ಮಡಿಕೇರಿ, ಸೆ. 6: ವಿಯೆಟ್ನಾಂನಿಂದ ಕಾಳುಮೆಣಸು ಆಮದಾಗುತ್ತಿರುವ ಕುರಿತು ಸಿಐಡಿ ತನಿಖೆÉಗೆ ಒತ್ತಾಯಿಸಿರುವ ಕಾಂಗ್ರೆಸ್ ಪಕ್ಷದ ಕ್ರಮವನ್ನು ಸ್ವಾಗತಿಸುವದಾಗಿ ತಿಳಿಸಿರುವ ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷ ಸುವಿನ್ ಗಣಪತಿ, ಸಮಿತಿ ಸಿಬಿಐ ತನಿಖೆÉಯನ್ನು ಎದುರಿಸಲು ಕೂಡ ಸಿದ್ಧವೆಂದು ತಿಳಿಸಿದ್ದಾರೆÀ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಆಡಳಿತ ಮಂಡಳಿ ಕಾನೂನಿನ ಚೌಕಟ್ಟಿನಡಿ ಕಾರ್ಯದರ್ಶಿ ಮೂಲಕವೇ ಕಾರ್ಯನಿರ್ವ ಹಿಸುತ್ತಿದ್ದು, ಯಾವದೇ ಲೋಪದೋಷಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.ಜಿಲ್ಲಾ ಕಾಂಗ್ರೆಸ್‍ನ ವಕ್ತಾರ ಟಾಟು ಮೊಣ್ಣಪ್ಪ ಯಾವದೇ ಮಾಹಿತಿ ಇಲ್ಲದೆ, ರೈತರಲ್ಲಿ ಗೊಂದಲವನ್ನು ಸೃಷ್ಟಿಸುವ ಹೇಳಿಕೆಯನ್ನು ನೀಡಿದ್ದು, ಅವ್ಯವಹಾರದ ಆರೋಪವನ್ನು ಹೊರಿಸುವ ಮೂಲಕ ತೇಜೋವಧೆ ಮಾಡಿದ್ದಾರೆ. ಈ ಬಗ್ಗೆ ಒಂದು ವಾರದಲ್ಲಿ ಕ್ಷಮೆ ಕೇಳದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವದಾಗಿ ಸುವಿನ್ ಗಣಪತಿ ಎಚ್ಚರಿಕೆ ನೀಡಿದರು.

ಕಾಳು ಮೆಣಸನ್ನು ಕಾನೂನಾತ್ಮಕ ವಾಗಿ ಆಮದು ಮಾಡಿಕೊಂಡಿದ್ದರೆ ಆಮದುದಾರರ ವಿರುದ್ಧ ಕ್ರಮ ಕೈಗೊಳ್ಳಲು ಎಪಿಎಂಸಿಗೆ ಸಾಧ್ಯವಿಲ್ಲ. ಆದರೂ ಆಡಳಿತ ಮಂಡಳಿ ಕಾಳು ಮೆಣಸು ವ್ಯವಹಾರ ನಡೆಸುತ್ತಿರುವ ಸಂಸ್ಥೆಯೊಂದಿಗೆ ಸ್ಪಷ್ಟೀಕರಣ ಬಯಸಿದಾಗ ವಿಯೆಟ್ನಾಂನ ಕಾಳು ಮೆಣಸು ಎಂದೇ ಮಾರಾಟ ಮಾಡುತ್ತಿರುವ ಬಗ್ಗೆ ದಾಖಲಾತಿ ಸಹಿತ ತಿಳಿಸಿರುತ್ತಾರೆ. ಇಷ್ಟೊಂದು ನಿಖರತೆ ಇದ್ದರೂ ಟಾಟು ಮೊಣ್ಣಪ್ಪ ರಾಜಕೀಯ ದುರುದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗಸ್ಟ್ 21 ರಂದು ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ತಾವೇ ಆಮದು ಕಾಳು ಮೆಣಸಿನ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ಸಂಸದÀ ಪ್ರತಾಪ ಸಿಂಹ ಅವರ ಗಮನ ಸೆಳೆÉಯಲು ನಿರ್ಧರಿಸಲಾಗಿತ್ತು. ಆದರೆ, ನಾಮ ನಿರ್ದೇಶಿತ ಸದಸ್ಯರು ಇದನ್ನೆ ರಾಜಕೀಯ ದಾಳವನ್ನಾಗಿ ಮಾಡಿ ಕೊಂಡಿರುವದು ಖಂಡನೀಯ ವೆಂದರು. ಹೊರ ದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಈ ಹಿಂದಿನ ಪ್ರಧಾನ ಮಂತ್ರ್ರಿಗಳಾದ ಪಿ.ವಿ. ನರಸಿಂಹÀರಾವ್ ಹಾಗೂ ಮನಮೋಹನ್ ಸಿಂಗ್ ಅವರು ಸಹಿ ಮಾಡಿದ್ದಾರೆ. ಈ ನೀತಿಯ ಪ್ರಕಾರ ಕಾಳು ಮೆಣಸು ಆಮದಾಗುತ್ತಿದ್ದು, ಕಾಂಗ್ರೆಸ್ ಮಂದಿ ಮಾಡುತ್ತಿರುವ ಆರೋಪವನ್ನು ಗಮನಿಸಿದರೆ ಇದರ ಹಿಂದೆ ಕೇರಳ ಕಾಳು ಮೆಣಸು ಲಾಬಿಯ ಕೈವಾಡವಿರುವದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಸುವಿನ್ ಗಣಪತಿ ಆರೋಪಿಸಿದರು.

