ಮಡಿಕೇರಿ ಸೆ.5 : ರಾಜ್ಯ ಬಿಜೆಪಿ ಯುವ ಮೋರ್ಚಾ ಸೆ.7 ರಂದು ಆಯೋಜಿಸಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ಸರ್ಕಾರ ತಡೆಯಲು ಮುಂದಾದರೂ ಅದನ್ನು ಲೆಕ್ಕಿಸದೆ ಮಂಗಳೂರು ರ್ಯಾಲಿಯಲ್ಲಿ ಪಾಲ್ಗೊಳ್ಳುವದಾಗಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಮೋರ್ಚಾದ ಜಿಲ್ಲಾಧ್ಯಕ್ಷÀ ಕಾಳನ ರವಿ, ಬೈಕ್ ರ್ಯಾಲಿಗೆ ಅಡ್ಡಿಪಡಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಎಫ್‍ಐ, ಕೆಎಫ್‍ಡಿ, ಎನ್‍ಡಿಎಫ್, ಎಸ್‍ಡಿಪಿಐ ಸಂಘÀಟನೆ ಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿಯನ್ನು ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಗುರುವಾರ ನಡೆಯುವ ಬೈಕ್ ರ್ಯಾಲಿಗೆ ಪÀÇರ್ವಭಾವಿಯಾಗಿ ತಾ. 6 ರಂದು ಕುಶಾಲನಗರದ ಗಣಪತಿ ದೇವಾಲ ಯದ ಬಳಿ ಹಾಗೂ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರ್ಯಾಲಿಗೆ ಚಾಲನೆ ನೀಡಲಾಗುವದು. ಕುಶಾಲನಗರದಲ್ಲಿ ಹತ್ಯೆಗೀಡಾದ ಪ್ರವೀಣ್ ಪೂಜಾರಿಯ ತಂದೆ ಹಾಗೂ ಮಡಿಕೇರಿಯಲ್ಲಿ ಮೃತರಾದ ವಿಹೆಚ್‍ಪಿಯ ಪ್ರಮುಖರಾದ ಕುಟ್ಟಪ್ಪ ಅವರ ಸಂಬಂಧಿಕರು ರ್ಯಾಲಿಗೆ ಚಾಲನೆ ನೀಡಲಿದ್ದಾರೆ ಎಂದರು.

ರ್ಯಾಲಿಗೆ ಅವಕಾಶ ಕೋರಿ ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಅವರಿಂದ ಲಿಖಿತ ರೂಪದಲ್ಲಿ ಯಾವದೇ ಉತ್ತರ ದೊರಕಿಲ್ಲವೆಂದು ತಿಳಿಸಿದ ಕಾಳನ ರವಿ, ಅಡಚಣೆÉ ಎದುರಾದರೂ ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸುವದಾಗಿ ತಿಳಿಸಿದರು.

ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಧನಂಜಯ ಅಗೋಳಿಕಜೆ ಮಾತನಾಡಿ, ರಾಷ್ಟ್ರಾಭಿಮಾನದ ವಿಚಾರದಲ್ಲಿ ಯಾವದೇ ರಾಜಿಗೆ ಸಿದ್ಧವಿಲ್ಲವೆಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಸಂಘÀಟನೆಗಳ 12 ಮಂದಿ ಕಾರ್ಯಕರ್ತರ ಹತ್ಯೆಯಾಗಿದೆ. ಇದನ್ನು ಖಂಡಿಸಿ ಕೆಲವು ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬೈಕ್ ರ್ಯಾಲಿ ನಡೆಸುತ್ತಿದ್ದು, ಇದನ್ನು ತಡೆಯಲು ಮುಂದಾಗುವ ಮೂಲಕ ಪೆÀÇಲೀಸರು ಅಶಾಂತಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

ಖಜಾಂಚಿ ಕೀರ್ತನ್ ಕಡ್ಲೇರ ಮಾತನಾಡಿ, ಬೈಕ್ ರ್ಯಾಲಿಯಿಂದ ಯಾವದೇ ಕಾನೂನು ಸುವ್ಯವಸ್ಥೆ ಹದಗೆಡುವದಿಲ್ಲ. ಬದಲಿಗೆ ರ್ಯಾಲಿಯನ್ನು ತಡೆಯುವದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾದ ಉಪಾಧ್ಯಕ್ಷ ಅಯ್ಯಪ್ಪ ಉಪಸ್ಥಿತರಿದ್ದರು.