೆ ಸ.ಪ.ಪೂ. ಕಾಲೇಜಿನ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಮಟ್ಟದ ಕ್ರೀಡಾ ಕೂಟ ತಾ. 7 ರಿಂದ 14 ರವರೆಗೆ ನಡೆಯಲಿದೆ.

ತಾ. 7 ರಂದು ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯಲ್ಲಿ ಬಾಸ್ಕೆಟ್‍ಬಾಲ್, ಹ್ಯಾಂಡ್‍ಬಾಲ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಕ್ಕೆ ದೇವರಪುರ ವಿದ್ಯಾನಿಕೇತನ ಹಾಗೂ ಹಳ್ಳಿಗಟ್ಟು ನಿನಾದ ಶಾಲೆಯಲ್ಲಿ ಪ್ರೌಢಶಾಲೆಗೆ ಬ್ಯಾಡ್‍ಮಿಂಟನ್, ಶಟಲ್ ಬ್ಯಾಡ್‍ಮಿಂಟನ್, ತಾ. 8 ರಂದು ಗೋಣಿಕೊಪ್ಪ ಸ.ಮಾ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಕಬಡ್ಡಿ ಪಂದ್ಯಾಟ, ಹಳ್ಳಿಗಟ್ಟು ನಿನಾದ ಶಾಲೆ ಹಾಗೂ ಅರುವತೊಕ್ಲು ಸರ್ವದೈವತಾ ಶಾಲೆಯಲ್ಲಿ ಪ್ರಾಥಮಿಕ ವಿಭಾಗಕ್ಕೆ ಶಟಲ್ ಬ್ಯಾಡ್‍ಮಿಂಟನ್, ಪ್ರಾಥಮಿಕ ಹಾಗೂ ಪ್ರೌಢಶಾಲೆ ಚೆಸ್, ಟಿ.ಟಿ. ನಡೆಯಲಿದೆ.

ತಾ. 12 ರಂದು ಪೊನ್ನಂಪೇಟೆ ಪ.ಪೂ. ಕಾಲೇಜಿನಲ್ಲಿ ಅಥ್ಲೆಟಿಕ್ಸ್, 13 ರಂದು ಪ್ರೌಢಶಾಲೆಗೆ ಹಾಕಿ, ಥ್ರೋಬಾಲ್, ಪ್ರಾಥಮಿಕ ಶಾಲೆಗೆ ವಾಲಿಬಾಲ್, ಖೋಖೋ, 14 ರಂದು ಪ್ರೌಢಶಾಲೆಗೆ ವಾಲಿಬಾಲ್, ಖೋಖೋ, ಪ್ರಾಥಮಿಕ ಶಾಲೆಗೆ ಹಾಕಿ ಥ್ರೋಬಾಲ್ ಪಂದ್ಯಾಟಗಳು ನಡೆಯಲಿವೆ.