ಮಡಿಕೇರಿ, ಸೆ. 10: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಕಾರದಲ್ಲಿ ಈ ಬಾರಿ ಆಯೋಜಿತವಾಗಿರುವ 6ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ತಾ. 26 ರಂದು ಬೆಳಗ್ಗೆ 10 ಗಂಟೆಗೆ ಮಕ್ಕಳ ದಸರಾ ಉದ್ಘಾಟನೆಯಾಗಲಿದೆ. ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಮಂಟಪ ಸ್ಪರ್ಧೆಗಳು ನಡೆಯಲಿದೆ. ಅಂತೆಯೇ 5 ವರ್ಷದೊಳಗಿನ ಮಕ್ಕಳು, 6 ರಿಂದ 8 ಮತ್ತು 9 ರಿಂದ 12 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆಗಳು ಆಯೋಜಿತವಾಗಿದೆ ಎಂದು ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.

ಮಕ್ಕಳ ದಸರಾದ ವಿವಿಧ ಸ್ಪರ್ಧೆಗೆ ತಾ. 20 ರೊಳಗಾಗಿ ವಿದ್ಯಾರ್ಥಿ ಗಳು ತಮ್ಮ ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆ - ನಮಿತಾ ರೈ - 9448976405 , ಅನಿತಾ ಪೂವಯ್ಯ -(9449982925) (ಛದ್ಮವೇಷ ಸ್ಪರ್ಧೆ) ಲಕ್ಷ್ಮೀಪ್ರಸಾದ್ ಪೆರ್ಲ - (ಮಕ್ಕಳ ಮಂಟಪ) 9448433366, ಶ್ರೀಧರ ಹೂವಲ್ಲಿ - (ಮಕ್ಕಳ ಸಂತೆ) 9481773066, ತೆನ್ನಿರ ಮೈನಾ - (ಮಕ್ಕಳ ಸಂತೆ) 9449156215.

ಜಾನಪದ ಕ್ರೀಡಾ ಸ್ಪರ್ಧೆ

ಮಡಿಕೇರಿ ದಸರಾ ಸಂದರ್ಭದ ಮಕ್ಕಳ ದಸರಾದಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಎರಡನೇ ವರ್ಷದ ಜಾನಪದ ಕ್ರೀಡಾ ಸ್ಪರ್ಧೆಗಳನ್ನು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸ ಲಾಗಿದೆ. ತಾ. 26 ರಂದು ಗಾಂಧಿ ಮೈದಾನದಲ್ಲಿ ಆಯೋಜಿತ ಜಾನಪದ ಕ್ರೀಡಾ ಸ್ಪರ್ಧೆಗಳಾದ ಕಲ್ಲಾಟ, ಬಳೆ ಆಟ, ಲಗೋರಿ, ಚನ್ನೆಮಣೆ, ಚೌಕಬಾರ, ಗೋಲಿ ಆಟದ ಸ್ಪರ್ಧೆಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿತವಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ ತಿಳಿಸಿದ್ದಾರೆ.

ಜಾನಪದ ಕ್ರೀಡಾ ಸ್ಪರ್ಧೆಗೆ ಹೆಸರು ನೋಂದಾಯಿಸಲು ತಾ. 20 ಕೊನೆ ದಿನವಾಗಿದೆ. ಕೊಡಗು ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ಹೆಸರು ನೋಂದಾ ಯಿಸಲು ಸಂಪರ್ಕಿಸಬೇಕಾದ ಸಂಖ್ಯೆ - ಕೆ.ಜಯಲಕ್ಷ್ಮಿ (ಚೌಕಬಾರ) - 9845732271, ಸಿದ್ದರಾಜು (ಲಗೋರಿ) - 9449405609, ಪ್ರಶಾಂತ್ (ಚೆನ್ನಮಣೆ) 9980060146 - ಪಿ.ಆರ್. ರಾಜೇಶ್ (ಕಲ್ಲಾಟ ಮತ್ತು ಗೋಲಿ) - 9448587882, ದಮಯಂತಿ (ಬಳೆ ಆಟ) - 9164569486.