ಗೋಣಿಕೊಪ್ಪಲು, ಸೆ. 7: ಮಾನಿಲ್ ಅಯ್ಯಪ್ಪ ಕೊಡವ, ಅಮ್ಮಕೊಡವ ಕೌಟುಂಬಿಕ ವಾಲಿಬಾಲ್ ಕ್ರೀಡಾಕೂಟ ತಾ. 22 ರಿಂದ ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ನಡೆಯಲಿದೆ.

ಕೈಲ್‍ಪೊಳ್ದ್ ಪ್ರಯುಕ್ತ ನಡೆಯುವ 6ನೇ ವರ್ಷದ ಕೊಡವ, ಅಮ್ಮಕೊಡವ ಕ್ರೀಡಾಕೂಟವು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ, ಕೊಡವ ಕೂಟ ಹಾಗೂ ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಸಹಯೋಗದಲ್ಲಿ 3 ದಿನಗಳ ಕಾಲ ನಡೆಯಲಿದೆ ಎಂದು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾ. 24 ರಂದು ಅಂತಿಮ ಹಣಾಹಣಿ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುವದು. ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು. ಕಳೆದ ಬಾರಿ 24 ತಂಡಗಳು ಪಾಲ್ಗೊಂಡು, ಮಂಡುವಂಡ ತಂಡ ಚಾಂಪಿಯನ್, ಮುಂಡಚಾಡೀರ ರನ್ನರ್ ಅಪ್ ಸ್ಥಾನ ಅಲಂಕರಿಸಿತ್ತು. ಈ ಬಾರಿ 35 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. 6 ಆಟಗಾರರ ತಂಡದಲ್ಲಿ 2 ಹೆಚ್ಚುವರಿ ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ ತಾ. 15 ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಎಂದು ತಿಳಿಸಿದ್ದಾರೆ.

ವಾಲಗತ್ತಾಟ್ : ತಾ. 24 ರಂದು ಕೊಡವ ವಾಲಗತ್ತಾಟ್ ಮತ್ತು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಎರಡು ಪೈಪೋಟಿಗಳ ವಿಜೇತರಿಗೆ ಬಹುಮಾನ ನೀಡಲಾಗುವದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9902612333, 9972971405 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.