ಮಡಿಕೇರಿ, ಸೆ. 5 : ಇಲ್ಲಿನ ಕೆಎಸ್‍ಆರ್‍ಟಿಸಿ ಡಿಪೋ ಬಳಿ ಇರುವ ಶಾಂತಿನಿಕೇತನ ಬಡಾವಣೆಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 39ನೇ ವರ್ಷ ಗೌರಿಗಣೇಶ ಉತ್ಸವ ಮೂರ್ತಿಯ ವಿಸರ್ಜನೋತ್ಸವ ಭವ್ಯ ಶೋಭಾ ಯಾತ್ರೆಯೊಂದಿಗೆ ತಾ. 6ರಂದು (ಇಂದು) ಸಂಜೆ ನೆರವೇರಲಿದೆ.

ಅಲಂಕೃತ ಮಂಟಪದೊಂದಿಗೆ ಶ್ರೀ ಗಣೇಶ ಪುರಾಣದಿಂದ ಆಯ್ದ ‘ಮೂಷಿಕಾಸುರನ ಶಾಪವಿಮೋಚನೆ’ ಕಥಾಹಂದರವನ್ನೊಳಗೊಂಡ ಚಲನ-ವಲನಗಳ ಪ್ರದರ್ಶನ ದೊಂದಿಗೆ ಶೋಭಾಯಾತ್ರೆಯೊಂದಿಗೆ ತೆರಳಿ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವದು.

ಸಂಜೆ 6 ಗಂಟೆಯಿಂದ ಯಾತ್ರೆ ಆರಂಭವಾಗಲಿದ್ದು, ಶಾಂತಿನಿಕೇತನ ಜಂಕ್ಷನ್, ಡಿಪೋ ಮುಂಭಾಗ, ಜ. ತಿಮ್ಮಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ವೃತ್ತ, ಮಹದೇವಪೇಟೆ ಹಾಗೂ ಬಸವೇಶ್ವರ ದೇವಾಲಯದ ಎದುರು ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಮಂಟಪದ ಪ್ರದರ್ಶನ ನಡೆಯಲಿದೆ.

ಕಲಾವಿದ ರವಿಅಣ್ಣು ಮತ್ತು ಶೇಖರ್, ವಿನು, ಮನು, ಗಿರೀಶ್, ವರುಣ್, ರಮೇಶ್, ಪಪ್ಪಿ, ಸುಜಿತ್ ಅವರುಗಳ ತಂಡ ಕಲಾಕೃತಿಗಳನ್ನು ರಚಿಸಿದ್ದು, ಆರ್.ಬಿ. ರವಿ ಮತ್ತು ಸಂತೋಷ್ ಕಾಲೂರು ಕಥಾ ಸಂಕಲನ ಹೆಣೆದಿದ್ದಾರೆ. ಗುರು ಲೈಟಿಂಗ್ಸ್‍ನ ಲೋಕೇಶ್‍ರಿಂದ ಧ್ವನಿವರ್ಧಕ, ಬೆಂಗಳೂರಿನ ಆರ್.ಟಿ. ಫೈರಿಂಗ್ ವಕ್ರ್ಸ್‍ನವರಿಂದ ಕೂಲ್ ಫೈರಿಂಗ್ ಮತ್ತು ಕೂಲ್ ರೇಂಜ್ ಎಂಬ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ.

ಪೂಜಾ ಲೈಟಿಂಗ್ಸ್‍ನ ಬೋರ್ಡ್ ಅಳವಡಿಸಲಿದ್ದು, ವಿಜಯ್, ಕೀರ್ತನ್, ಸುದರ್ಶನ್, ರಾಜೇಶ್ ಅವರುಗಳ ತಂಡ ಚಲನ ವಲನಗಳನ್ನು ನಿರ್ವಹಿಸಲಿದ್ದಾರೆ.