ಗೋಣಿಕೊಪ್ಪಲು, ಸೆ. 10: ಕ್ಲೀನ್ ಕೂರ್ಗ್ ಇನಿಶೇಟಿವ್ ಸಂಸ್ಥೆ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಹಾಗೂ ಮತ್ತಿಗೋಡು ವನ್ಯಜೀವಿ ವಲಯ ಮತ್ತು ತಿತಿಮತಿ ಅರಣ್ಯ ವಲಯ ಸಹಯೋಗದಲ್ಲಿ ವತಿಯಿಂದ ರಾಜೀವ್‍ಗಾಂಧಿ ಉದ್ಯಾನವನದ ಹೆದ್ದಾರಿ ರಸ್ತೆ ಬದಿಗಳಲ್ಲಿ ಕಸ ಹೆಕ್ಕುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಮೈಸೂರು-ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅನೆಚೌಕೂರು ಗೇಟ್‍ನಿಂದ ಮತ್ತಿಗೋಡು ಸಾಕಾನೆ ಶಿಬಿರದವರೆಗೆ ರಸ್ತೆ ಬದಿಯಲ್ಲಿ ಕಸವನ್ನು ತೆಗೆದು ಸುಮಾರು 1.5 ಕಿ.ಮೀ. ರಸ್ತೆಯ ಬದಿಗಳನ್ನು ಸ್ವಚ್ಛಗೊಳಿಸಲಾಯಿತು.

ಅರಣ್ಯ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಮಂದಿ ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡರು. ಈ ಸಂದರ್ಭ ಕ್ಲೀನ್ ಕೂರ್ಗ್ ಇನಿಶೇಟಿವ್ ಸಂಸ್ಥೆ ಪ್ರಮುಖರುಗಳಾದ ಪ್ರಶಾಂತ್ ಚಿಣ್ಣಪ್ಪ, ಅದಿಪ್ ಬೋಪಯ್ಯ, ತಿತಿಮತಿ ಆರ್‍ಎಫ್‍ಒ ಅಶೋಕ್, ಮತ್ತಿಗೊಡು ವನ್ಯಜೀವಿ ಆರ್‍ಎಫ್‍ಓ ಕಿರಣ್ ಕುಮಾರ್ ಉಪಸ್ಥಿತರಿದ್ದರು.