ಸಿದ್ದಾಪುರ, ಸೆ. 6 : ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿಯು ಅದ್ಧೂರಿಯಾಗಿ ನಡೆಯಿತು. ಧ್ವಜಾರೋಹಣವನ್ನು ಪೃಥ್ವಿ ಕರುಣಾಕರನ್ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಸಿದ್ದಾಪುರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ನಾರಾಯಣ ಗುರುಗಳ ಪ್ರತಿಮೆಯನ್ನೊಳಗೊಂಡ ಅಲಂಕೃತ ಮಂಟಪದಲ್ಲಿ ವಾದÀ್ಯಮೇಳಗಳೊಂದಿಗೆ ಸಿದ್ದಾಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಸ್ವರ್ಣ ಮಾಲಾದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎನ್.ಡಿ.ಪಿ. ಕೊಡಗು ಜಿಲ್ಲಾ ಸಂಯೋಜಕ ಕೆ.ಎನ್. ವಾಸು, ಎಸ್.ಎನ್.ಡಿ.ಪಿ. ಸಂಘಟನೆಯು ರಾಜಕೀಯ ರಹಿತ ಸಂಘಟನೆಯಾಗಿದ್ದು, ಎಲ್ಲಾ ಸರ್ಕಾರಗಳು ಎಸ್.ಎನ್.ಡಿ.ಪಿ. ಸಂಘಟನೆಗಳ ಗುರುಭವನಗಳಿಗೂ ಅನುದಾನ ನೀಡಿದ್ದು, ಹಿಂದುಳಿದ ವರ್ಗದ ಮಂದಿಗೆ ಸೌಲಭ್ಯಯಗಳನ್ನು ನೀಡುತ್ತಾ ಬಂದಿದೆ ಎಂದರು. ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಂಘಟಿತರಾಗಿ ಸಂಘಟನೆಯ ಏಳಿಗೆಗಾಗಿ ಎಲ್ಲರೂ ಕೈಜೋಡಿಸಬೇಕೆಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕೇರಳದ ವಲ್ಸನ್ನ್ ತಿಲ್ಲಂಗೇರಿ ಮಾತನಾಡಿ, ನಾರಾಯಣಗುರುಗಳು ದೇವರ ಸಮಾನರಾಗಿದ್ದಾರೆಂದು ಬಣ್ಣಿಸಿದರು. ಕೇರಳ ರಾಜ್ಯದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಗುರುಗಳು ಶೋಷಿತರ ಏಳಿಗೆಗಾಗಿ ದುಡಿದಂತ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಮಾಜದ ಒಳಿತಿಗಾಗಿ ಹಾಗೂ ಶೋಷಿತ ವರ್ಗದವರ ಏಳಿಗೆಗಾಗಿ ಶ್ರಮಿಸಿದ

(ಮೊದಲ ಪುಟದಿಂದ) ನಾರಾಯಣ ಗುರುಗಳ ತತ್ವ ಸಿದ್ಧಾಂತ ಹಾಗೂ ಆದರ್ಶಗಳನ್ನು ಮೈಗೂಡಿಸಿ ಕೊಂಡಿರಬೇಕೆಂದು ಕರೆ ನೀಡಿದರು. ನಾರಾಯಣ ಗುರುಗಳು ಕಟ್ಟಕಡೆಯ ವರ್ಗದವರಿಗೂ ಸೌಲಭ್ಯಗಳು ಸಿಗುವಂತೆ ಹೋರಾಡಿದ ಮಹಾನ್ ವ್ಯಕ್ತಿ ಎಂದು ಹೇಳಿದ ಅವರು, ಹಿಂದುಳಿದ ವರ್ಗದವರು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಮನುಷ್ಯನಿಗೆ ಜಾತಿಯ ಬಗ್ಗೆ ಅಭಿಮಾನವಿರಬೇಕೆ ಹೊರತು ದುರಾಭಿಮಾನವಿರಬಾರದು, ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಎಲ್ಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಅಹಿಂದಾ ಮುಖಂಡ ಟಿ.ಪಿ ರಮೇಶ್ ಮಾತನಾಡಿ, ಸಂಘಟನೆಗಳು ದುರ್ಬಲವಾಗದೆ ಪರಸ್ಪರ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಹಿಂದುಳಿದ ವರ್ಗದವರು ಸಂಘಟಿತ ರಾಗಬೇಕೆಂದು ಕರೆ ನೀಡಿದರು.