ಬೆಳೆÉಗಾರರ ಒಕ್ಕೂಟ ಕೇಂದ್ರದ ಬಳಿಗೆ ನಿಯೋಗ ತೆರಳಿದರೆ ಅದಕ್ಕೆ ಎಪಿಎಂಸಿ ಆಡಳಿತ ಮಂಡಳಿಯ ಸಂಪೂರ್ಣ ಬೆಂಬಲವಿದೆ. ಇದೇ ಮಾದರಿಯಾಗಿ ಕಾಂಗ್ರೆಸ್ಸಿಗರು ಕೂಡ ರಾಜ್ಯ ಸರ್ಕಾರದ ಬಳಿ ನಿಯೋಗ ತೆರಳಲಿ ಎಂದು ಅವರು ಹೇಳಿದರು.

ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷÀ ನೆರವಂಡ ಉಮೇಶ್ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಸುವಿನ್ ಗಣಪತಿ, ಎಪಿಎಂಸಿ ರೈತರ ಹಿತ ದೃಷ್ಟಿಯನ್ನು ಕಾಯ್ದುಕೊಂಡಿದೆ ಎಂದರು. ಕೇವಲ ಮಾರುಕಟ್ಟೆ ಸುಂಕ ಸಂಗ್ರಹಿಸದೆ ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಗೋದಾಮು, ಕೃಷಿ ಕಣ, ಸಂಪರ್ಕ ರಸ್ತೆ, ಗ್ರಾಮೀಣ ಸಂತೆ, ಮೊದಲಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು. ಎಪಿಎಂಸಿ ಆವರಣದಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಗೋದಾಮಿಗೆ ಯಾವದೇ ಫಲಾನುಭವಿ ಬಾರದ ಕಾರಣ ತಾತ್ಕಾಲಿಕವಾಗಿ ಮಾತ್ರ ಕಾಳು ಮೆಣಸು ವ್ಯವಹಾರದ ಸಂಸ್ಥೆಗೆ ನೀಡಲಾಗಿದೆಯೆಂದು ಸ್ಪಷ್ಟಪಡಿಸಿದರು.

ರೈತರ ಹಿತದೃಷ್ಟಿಯನ್ನು ಕಾಯ್ದುಕೊಂಡು ಕಾರ್ಯನಿರ್ವ ಹಿಸುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಅವ್ಯವಹಾರದ ಆರೋಪ ಮಾಡಿರುವದು ಆಘಾತವನ್ನುಂಟು ಮಾಡಿದೆ. ರೈತರಿಂದ ಹಾಗೂ ವರ್ತಕರಿಂದ ಚುನಾಯಿತರಾಗಲು ಸಾಧ್ಯವಾಗದ ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಪಿತೂರಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಸುವಿನ್ ಗಣಪತಿ, ರಾಜಕೀಯ ಷಡ್ಯಂತ್ರಗಳಿಗೆ ತಕ್ಕ ಉತ್ತರ ನೀಡುವದಾಗಿ ತಿಳಿಸಿದರು. ವಿಯೆಟ್ನಾಂ ಕಾಳು ಮೆಣಸಿನ ಆಮದಿನ ಕುರಿತು ಉಂಟಾಗಿರುವ ಗೊಂದಲಗಳ ನಿವಾರಣೆಗೆ ಸಧ್ಯದಲ್ಲೆ ರೈತರ ಸಭೆಯನ್ನು ನಡೆಸುವದಾಗಿ ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ, ಸದಸ್ಯರುಗಳಾದ ಸುಜಾ ಪÀÇಣಚ್ಚ, ವಿನು ಚಂಗಪ್ಪ, ಸುಬ್ರಮಣಿ ಹಾಗೂ ವರ್ತಕರ ಸಂಘÀದ ಕಿಲನ್ ಗಣಪತಿ ಉಪಸ್ಥಿತರಿದ್ದರು.