ಸೋಮವಾರಪೇಟೆ, ಸೆ. 4: ಇಲ್ಲಿನ ಅರಣ್ಯ ಇಲಾಖೆಯ ಬೇಳೂರು ವನ ಪಾಲಕರಿಗಾಗಿ ಕಟ್ಟಿಸಲಾಗಿರುವ ವಸತಿ ಗೃಹ ಹಾಗೂ ಕಚೇರಿಯ ಎದುರಿನಲ್ಲಿ ಬೆಳೆದಿದ್ದ ಸಾವಿರಾರು ಮೌಲ್ಯದ ಕೂಳಿ ಮರವನ್ನು ಕಳ್ಳರು ಸಾಗಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದರಲ್ಲಿ ವನಪಾಲಕರ ಪಾತ್ರವೂ ಇದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಬೇಳೂರು ವಲಯ ಅರಣ್ಯಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ -ಕುಶಾಲನಗರ ಮುಖ್ಯ ರಸ್ತೆಯ ಬೇಳೂರಿನಲ್ಲಿ ವನಪಾಲಕರ ವಸತಿ ಗೃಹ ಮತ್ತು ಕಚೇರಿ ಇದ್ದು, ಇದರ ಮುಂಭಾಗ ಕಳೆದ ಅನೇಕ ವರ್ಷಗಳಿಂದ ಬೆಳೆದು ನಿಂತಿದ್ದ ಕೂಳಿ ಮರವನ್ನು ಕಳೆದ ಶುಕ್ರವಾರ ರಾತ್ರಿ ಕಳ್ಳರು ಕತ್ತರಿಸಿ ಸಾಗಾಟ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಸೋಮವಾರಪೇಟೆ, ಸೆ. 4: ಇಲ್ಲಿನ ಅರಣ್ಯ ಇಲಾಖೆಯ ಬೇಳೂರು ವನ ಪಾಲಕರಿಗಾಗಿ ಕಟ್ಟಿಸಲಾಗಿರುವ ವಸತಿ ಗೃಹ ಹಾಗೂ ಕಚೇರಿಯ ಎದುರಿನಲ್ಲಿ ಬೆಳೆದಿದ್ದ ಸಾವಿರಾರು ಮೌಲ್ಯದ ಕೂಳಿ ಮರವನ್ನು ಕಳ್ಳರು ಸಾಗಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದರಲ್ಲಿ ವನಪಾಲಕರ ಪಾತ್ರವೂ ಇದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಬೇಳೂರು ವಲಯ ಅರಣ್ಯಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ -ಕುಶಾಲನಗರ ಮುಖ್ಯ ರಸ್ತೆಯ ಬೇಳೂರಿನಲ್ಲಿ ವನಪಾಲಕರ ವಸತಿ ಗೃಹ ಮತ್ತು ಕಚೇರಿ ಇದ್ದು, ಇದರ ಮುಂಭಾಗ ಕಳೆದ ಅನೇಕ ವರ್ಷಗಳಿಂದ ಬೆಳೆದು ನಿಂತಿದ್ದ ಕೂಳಿ ಮರವನ್ನು ಕಳೆದ ಶುಕ್ರವಾರ ರಾತ್ರಿ ಕಳ್ಳರು ಕತ್ತರಿಸಿ ಸಾಗಾಟ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಡ ರೈತರು ಮನೆ ನಿರ್ಮಿಸಲು ಅಥವಾ ಸೌದೆಗಾಗಿ ತೋಟದಲ್ಲಿರುವ ಕಾಡು ಮರಗಳನ್ನು ಕಡಿದರೆ ಮೊಕದ್ದಮೆ ದಾಖಲಿಸಿ ಕಿರುಕುಳ ನೀಡುವ ವನ ಪಾಲಕರು, ಮರಗಳ್ಳರು ಲಕ್ಷಾಂತರ ಮೌಲ್ಯದ ಮರಗಳನ್ನು ಸಾಗಿಸಿದರೂ ಕಣ್ಮುಚ್ಚಿ ಕುಳಿತು ಕೊಳ್ಳುತ್ತಾರೆ. ಕೆಲವೊಮ್ಮೆ ಇವರೇ ಮರ ಸಾಗಿಸಲು ಮೌಖಿಕ ಆದೇಶ ನೀಡಿ ಕಮಿಷನ್ ವಿಷಯದಲ್ಲಿ ಹೆಚ್ಚುಕಮ್ಮಿ ಯಾದರೆ ಅಂತಹ ಮರಗಳನ್ನು ಹಿಡಿದು ಮೊಕದ್ದಮೆ ದಾಖಲಿ ಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅರಣ್ಯ ವನಪಾಲಕರಿಗಾಗಿಯೇ ಸರ್ಕಾರ ನಿರ್ಮಿಸಿರುವ ವಸತಿ ಗೃಹದ ಎದುರಿನಲ್ಲೇ ಇದ್ದ ಮರವನ್ನು ಕಳ್ಳರು ಸಾಗಾಟಗೊಳಿಸಿದ್ದು, ಘಟನೆ ನಡೆದ ಮರುದಿನ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವ ಬದಲು, ಪ್ರಕರಣವನ್ನೇ ಮುಚ್ಚಿ ಹಾಕಲು ಯತ್ನಿಸಲಾಗಿದೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನ ಸೆಳೆದ ನಂತರ ಇದೀಗ ಬೇರೆ ದಾರಿಯಿಲ್ಲದೇ ಮೊಕದ್ದಮೆ ದಾಖಲಿಸಲಾಗಿದೆ. ಇಂತಹ ವನಪಾಲಕÀರನ್ನು ತಕ್ಷಣ ಇಲ್ಲಿಂದ ಬೇರೆಡೆಗೆ ವರ್ಗಾವಣೆ ಮಾಡಬೇಕು. ತಪ್ಪಿದಲ್ಲಿ ಸಂಘಟನೆಯ ವತಿಯಿಂದ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವದು ಎಂದು ಸುರೇಶ್ ಶೆಟ್ಟಿ, ಪದಾಧಿಕಾರಿಗಳಾದ ರಕ್ಷಿತ್, ಸಂತೋಷ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರು, ಬೇಳೂರು ಅರಣ್ಯ ವನಪಾಲಕರ ವಸತಿ ಗೃಹದ ಬಳಿಯಿದ್ದ ಕೂಳಿ ಮರವನ್ನು ಕಡಿದು ಸಾಗಿಸಿರುವ ಘಟನೆಗೆ ಸಂಬಂಧಿಸಿ ದಂತೆ ವನ ಪಾಲಕರಾದ ಮಾಧವ ನಾಯಕ್ ಅವರಿಗೆ ನೋಟೀಸ್ ನೀಡಲಾಗಿದ್ದು, ಪ್ರಕರಣದ ವಿವರ ನೀಡವಂತೆ ತಿಳಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.