ಬಿರುನಾಣಿ, ಸೆ. 6: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಲಯನ್ಸ್ ಸಂಸ್ಥೆ ಗೋಣಿಕೊಪ್ಪ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಬಿರುನಾಣಿಯ ಸುಜ್ಯೋತಿ ವಿದ್ಯಾಸಂಸ್ಥೆ, ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸ್ಥಳೀಯ ಟಿ. ಶೆಟ್ಟಿಗೇರಿ ಜಿ.ಎಂ.ಪಿ. ಶಾಲೆಯಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದ ಒಂದನೇ ತರಗತಿಯಿಂದ ಐದನೇ ತರಗತಿ ವಿಭಾಗದ ಇಂಗ್ಲೀಷ್ ಕಂಠಪಾಠ ಹಾಗೂ ಲಘು ಸಂಗೀತ ಸ್ಪರ್ಧೆಯಲ್ಲಿ ಕೆ.ಎನ್. ಗ್ರಂಥ ಗಂಗಮ್ಮ ಪ್ರಥಮ ಭಕ್ತಿಗೀತೆ ತೃತೀಯ ಸ್ಥಾನ. ಆಶುಭಾಷಣ ಸ್ಪರ್ಧೆಯಲ್ಲಿ ಕೆ.ಆರ್. ಪ್ರೀತಲ್ ಪೊನ್ನಮ್ಮ ಪ್ರಥಮ, ಧಾರ್ಮಿಕ ಪಠಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಕ್ಲೇ ಮಾಡೆಲಿಂಗ್ ಕೆ.ಎನ್. ಅನೂಪ್ ಅಯ್ಯಪ್ಪ ದ್ವಿತೀಯ, ಕಥೆ ಹೇಳುವದು ತೃತೀಯ ಸ್ಥಾನ ಪಡೆದಿದ್ದಾರೆ. ಚಿತ್ರಕಲೆ ಸ್ಪರ್ಧೆಯಲ್ಲಿ ಕೆ.ಎ. ಧ್ರುವ ಗಣಪತಿ ತೃತೀಯ ಸ್ಥಾನ, ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಕೆ.ಎಂ. ಮೌರ್ಯ, ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ರಸಪ್ರಶ್ನೆಯಲ್ಲಿ ಪ್ರೀತಲ್ ಪೊನ್ನಮ್ಮ ಮತ್ತು ತಂಡ ಪ್ರಥಮ ಕೋಲಾಟದಲ್ಲಿ ಕೆ.ಎನ್. ಗಾಯಕ್ ಪೊನ್ನಣ್ಣ ಮತ್ತು ತಂಡ ದ್ವಿತೀಯ ಜಾನಪದ ನೃತ್ಯದಲ್ಲಿ ಎಂ.ಪಿ. ಬೋಪಯ್ಯ ಮತ್ತು ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.

6 ರಿಂದ 7ನೇ ತರಗತಿ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠದಲ್ಲಿ ಶಿವಾನಿ ಪ್ರಥಮ ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಕೆ.ಜೆ. ನಿಹಾಲ್ ನಾಣಯ್ಯ ಪ್ರಥಮ, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಕೆ.ಪಿ. ಖೈನಿ ತೃತೀಯ, ಕಥೆ ಹೇಳುವದು ಸ್ಪರ್ಧೆಯಲ್ಲಿ ಬಿ.ಎನ್. ಗ್ರೀಷ್ಮ ತೃತೀಯ, ಜಾನಪದ ನೃತ್ಯ ಎಂ.ಯು. ಗ್ರೀಯಾ ಮತ್ತು ತಂಡ ತೃತೀಯ, ಕೋಲಾಟದಲ್ಲಿ ಕೆ.ಜೆ. ಕಾಂಚನ್ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿದ್ದು, ಸಂಸ್ಥೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.