ಮಡಿಕೇರಿ, ಸೆ. 5: ದಿನದಿಂದ ದಿನಕ್ಕೆ ಕೊಡಗಿನ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳ ಆಹಾರೋತ್ಪನ್ನದ ಮರಗಳು ನಾಶವಾಗುತ್ತಿದ್ದು, ಪರಿಸರಕ್ಕೆ ತೀವ್ರ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಒಟ್ಟು ಪ್ರಕರಣವನ್ನು ಸಿಬಿಐ ತನಿಖೆÉಗೆ ಒಪ್ಪಿಸಬೇಕೆಂದು ಕೊಡಗು ಬೆಳೆÉಗಾರರ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯರು ಹಾಗೂ ಸೇವ್ ಕೊಡಗು ಫೆÀÇೀರಂನ ಪ್ರಮುಖರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎ.ಬೋಪಣ್ಣ, ಕೊಡಗಿನ ರಕ್ಷಿತಾರಣ್ಯ ಗಳು ಅನಾಥ ಪ್ರಜ್ಞೆಯಲ್ಲಿದ್ದು, ಮುಂದೊಂದು ದಿನ ಸಂಪÀÇರ್ಣವಾಗಿ ನಾಶವಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿ ವರ್ಷ ಸಾವಿರಾರು ಏಕರೆ ಅರಣ್ಯ ಬೆಂಕಿಗೆ ಆಹುತಿಯಾಗುತ್ತಿದೆ. ಮತ್ತೊಂದೆಡೆ ಅರಣ್ಯ ಪ್ರದೇಶಕ್ಕೆ ಮಾರಕವಾಗುವ ರೀತಿ ಗಾಂಧಿ ಗುಲಾಬಿ ಗಿಡಗಳು ತುಂಬಿ ಹೋಗಿವೆ. ಸಸ್ಯ ಪ್ರಭೇದಗಳು ಹಾಗೂ ವನ್ಯ ಜೀವಿಗಳ ಆಹಾರಕ್ಕೆ ಪÀÇರಕವಾದ ಯಾವದೇ ಸಸ್ಯಗಳ ಅಭಿವೃದ್ಧಿಯಾಗುತ್ತಿಲ್ಲ. ಗಾಂಧಿ ಗುಲಾಬಿಯಿಂದಾಗಿ ಇದರಲ್ಲಿ ಉತ್ಪತ್ತಿಯಾಗುವ ಉಣುಗು ಎನ್ನುವ ಕೀಟದಿಂದ ಅರಣ್ಯದೊಳಗೆ ವನ್ಯಜೀವಿಗಳ ವಾಸಕ್ಕೆ ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಕಾಡಿನಲ್ಲಿರುವ ಪ್ರಾಣಿಗಳು ಉಣುಗಿನ ಉಪಟಳದಿಂದ ತಪ್ಪಿಸಿಕೊಳ್ಳಲು ನಾಡಿಗೆ ಲಗ್ಗೆ ಇಟ್ಟು ಆಸ್ತಿ ಪಾಸ್ತಿಯನ್ನು ನಷ್ಟ ಮಾಡುತ್ತಿವೆ ಎಂದು ಬೋಪಣ್ಣ ಅಭಿಪ್ರಾಯಪಟ್ಟರು.

ನಿಷ್ಪ್ರಯೋಜಕ ಗಾಂಧಿ ಗುಲಾಬಿ ಹೆಚ್ಚಾಗಿರುವ ಅರಣ್ಯ ವ್ಯಾಪ್ತಿಯ ಪಕ್ಕದಲ್ಲಿರುವ 55 ಗ್ರಾಮಗಳನ್ನು ಅತಿ ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪರಿಸರವಾದಿಗಳೊಂದಿಗೆ ಕೆಲವು ಅರಣ್ಯಾಧಿಕಾರಿಗಳು ಕೂಡ ಶಾಮೀಲಾಗಿ ರಾಜಕಾರಣಿಗಳ ಪ್ರಭಾವ ದಿಂದ ಪರಿಸರ ನಾಶವಾಗುತ್ತಿದೆ ಯೆಂದು ಬೋಪಣ್ಣ ಆರೋಪಿಸಿದರು.

