ಶನಿವಾರಸಂತೆ, ಸೆ. 10: ಮಕ್ಕಳ ಸುಂದರ ಭವಿಷ್ಯ ರೂಪಿಸುವ ಶಿಕ್ಷಕರು ನಿವೃತ್ತರಾದಾಗ ಅವರ ಬಗ್ಗೆ ಅಸಡ್ಡೆ ಸಲ್ಲದು ಎಂದು ರೋಟರಿ ಸಂಸ್ಥೆ ಜಿಲ್ಲಾ ಘಟಕದ ಕಾರ್ಯದರ್ಶಿ ವಿಶ್ವನಾಥ್ ಅಭಿಪ್ರಾಯಪಟ್ಟರು.

ಸ್ಥಳೀಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಸಾಕ್ಷರತಾ ಮಾಸಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಗವರ್ನರ್ ಡಾ. ಪ್ರಶಾಂತ್ ಮಾತನಾಡಿ, ಉತ್ತಮ ಶಿಕ್ಷಕರನ್ನು ಗುರುತಿಸಿ ತರಬೇತಿ ನೀಡಿ ಸನ್ಮಾನಿಸುವ, ಶಾಲಾಭಿವೃದ್ಧಿಗೆ ಹಾಗೂ ಸಮುದಾಯವನ್ನು ರೂಪಿಸಲು ಸಹಕಾರ ನೀಡುವ ಕಾರ್ಯಕ್ರಮವನ್ನು ರೋಟರಿ ಹಮ್ಮಿಕೊಳ್ಳಬೇಕು ಎಂದರು.

ಈ ಸಂದರ್ಭ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಸಿ.ಎಲ್. ಸುಬ್ಬಯ್ಯ, ಡಿ.ಬಿ. ಸೋಮಪ್ಪ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಸಿ.ಎಸ್. ಸತೀಶ್ ಹಾಗೂ ಶಿಕ್ಷಕಿ ಹೆಚ್.ಎಸ್. ಸೇವಂತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿ, ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಕರನ್ನು ಗೌರವಿಸುವದು ಸಂಸ್ಥೆಯ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ನಾಲ್ವರು ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಾಗರ್, ಸದಸ್ಯರಾದ ಟಿ.ಆರ್. ಪುರುಷೋತ್ತಮ, ಅರವಿಂದ್, ಎ.ಡಿ. ಮೋಹನ್ ಕುಮಾರ್, ಆದಿತ್ಯಗೌಡ, ಚಿದಾನಂದ್, ಅನಿಲ್, ಕಾಂತರಾಜ್, ಜಯಸ್ವಾಮಿ, ಬೀನಾ ಅರವಿಂದ್, ಶ್ವೇತಾ, ಹೆಚ್.ಪಿ. ಮೋಹನ್, ಅಭಿಜಿತ್, ಅರ್ಜುನ್, ಸೋಮವಾರಪೇಟೆಯ ಗವರ್ನರ್ ನಾಗೇಶ್, ಮೋಹನ್ ರಾವ್ ಉಪಸ್ಥಿತರಿದ್ದರು.