ವೀರಾಜಪೇಟೆ, ಸೆ. 10: ವೀರಾಜಪೇಟೆಯ ಮೀನುಪೇಟೆಯ ಚೈತನ್ಯ ಮಠಪುರದ ಮುತ್ತಪ್ಪ ಕಲಾ ಮಂಟಪದಲ್ಲಿ ಓಣಂ ಆಚರಣಾ ಸಮಿತಿಯಿಂದ ಬೆಳಿಗ್ಗೆ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆ ನಡೆದು ಬಳಿಕ ಮಹಾಬಲಿ, ಕಾವಡಿಯಾಟಂ, ಅಮ್ಮಕೊಡಂ ನೃತ್ಯ, ಮಯೂರ ನೃತ್ಯ ಹಾಗೂ ಮಹಿಳೆಯರ ವಾದ್ಯ ಗೋಷ್ಠಿಯೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

ಓಣಂ ಆಚರಣಾ ಸಮಿತಿ ಅಧ್ಯಕ್ಷ ಇ.ಸಿ.ಜೀವನ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಧ್ಯಾಹ್ನ 12 ಗಂಟೆಯಿಂದ ಓಣಂ ಸಧ್ಯ, ನಂತರ 2ಗಂಟೆಗೆ ಚೈತನ್ಯ ಕಲಾ ತಂಡದಿಂದ ತಿರುವಾದಿರ ಕಳಿ ಹಾಗೂ ಕೇರಳದ ಸುಪ್ರಸಿದ್ಧ ತಂಡದವರಿಂದ ನಾಡನ್ ಪಾಟ್ ಸೇರಿದಂತೆ ಅನೇಕ ಸ್ಪರ್ಧಾ ಕಾರ್ಯಕ್ರಮಗಳು ಜರುಗಿದವು.

ಮೆರವಣಿಗೆಯಲ್ಲಿ ಉತ್ಸವ ಸಮಿತಿಯ ಸಿ.ಆರ್. ಬಾಬು, ಎಂ.ಎಸ್. ಸತೀಶ್, ಸಿ.ಆರ್. ಸಜೀವನ್, ಎಂ.ಆರ್. ಗೋವಿಂದನ್, ಸಿ.ಆರ್. ಕೃಷ್ಣನ್ ಕುಟ್ಟಿ, ಎಂ.ಎಸ್. ಸತೀಶ್, ಟಿ.ಪಿ.ಸಜೀವನ್, ಕೆ.ಎನ್. ಉಪೇಂದ್ರ, ಪಿ. ಜರ್ನಾರ್ಧನ್ ಸೇರಿದಂತೆ ಸಮಿತಿಯ ಸದಸ್ಯರುಗಳು, ಪಟ್ಟಣ ಹಾಗೂ ದೂರದ ಊರುಗಳಿಂದ ಮಲೆಯಾಳಿ ಬಾಂಧವರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.