ವೀರಾಜಪೇಟೆ, ಸೆ. 7: ಇತಿಹಾಸ ಪ್ರಸಿದ್ಧ ಗೌರಿ-ಗಣೇಶೋತ್ಸವದ ಆಚರಣೆಯೊಂದಿಗೆ ಉತ್ಸವ ಸಮಿತಿ ನಿರಂತರ ಸಾಂಸ್ಕøತಿಕ ಕಾರ್ಯಕ್ರಮ, ಸಮಾಜ ಸೇವೆಗೂ ಆದ್ಯತೆ ನೀಡಿರುವದು ಸಮಿತಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹೇಳಿದರು.

ಇಲ್ಲಿನ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಕಳೆದ ಜುಲೈನಲ್ಲಿ ಹಿಮಾಚಲ ಪ್ರದೇಶದ ಮನಾಲಿಯ ಹನುಮಾನ್ ತಿಬ್ಬ ಪರ್ವತದಲ್ಲಿ 19,464 ಅಡಿಗಳಷ್ಟು ಪರ್ವತಾ ರೋಹಣ ಮಾಡಿ ಸಾಧನೆಗೈದು ಪ್ರಶಸ್ತಿಗೆ ಭಾಜನರಾದ ನಂಬುಡಮಾಡ ದೀಕ್ಷಿತ್ ಸೋಮಣ್ಣ ಅವರನ್ನು ಸನ್ಮಾನ ಮಾಡಿ ಮಾತನಾಡಿದರು.

ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ಇಂತಹ ಉತ್ಸವದಲ್ಲಿ ಸಮುದಾಯಗಳ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೂ ಅವಕಾಶ ನೀಡಿರುವದರಿಂದ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ, ಮಾಜಿ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಪಿ.ಎ. ಮಂಜನಾಥ್ ಮಾತನಾಡಿದರು.

ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಮುಂಡ್ಯೋಳಂಡ ಕುಸುಮ ಸೋಮಣ್ಣ, ಕಾಫಿ ಬೆಳೆಗಾರರಾದ ಬೊಪ್ಪಂಡ ಸುನಿಲ್, ಮೂರ್ನಾಡಿನ ಪಳಂಗಿಯಂಡ ಸುಮಿತ ಬಿದ್ದಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ನಗರ ಸಮಿತಿ ಅಧ್ಯಕ್ಷ ಕೀತಿಯಂಡ ಮಂಜು, ವಾಲಿಬಾಲ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಹಾಗೂ ಜೆ.ಡಿ.ಎಸ್. ಜಿಲ್ಲಾ ಮುಖಂಡ ಬಲ್ಲಚಂಡ ಗೌತಮ್, ವಿನಾಯಕ ಟೂರ್ಸ್ ಅಂಡ್ ಟ್ರಾವೆಲ್ಸ್‍ನ ಮಾಲೀಕ ಬಿ.ವಿ. ಹೇಮಂತ್, ಸಮಿತಿಯ ಸ್ಥಾಪಕ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನಗರ ಸಮಿತಿಯ ಉಪಾಧ್ಯಕ್ಷ ಮಾಳೇಟಿರ ಕಾಶಿ ಕುಂಞಪ್ಪ ಉಪಸ್ಥಿತರಿದ್ದರು. ಕನ್ನಂಡ ಕಾವೇರಮ್ಮ ನಿರೂಪಿಸಿದರು.