ಮಡಿಕೇರಿ ಸೆ.6 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷಗಳನ್ನು ಪÀÇರೈಸಿದರೂ ಚುನಾವಣಾ ಪÀÇರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲವೆಂದು ಆರೋಪಿಸಿರುವ ಸಿಪಿಐಎಂ ತಾ. 8 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯ ದರ್ಶಿ ಡಾ. ಇ.ರ. ದುರ್ಗಾಪ್ರಸಾದ್, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನೆಲೆಸಿರುವವರಿಗೆ ಮಾರಕವಾಗಿರುವ ಡಾ| ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರುವುದಿಲ್ಲವೆಂದು ಭರವಸೆ ನೀಡಲಾಗಿತ್ತು. ಆದರೆ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತಾನೇ ಸ್ವತಃ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿ ವರದಿ ಜಾರಿಗೆ ತರುವದಾಗಿ ಒಪ್ಪಿಕೊಂಡಿದೆಯೆಂದು ಆರೋಪಿಸಿದರು. ಕೇಂದ್ರ ಸರ್ಕಾರ ವರದಿ ಜಾರಿಗೆ ಸಂಬಂಧಿಸಿದಂತೆ ಹೊರಡಿಸಿರುವ ಕರಡು ಅಧಿಸೂಚನೆ ಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ನೋಟು ಅಮಾನ್ಯೀಕರಣದಿಂದ ಭಯೋತ್ಪಾದನೆ, ಭ್ರಷ್ಟಾಚಾರ, ನಕಲಿ ನೋಟ್ ದಂಧೆಗಳಿಗೆ ಕಡಿವಾಣ ಬೀಳಲಿದೆಯೆಂದು ಕೇಂದ್ರ ತಿಳಿಸಿತ್ತು. ಆದರೆ, ನೋಟು ಅಮಾನ್ಯೀಕರಣ ದಿಂದ ಈ ಯಾವದೇ ಉದ್ದೇಶಗಳು ಈಡೇರದೆ ವಿಫಲವಾಗಿದೆ. ಇಂದಿಗೂ ಕಾರ್ಮಿಕರು ನೋಟು ಅಮಾನ್ಯೀಕರಣದ ಸಂಕಷ್ಟದ ಸುಳಿಯಿಂದ ಹೊರ ಬಂದಿಲ್ಲ ಮತ್ತು ಮೊದಲಿನ ಖರೀದಿಯ ಶಕ್ತಿಯನ್ನು ಕಾರ್ಮಿಕರು ಪಡೆದಿಲ್ಲವೆಂದು ದುರ್ಗಾಪ್ರಸಾದ್ ಹೇಳಿದರು.

ಭಾರತದಲ್ಲಿ ನೂತನವಾಗಿ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಬಹುರಾಷ್ಟ್ರೀಯ ಕಂಪೆನಿಗಳ ಉದ್ದಾರಕ್ಕಾಗಿ ಇದೆಯೇ ಹೊರತು ಜನಸಾಮಾನ್ಯರ ಉದ್ದಾರಕ್ಕಾಗಿ ಅಲ್ಲ. ಜಿಎಸ್‍ಟಿ ತೆರಿಗೆಗಳ ಪÀÅನರ್‍ವಿಮರ್ಶೆ ನಡೆಯಬೇಕೆಂದು ಒತ್ತಾಯಿಸಿದರು.

ಕಕ್ಕಬ್ಬೆಯ ನೆಟ್ಟುಮಾಡು ದೇವಸ್ಥಾನದ ಘಟನೆಗೆ ಸಂಬಂಧಿಸಿ ದಂತೆ ಬಿಜೆಪಿ ಮುಸ್ಲಿಂ ಸಮುದಾಯದ ಮೇಲೆ ಪÀÇರ್ವಗ್ರಹ ಪೀಡಿತವಾಗಿ ಆರೋಪ ಹೊರಿಸಿರುವದು ಸಮಂಜಸವಲ್ಲ. ಈ ಘಟನೆಯನ್ನು ಆಧರಿಸಿ ರಸ್ತೆ ತಡೆ, ಬಂದ್ ಎಂದು ಜನಸಾಮಾನ್ಯರ ಬದುಕನ್ನು ಕಲಕುವದು ಸರಿಯಾದ ಕ್ರಮವಲ್ಲ. ಘಟನೆಯ ಬಗ್ಗೆ ಪೊಲೀಸರು ನಿಷ್ಪಕ್ಷಪಾತವಾದ ತನಿಖೆÉ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದರು.

ನೆರೆಯ ರಾಜ್ಯ ಮತ್ತು ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಗಳು ಹಾಗೂ ರೈಲ್ವೆ ಮಾರ್ಗಗಳು ಕೊಡಗಿನ ಅಭಿವೃದ್ಧಿಗೆ ಪÀÇರಕವಾಗಿದ್ದು, ಇದನ್ನು ವಿರೋಧಿಸುವದು ಸರಿಯಲ್ಲವೆಂದು ದುರ್ಗಾಪ್ರಸಾದ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಸಿ. ಸಾಬು ಮತ್ತು ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು.