ಮಡಿಕೇರಿ, ಸೆ. 12: ಐತಿಹಾಸಿಕ ಮಡಿಕೇರಿ ದಸರಾಕ್ಕೆ ಈ ಬಾರಿ ಕೇವಲ 30 ಲಕ್ಷ ರೂಪಾಯಿ ಅನುದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದು, ಗೋಣಿಕೊಪ್ಪಲಿಗೆ 25 ಲಕ್ಷ ಅನುದಾನ ಘೋಷಿಸಲಾಗಿದೆ.

ಇತ್ತೀಚೆಗೆ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮಡಿಕೇರಿಗೆ 1 ಕೋಟಿ ಹಾಗೂ ಗೋಣಿಕೊಪ್ಪಕ್ಕೆ 50 ಲಕ್ಷ ಅನುದಾನ ಕೋರಿದ್ದರು.ಮನವಿ ಪರಿಶೀಲಿಸಿದ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಯ ಮುಖ್ಯ ಕಾರ್ಯದರ್ಶಿ ಯವರಿಗೆ ಲಿಖಿತ ಸೂಚನೆ ನೀಡಿ ಗೋಣಿಕೊಪ್ಪಕ್ಕೆ 25 ಲಕ್ಷ ಹಾಗೂ ಮಡಿಕೇರಿಗೆ 30 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ.ಇದೇ ಸಂದರ್ಭ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಕೂಡ ಮುಖ್ಯಮಂತ್ರಿಗಳಿಗೆ ಗೋಣಿಕೊಪ್ಪ ದಸರಾ ಅನುದಾನಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿದ್ದು, ಅವರ ಪತ್ರಕ್ಕೂ ಮುಖ್ಯಮಂತ್ರಿಗಳು ಸ್ಪಂದಿಸಿ 25 ಲಕ್ಷ ರೂಪಾಯಿ ನೀಡುವಂತೆ ಆದೇಶಿಸಿದ್ದಾರೆ. ಆದರೆ ಅಲ್ಲಿಗೆ ಒಟ್ಟಾಗಿ 30 ಲಕ್ಷ ಮಾತ್ರ ದೊರಕುವ ಸಾಧ್ಯತೆ ಇದೆಯೆಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಗೋಣಿಕೊಪ್ಪಲಿಗೆ 10 ಲಕ್ಷ ಅನುದಾನ ಲಭಿಸಿತ್ತು.

ಮತ್ತೆ ನಿಯೋಗ: ಮಡಿಕೇರಿಗೆ 2 ವರ್ಷಗಳ ಹಿಂದೆ 75 ಲಕ್ಷ ಹಾಗೂ ಕಳೆದ ವರ್ಷ 60 ಲಕ್ಷ ಬಿಡುಗಡೆ ಗೊಂಡಿದ್ದು, ಈ ಬಾರಿ ಕೇವಲ

25 ಲಕ್ಷ ದೊರಕುವ

(ಮೊದಲ ಪುಟದಿಂದ) ಬಗ್ಗೆ ಸಮಿತಿಯವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯದರ್ಶಿ ಕದ್ದಣಿಯಂಡ ಬೋಪಣ್ಣ ಅವರು ಸಮಿತಿಯವರನ್ನು ಬೆಂಗಳೂರಿಗೆ ಬರಲು ಸೂಚಿಸಿದ್ದು, ಮತ್ತೆ ಮುಖ್ಯಮಂತ್ರಿಗಳ ಬಳಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮನವಿ ಮಾಡಲಿರುವದಾಗಿ ತಿಳಿಸಿದ್ದಾರೆ.

ಗೋಣಿಕೊಪ್ಪ ಸಮಿತಿಯವರು ಕಳೆದ ವರ್ಷದ ಅನುದಾನ ಪ್ರತಿಯನ್ನು ಲಗತ್ತಿಸಿದ್ದು, ಮಡಿಕೇರಿಯವರು ಕೇವಲ ಮನವಿ ಪತ್ರ ನೀಡಿದ್ದರಿಂದ ಹಿಂದಿನ ಅನುದಾನದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಆಗಿಲ್ಲವೆಂದ ಹರೀಶ್, ನಾಳೆ ಮುಖ್ಯಮಂತ್ರಿಗಳನ್ನು ಮತ್ತೆ ಭೇಟಿ ಮಾಡಿ ಹೆಚ್ಚಿನ ಅನುದಾನ ಕೋರಲಾಗುವದು ಎಂದಿದ್ದಾರೆ.