ಮಡಿಕೇರಿ, ಸೆ. 10: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಚೇರಂಬಾಣೆ ವೃತ್ತÀದ ವತಿಯಿಂದ ಬೆಟ್ಟಗೇರಿ ಶಾಲೆಯಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ಮಾತೃಪೂರ್ಣ ಯೋಜನೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಉಡೋತ್ ಮೊಟ್ಟೆ, ಹೆರವ ನಾಡುಕಾಲೋನಿ, ಹೆರವನಾಡುಶಾಲೆ, ಬೆಟ್ಟಗೇರಿ, ಬಕ್ಕ ಅಂಗನವಾಡಿ ಕೇಂದ್ರಗಳಿಂದ ಆಗಮಿಸಿದ್ದ ಗರ್ಭಿಣಿ, ಬಾಣಂತಿಯರು, ಸ್ತ್ರೀಶಕ್ತಿ ಸದಸ್ಯರು, ಮಕ್ಕಳ ತಾಯಂದಿರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತೃಪೂರ್ಣ ಯೋಜನೆ ಬಗ್ಗೆ ಮಾಹಿತಿಯನ್ನು ಮೇಲ್ವಿಚಾರಕರು ಹಾಗೂ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ನೀಡಿದರು.

ತಾಲೂಕು ಪಂಚಾಯತ್ ಸದಸ್ಯ ಕೊಡಪಾಲು ಗಣಪತಿ ಮಾತನಾಡಿ ಮಾತೃಪೂರ್ಣ ಯೊಜನೆ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುವದರೊಂದಿಗೆ ಪೌಷ್ಟಿಕ ಆಹಾರದೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವಂತೆ ತಿಳಿಸಿದರು.

ಪೌಷ್ಟಿಕ ಆಹಾರದ ಮಹತ್ವವನ್ನು ಸಹಾಯಕಿ ಶಾರದ ವಿವರಿಸಿದರು. ಭಾಗವಹಿಸಿದ ಎಲ್ಲಾ ಮಹಿಳೆಯರು ತಾವೇ ಬೆಳೆದ ಮತ್ತು ಸ್ಥಳೀಯವಾಗಿ ದೊರಕುವ ವಸ್ತುಗಳಲ್ಲಿ ಆಹಾರ ತಯಾರಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಿ. ಶಾಂತಿ, ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾಮ ಪಂಚಾಯತಿ ಸದಸ್ಯೆ ಕಮಲ ಉತ್ತಯ್ಯ, ಮಾಜಿ ಸದಸ್ಯ ಮೇದಪ್ಪ, ಸದಸ್ಯ ತೆನ್ನಿರ ಪೊನ್ನಪ್ಪ ಭಾಗವಹಿಸಿ ಶುಭಕೋರಿದರು. ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪ, ಲೈಲ, ಶೈಲ, ಪಾರ್ವತಿ ಮತ್ತು ಧನು ಕಾರ್ಯಕ್ರಮ ಯಶಸ್ವಿಗೆ ಶ್ರಮ ವಹಿಸಿದರು.