ಮಡಿಕೇರಿ, ಸೆ. 6: ಕೂರ್ಗ್ ಓಲ್ಡ್ ಸ್ಟ್ಟೂಡೆಂಟ್ಸ್ ಅಸೋಸಿಯೇಷನ್ ಯುಎಇ ಸಹಯೋಗದೊಂದಿಗೆ ಕೂರ್ಗ್ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ “ಕೂರ್ಗ್ ದುಬೈ ಬಕ್ರೀದ್ ಮೀಟ್ ಸ್ಪೋಟ್ರ್ಸ್ ಡೇ” ನಡೆಯಿತು.

ಕ್ರೀಡಾಕೂಟವನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್ ಹಾಗೂ ಧರ್ಮ ಗುರು ಮಜೀದ್ ಸಹದಿ ಕಡಂಗ ಉದ್ಘಾಟಿಸಿದರು,

ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಹಗ್ಗ ಜಗ್ಗಾಟ ಮತ್ತು ಓಟದ ಸ್ಪರ್ಧೆಗಳು ನಡೆದವು. ಈ ಬಾರಿಯ ಕ್ರಿಕೆಟ್ ಚಾಂಪಿಯನ್ ಪಟ್ಟವನ್ನು ನೌಶೀರ್ ನಾಯಕತ್ವದ ಎಎಂಸಿಸಿ ಬಾಯ್ಸ್ ಎಡಪಾಲ ತಂಡ ಪಡೆದರೆ, ರನ್ನರ್ಸ್ ತಂಡವಾಗಿ ಖಲೀಲ್ ನಾಯಕತ್ವದ ಎಸ್‍ವೈಸಿ ಚಾಮೆ ತಂಡ ಹೊರ ಹೊಮ್ಮಿತು. ವಾಲಿಬಾಲ್ ಪಂದ್ಯದಲ್ಲಿ ಕೊಂಡಂಗೇರಿ ತಂಡ ಮೊದಲ ಪ್ರಶಸ್ತಿಯನ್ನು ಗೆದ್ದರೆ ಎರಡನೇಯ ಸ್ಥಾನವನ್ನು ಅಯ್ಯಂಗೇರಿ ತಂಡ ಪಡೆಯಿತು.

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ರಂಜನ್ ಜಯಪ್ಪ ನಾಯಕತ್ವದ ಕೆಎಸ್‍ಎ ಸೋಮವಾರಪೇಟೆ ತಂಡ ಮೊದಲ ಬಹುಮಾನ ಗೆದ್ದರೆ ಪೈನೆರಿ ಫ್ರೆಂಡ್ಸ್ ಕುಂಜಿಲ ತಂಡ ಎರಡನೇ ಸ್ಥಾನ ಪಡೆಯಿತು. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗುಂಡಿಕೆರೆಯ ಮೀತಲ್ ತಂಡ ಸುಫಿಯಾನ್ ಮೊದಲನೇ ಸ್ಥಾನವನ್ನು, ನೂರುದ್ದೀನ್ ವೀರಾಜಪೇಟೆ ಹಾಗೂ ಷಂಶು ಕುಶಾಲನಗರ ನಂತರದ ಸ್ಥಾನ ಗಳಿಸಿತು. ಸಮಾರೋಪ ಸಮಾರಂಭದಲ್ಲಿ ಗಣ್ಯರು ಬಹುಮಾನಗಳನ್ನು ವಿತರಿಸಿದರು.