ಚೆಯ್ಯಂಡಾಣೆ, ಸೆ. 9: ಇಲ್ಲಿಗೆ ಸಮೀಪದ ಚೇಲಾವರ, ಮರಂದೋಡ ಗ್ರಾಮಗಳಲ್ಲಿ ನಿರಂತರ ಕಾಡಾನೆಗಳ ಹಾವಳಿಯೊಂದಿಗೆ ರೈತರ ಕೃಷಿ ಫಸಲು ನಾಶಗೊಳಿಸುತ್ತಿರುವ ಸನ್ನಿವೇಶ ಎದುರಾಗಿದೆ. ಮರಂದೋಡ ನಿವಾಸಿ, ಚೋಯಮಾಡಂಡ ಅಚ್ಚಪ್ಪ ಹಾಗೂ ಚಿಣ್ಣಪ್ಪ, ಕರುಂಬಯ್ಯ ಇವರುಗಳ ಭತ್ತದ ಗದ್ದೆ ಹಾಗೂ ಬಾಳೆ ತೋಟಕ್ಕೆ ಹಾನಿ ಉಂಟುಮಾಡಿರುವ ಕಾಡಾನೆ ಹಿಂಡು ಪದೇ ಪದೇ ಗ್ರಾಮದಲ್ಲಿ ಸಂಚರಿಸು ತ್ತಿರುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.ಅಲ್ಲದೆ ಆನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಇತ್ತ ಗಮನ ಹರಿಸುತ್ತಿಲ್ಲವೆಂದು ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.