ನಾಪೆÇೀಕ್ಲು, ಸೆ. 6: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದÀ ಕಬ್ಬಿಣಕಾಡು ಬಳಿಯಿರುವ ಜಿಲ್ಲೆಯ ಪ್ರತಿಷ್ಠಿತ ರೆಸಾರ್ಟ್‍ಗಳಲ್ಲೊಂದಾದ ತಾಮರ ರೆಸಾರ್ಟ್ ಮುಚ್ಚಲು ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸೆ. 11 ವರೆಗೆ ಗಡುವು ನೀಡಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಡಿದ ಆದೇಶದ ಹಿನ್ನಲೆಯಲ್ಲಿ ಪಂಚಾಯಿತಿ ಕಚೇರಿಯಲ್ಲಿ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಿಗೆ ನೀಡಿದ ಆದೇಶದಲ್ಲಿ ವನ್ಯ ಜೀವಿ ತಾಣದಿಂದ ತಾಮರ ರೆಸಾರ್ಟ್ ಕೇವಲ 9.5 ಕಿ.ಮಿ. ದೂರವಿರುವ ಕಾರಣ ಕಾನೂನು ಉಲ್ಲಂಘಿಸ ಲಾಗಿದೆ. ಆದುದರಿಂದ ಸದರಿ ರೆಸಾರ್ಟ್ ಮುಚ್ಚಿಸಬೇಕು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ವಯಕೋಲ್ ಉಸ್ಮಾನ್, ಸದಸ್ಯರಾದ ಬಾಚಮಂಡ ಭರತ್ ಪೂವಣ್ಣ, ಅಪ್ಪಾರಂಡ ವಿಜು ಪೂಣಚ್ಚ, ಮುಕ್ಕಾಟಿರ ರಮೇಶ್, ಕುಂಡಂಡ ರಜಾಕ್, ನಾಸಿರ್ ಮಕ್ಕಿ, ಕಲಿಯಂಡ ಬೀನಾ ನವೀನ್, ಬಡಕಡ ಪ್ರವೀಣಿ, ಕುಡಿಯರ ಬೋಜಕ್ಕಿ, ಕುಂಡಂಡ ಆಮೀನಾ, ಅಭಿವೃದ್ಧಿ ಅಧಿಕಾರಿ ಸಚಿನ್ ಇದ್ದರು.