ಅರಣ್ಯ ನಾಶ ಮಾಡುವದ ಕ್ಕಾಗಿಯೇ ಅರಣ್ಯ ಪ್ರದೇಶದಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ವಿದೇಶಿ ಹಣದ ವ್ಯಾಮೋಹಕ್ಕಾಗಿ ಪರಿಸರವಾದಿಗಳು ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ಅರಣ್ಯದೊಳಗಿದ್ದ ಆದಿವಾಸಿಗಳನ್ನು ಹೊರ ಹಾಕಿದ ಪರಿಣಾಮವಾಗಿ ಮತಾಂತರ ಹೆಚ್ಚಾಗುತ್ತಿದೆ. ಹೀಗೆ ಮತಾಂತರಗೊಂಡ ಅರಣ್ಯ ವಾಸಿಗಳು ಮತ್ತೆ ಅರಣ್ಯ ಭಾಗಕ್ಕೆ ಬರಲು ಒಪ್ಪದೆ ಇರುವದು ಅರಣ್ಯ ಅನಾಥವಾಗಲು ಮತ್ತು ನಾಶವಾಗಲು ಕಾರಣವೆಂದು ಬೋಪಣ್ಣ ಆರೋಪಿಸಿದರು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ವಿದೇಶಿ ಕೈವಾಡವಿರುವ ಬಗ್ಗೆ ಶಂಕೆ ಇದ್ದು, ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಗೆ ಬರಲಿರುವ ಯೋಜನೆ ಗಳಾದ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಬೆರಳೆಣಿಕೆಯಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ವರ್ಗಕ್ಕೆ ಸೇರಿದ ಜನರು ಮಾತ್ರ ಈ ಯೋಜನೆಗಳ ವಿರುದ್ಧ ಮಾತನಾಡು ತ್ತಿದ್ದು, ಸರ್ಕಾರ ಯಾವದೇ ಒತ್ತಡಗಳಿಗೆ ಮಣಿಯದೆ ಯೋಜನೆ ಯನ್ನು ಅನುಷ್ಠಾನಗೊಳಿಸಬೇಕೆಂದು ಬೋಪಣ್ಣ ಒತ್ತಾಯಿಸಿದರು.

ಪ್ರÀಮುಖರಾದ ಬಿ.ಟಿ. ದಿನೇಶ್ ಮಾತನಾಡಿ, ಪರಿಸರ ನಾಶದ ಷಡ್ಯಂತ್ರ ದಲ್ಲಿ ಸಿಲುಕಿರುವ ರಾಜಕಾರಣಿಗÀಳು ಪರಿಸರವಾದಿಗಳಿಗೆ ತಲೆಬಾಗಿದ್ದಾರೆ ಎಂದು ಆರೋಪಿಸಿದರು. ಜನರ ತೆರಿಗೆಯಿಂದ ವೇತನ ಪಡೆಯುತ್ತಿರುವ ಅರಣ್ಯ ಅಧಿಕಾರಿಗಳು ಅರಣ್ಯವನ್ನು ರಕ್ಷಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿ ದ್ದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಅರಣ್ಯ ಪ್ರದೇಶಗಳಲ್ಲಿನ ಅಕ್ರಮಗಳ ತನಿಖೆÉ ಸಿಬಿಐ ಮೂಲಕವೆ ತನಿಖೆ ಆಗುವದು ಸೂಕ್ತವೆಂದು ಅಭಿಪ್ರಾಯಪಟ್ಟ ದಿನೇಶ್, ಆದಿವಾಸಿಗಳ ಕಡೆಗಣನೆ ಅತ್ಯಂತ ಖಂಡನೀಯವೆಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಿ.ಎಂ. ನಾಣಯ್ಯ, ಉದಯಶಂಕರ್ ಹಾಗೂ ಮಾಣೀರ ಮುತ್ತಪ್ಪ ಉಪಸ್ಥಿತರಿದ್ದರು.