ವಿಧಾನಪರಿಷತ್ತಿನ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ನಾರಾಯಣ ಗುರುಗಳು ಸಾಮಾಜಿಕ ಚಿಂತಕರಾಗಿದ್ದು, ಅಸ್ಪøಶ್ಯತೆಯನ್ನು ಹೋಗಲಾಡಿಸಿದಂತ ಕ್ರಾಂತಿಯ ಹರಿಕಾರರಾಗಿದ್ದರು, ಗುರುಗಳ ತತ್ವ ಹಾಗೂ ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿ ಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಣದಲ್ಲಿ ಸಂಸ್ಕøತಕ್ಕೆ ಮೊದಲ ಆದ್ಯತೆ ನೀಡಿದ ಗುರುಗಳು ಅಸ್ಪøಶ್ಯತೆಯನ್ನು ಹೋಗಲಾಡಿಸಿ ಹಿಂದುಳಿದ ವರ್ಗಗಳ ಮಂದಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಂತ ವ್ಯಕ್ತಿಗಳಾಗಿದ್ದಾರೆ ಎಂದ ಅವರು ರಾಜ್ಯ ಸರ್ಕಾರ ನಾರಾಯಣ ಗುರುಗಳ ಜಯಂತಿ ಯನ್ನು ಸರ್ಕಾರಿ ಕಾರ್ಯ ಕ್ರಮವಾಗಿ ಆಚರಿಸುತ್ತಿರುವದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ನಾರಾಯಣ ಗುರುಗಳು ಹಿಂದುಳಿದ ವರ್ಗಗಳ ಏಳಿಗೆಗೆ ಸಾಕಷ್ಟು ಶ್ರಮವಹಿಸಿದಂತ ಮಹಾನ್ ವ್ಯಕ್ತಿಯಾಗಿದ್ದರು. ಇವರ ಸಂದೇಶದಂತೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಕರೆ ನೀಡಿದರು. ಮನುಷ್ಯನಲ್ಲಿ ಭ್ರಾತೃತ್ವವಿರಬೇಕೆಂದು ತಿಳಿಸಿದ ಅವರು ಇತ್ತಿಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಸಂಘಟನೆಗಳಲ್ಲಿ ಕೆಲವು ಸಮಸ್ಯೆಗಳು ಸಹಜ ಅದನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮವು ನೆರೆದಿದ್ದವರ ಮನಸೂರೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಅಧ್ಯಕ್ಷ ಕೆ.ಜಿ. ಬಾಲಕೃಷ್ಣ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ಗ್ರಾ.ಪಂ. ಸದಸ್ಯ ಎಂ.ಕೆ. ಮಣಿ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್, ಸಂಘಟನೆಯ ಪ್ರಮುಖರು ಹಾಜರಿದ್ದರು. ರಾಜನ್ ಸ್ವಾಗತಿಸಿ, ಗಿರೀಶ್ ವಂದಿಸಿ, ಟಿ.ಸಿ. ಅಶೋಕ್ ನಿರೂಪಿಸಿದರು.

ಮಡಿಕೇರಿ : ಜಗತ್ತಿನಲ್ಲಿ ಇರುವದು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸತ್ಯ ಪ್ರತಿಪಾದಿಸಿದ್ದ ದಾರ್ಶನಿಕ ಹಾಗೂ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾ ಶ್ರಯದಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಹುಟ್ಟಿದ್ದು ಕೇರಳದಲ್ಲಿ, ಆದರೂ ಅವರ ಸಂದೇಶಗಳು ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸಿದೆ. ತತ್ವ, ಪರಂಪರೆ ಮೂಲಕ ಸಮಾಜಮುಖಿಯಾಗಿ ದೇಶ ವಿದೇಶಗಳಿಗೆ ಮಾಹಿತಿ ನೀಡಿ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ನಾರಾಯಣ ಗುರು ಅವರು ಕೇರಳ ರಾಜ್ಯದಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದ್ದರು. ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಶ್ರಮಿಸಿದರು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ಮಾತನಾಡಿ, ಮತ ಯಾವದಾದರೂ ಪರವಾಗಿಲ್ಲ, ಮನುಷ್ಯನಾಗಿ ಬಾಳು ಎಂದು ಸಮಾಜಕ್ಕೆ ತಿಳಿಸಿದವರು ನಾರಾಯಣ ಗುರುಗಳು. ಅವರ ತತ್ವಗಳನ್ನು ಪಾಲನೆ ಮಾಡುವಂತಾಗಬೇಕು ಎಂದು ಹೇಳಿದರು. ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಮಾತನಾಡಿ, ಮನುಕುಲ ಕುಟುಂಬಕ್ಕೆ ವಿಶ್ವ ಮಾನವ ಸಂದೇಶವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಇಡೀ ಮಾನವ ಜನಾಂಗದ ಗುರು ಎಂದು ಬಣ್ಣಿಸಿದರು. ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ. ಆನಂದ ರಘು ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಾರಾಯಣ ಗುರು ಜೀವನ ಚರಿತ್ರೆ ಕುರಿತು ಕೈಪಿಡಿ ಹೊರತರಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಿಲ್ಲವ ಸಮಾಜದ ತಾಲೂಕು ಘಟಕ ಅಧ್ಯಕ್ಷÀ ರಾಜಶೇಖರ್ (ಮಡಿಕೇರಿ), ಕೃಷ್ಣಪ್ಪ (ಸೋಮವಾರಪೇಟೆ), ಪ್ರಮುಖರಾದ ಭಾಸ್ಕರ್, ಸತೀಶ್ ಇತರರು ಇದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಪ್ಪ ಗೌಡ ಮತ್ತು ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು, ಮಣಜೂರು ಮಂಜುನಾಥ್ ನಿರೂಪಿಸಿದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ವಂದಿಸಿದರು. ಮಂಗಳವಾರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರಿಗೆ ಸಭೆಯ ಆರಂಭದಲ್ಲಿ ಸಂತಾಪ ಸೂಚಿಸಲಾಯಿತು.