ಗೋಣಿಕೊಪ್ಪಲು, ಸೆ. 12: ಇಲ್ಲಿನ ಕಾವೇರಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಮೊಣ್ಣಂಡ ಶೋಭ ಸುಬ್ಬಯ್ಯ ಮಾತನಾಡಿ, ಯಾವದೇ ಭಾಷೆಯನ್ನು ಬಳಸುವಾಗ ಉಚ್ಚಾರಣೆಯನ್ನು ಬಹಳ ಸ್ಪಷ್ಟವಾಗಿ ಮಾಡಬೇಕು. ಅಲ್ಪ ಪ್ರಾಣ, ಮಹಾಪ್ರಾಣದ ಕಡೆಗೆ ಗಮನ ನೀಡಿ ಮಾತನಾಡಿದರೆ ಮಾತ್ರ ಅದು ಕೇಳುಗರಿಗೂ ಹಿತನೀಡುತ್ತದೆ ಎಂದರು.

ಪ್ರಾಂಶುಪಾಲ ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಎಂ.ಪಿ. ರೇಖಾ ವಸಂತ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕರಾದ ಪ್ರೊ. ಎಂ.ಬಿ. ಕಾವೇರಪ್ಪ, ಪ್ರೊ. ಆರ್. ತಿಪ್ಪೆಸ್ವಾಮಿ, ಎಸ್.ಎಂ. ರಜನಿ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.