ನಾಪೆÇೀಕ್ಲು, ಸೆ. 12: ನಾಪೆÇೀಕ್ಲು ಪಟ್ಟಣ ಸೇರಿದಂತೆ ಚೆರಿಯಪರಂಬು, ಕೊಟ್ಟಮುಡಿ, ಎಮ್ಮೆಮಾಡು, ಕಲ್ಲುಮೊಟ್ಟೆ, ಕೊಡವ ಸಮಾಜದ ಬಳಿ, ಹಳೇ ತಾಲೂಕು, ಕೊಳಕೇರಿ ಗ್ರಾಮದ ಕೆಲವೆಡೆಗಳಲ್ಲಿ ಇಂದು ಬೆಳಿಗ್ಗೆ 7.35ರಿಂದ 7.45ರ ಸಮಯದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ.ಬೆಳಿಗ್ಗೆ ಸುಮಾರು 7.36ಕ್ಕೆ ಭಯಾನಕ ಶಬ್ಧದ ಹಿನ್ನೆಲೆಯಲ್ಲಿ ಜನತೆ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಮೂರು ನಿಮಿಷಗಳ ನಂತರ ಭೂಮಿ ಮತ್ತೆ ಕಂಪಿಸಿದ ಅನುಭವವಾಗಿದ್ದು, ಮೊದಲಿನಷ್ಟು ತೀವ್ರತೆಯಿರಲಿಲ್ಲ ಎನ್ನಲಾಗಿದೆ. ಈ ಶಬ್ಧವು ನಾಪೆÇೀಕ್ಲು ವ್ಯಾಪ್ತಿಯ ಹಲವು ಗ್ರಾಮಗ ಳಲ್ಲಿ ಕೇಳಿ ಬಂದಿರುವದಾಗಿ ಸಾರ್ವ ಜನಿಕರು ತಿಳಿಸಿದ್ದಾರೆ. ಹಲವರು ಇದನ್ನು ಗುಡುಗು ಎಂದು ಭಾವಿಸಿದ್ದರೆ, ಮತ್ತೇ ಕೆಲವರಿಗೆ ಭೂಮಿ ಯೊಳಗೆ ಬಂಡೆ ಚÀಲಿಸಿದಂತಹ ಅನುಭವವಾಗಿರು ವದಾಗಿಯೂ ಹೇಳಿದ್ದಾರೆ.

ಭಯಾನಕ ಶಬ್ಧದೊಂದಿಗೆ ಭೂಮಿ ಕಂಪಿಸಿದ ಘಟನೆಯ ಹೊರತು ಪಾತ್ರೆ ಅಲುಗಾಡಿ ಬಿದ್ದ ಘಟನೆಗಳು ಯಾವದೂ ನಡೆದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಈ ಬಗ್ಗೆ ಚೆರಿಯಪರಂಬು ವಿನ ಸಿ.ಎಂ. ಉಸ್ಮಾನ್, ಬಲ್ಲಮಾವಟಿ ಗ್ರಾ.ಪಂ. ಸದಸ್ಯ ಹೊಸೊಕ್ಲು ಮುತ್ತಪ್ಪ, ಎಮ್ಮೆಮಾಡುವಿನ ರಫೀಕ್, ಕಲ್ಲುಮೊಟ್ಟೆ ನಿವಾಸಿ ವಸಂತ್, ಇಂದಿರಾನಗರ ನಿವಾಸಿ ಡೇರಿನಾ ಲೂಯಿಸ್, ನಾಪೊಕ್ಲುವಿನ ಎಂ.ಎ. ಮನ್ಸೂರ್, ಬಿ.ಎ. ರಾಮಣ್ಣ ಕಲ್ಲುಮೊಟ್ಟೆಯ ಸುಶೀಲಮ್ಮ, ಕೊಡವ ಸಮಾಜದ ನೌಕರ ಚಿಣ್ಣಪ್ಪ, ಹಳೇ ತಾಲೂಕಿನ ಗ್ರಾ.ಪಂ. ಸದಸ್ಯ ಶಿವಚಾಳಿಯಂಡ ಜಗದೀಶ್, ಬಿದ್ದಾಟಂಡ ಜಿನ್ನು ನಾಣಯ್ಯ, ಕೊಳಕೇರಿ ಗ್ರಾಮದ ಕಾಂಡಂಡ ಪ್ರತಿಜಾ ಅಚ್ಚಪ್ಪ, ಬಲ್ಲಮಾವಟಿ ಗ್ರಾಮದ ಬೊಟ್ಟೋಳಂಡ ಗಣೇಶ್, ಚೋಕಿರ ಬಾಬಿ ಭೀಮಯ್ಯ ಭೂಮಿ ಅಲುಗಾಡಿದ ಅನುಭವವನ್ನು ‘ಶಕ್ತಿ’ಯೊಂದಿಗೆ ಹಂಚಿಕೊಂಡರು.

-ಪ್ರಭಾಕರ್, ದುಗ್ಗಳ