ಮಡಿಕೇರಿ, ಸೆ. 6: ಕೆಎಫ್‍ಡಿ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿರುವ ಬಿಜೆಪಿ ಮಂದಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ತಮ್ಮದೇ ಸರ್ಕಾರದ ಮೂಲಕ ಸಂಘÀಟನೆಗಳನ್ನು ನಿಷೇಧಿಸಲಿ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಅಶ್ರÀಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್‍ಐ ಮತ್ತು ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಬೈಕ್ ರ್ಯಾಲಿಗೆ ಯಾವದೇ ಕಾರಣಕ್ಕು ಅವಕಾಶ ನೀಡಬಾರದು ಎಂದರು. ಕೇಂದ್ರ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವದರಿಂದ ಈ ಎರಡು ಸಂಘಟನೆಗಳನ್ನು ನಿಷೇಧಿಸಬಹುದಲ್ಲ ಎಂದು ಪ್ರಶ್ನಿಸಿದರು. ಸಂಘÀಟನೆಗಳನ್ನು ನಿಷೇಧಿಸಿದರೆ ಕಾನೂನು ಹೋರಾಟ ನಡೆಸಲು ಸಿದ್ಧವಿರುವದಾಗಿ ಹೇಳಿದರು.

ಕಕ್ಕಬ್ಬೆಯ ಭಗವತಿ ದೇವಾಲಯ ದಲ್ಲಿ ಹÀಸುವಿನ ತ್ಯಾಜ್ಯ ಹಾಕಿರುವ ಘಟನೆ ಅತ್ಯಂತ ಖಂಡನೀಯ ವಾಗಿದ್ದು, ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು ಎಂದರು.

ನೆಲ್ಯಹುದಿಕೇರಿಯಲ್ಲಿ ಕಳ್ಳಸಾಗಾಣಿಕೆಯಾಗುತ್ತಿದೆ ಎಂದು ಆರೋಪಿಸಿ ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರು ದಾಖಲಾತಿಗಳಿವೆ ಎಂದು ತಿಳಿಸಿದರು ಯಾರದೋ ಒತ್ತಡಕ್ಕೆ ಮಣಿದಿದ್ದ ಪೊಲೀಸರು ಹಸುಗಳನ್ನು ವಶಪಡಿಸಿಕೊಂಡಿದ್ದರು ಎಂದು ಆರೋಪಿಸಿದರು. ದಾಖಲಾತಿಗಳನ್ನು ನೀಡಿದ ನಂತರ ನ್ಯಾಯಾಲಯ ಹಸುಗಳನ್ನು ಮರಳಿಸಿದ್ದು, ಈ ಕ್ರಮ ಪೊಲೀಸರಿಂದ ಯಾಕೆ ಆಗಿಲ್ಲವೆಂದು ಪ್ರಶ್ನಿಸಿದರು.

ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ, ಕೇಂದ್ರದ ಆಮದು ನೀತಿಯಿಂದಾಗಿ ಕೊಡಗಿನ ಕಾಳು ಮೆಣಸು, ಏಲಕ್ಕಿ ಬೆಲೆ ಕುಸಿತಗೊಂಡಿದೆ ಇದು ಖಂಡನೀಯವೆಂದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶೌಕತ್ ಆಲಿ ಮಾತನಾಡಿ, ಪ್ರಚೋದನಕಾರಿ ಭಾಷಣ ಮಾಡಿರುವ ಕಂಠಿ ಕಾರ್ಯಪ್ಪ ಅವರ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಬಷೀರ್ ಹಾಗೂ ನಗರದಸಭಾ ಸದಸ್ಯ ಮನ್ಸೂರು ಉಪಸ್ಥಿತರಿದ್ದರು.