ನಾಪೆÇೀಕ್ಲು, ಸೆ. 12: ತಾ. 8ರಂದು ನಾಪೋಕ್ಲು ಮಸೀದಿ ಬಳಿ ನಡೆದ ಸಣ್ಣ ಅಪಘಾತ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಕೊಡಗು ಮುಸ್ಲಿಂ ಸಮಾಜ ಆರೋಪಿಸಿದೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಮುಸ್ಲಿಂ ಸಮಾಜದ ಉಪಾಧ್ಯಕ್ಷ ಎಂ.ಎ, ಮನ್ಸೂರ್ ಆಲಿ, ಕಾರ್ಯದರ್ಶಿ ಹೆಚ್.ಎಂ. ಹಂಸ, ಪಿ. ಎಂ. ಸಲಿಂ ಹ್ಯಾರೀಸ್. ಅವರು ಒಂದು ಅಪಘಾತ ನಡೆದಾಗ ವೈಕ್ತಿ ಉದ್ರೇಕಗೊಳ್ಳುವದು ಸಹಜ; ಅದರಂತೆ ಸಣ್ಣ ಪುಟ್ಟ ಘಟನೆ ನಡೆದಿದೆ ಇದು ಆಗಲೇ ಇತ್ಯರ್ಥ ಆಗಿದ್ದರೂ ಒಂದು ಕೋಮು ಪರ ಬಿಂಬಿಸಿ ಕೆಲವರು ರಾಜಕೀಯಕ್ಕೆ ಬಳಸಿಕೊಂಡು ಜಾತಿ ನಿಂದನೆ ಪ್ರಕರಣ ದಾಖಲಿಸಲು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.ಈ ದೃಶ್ಯ ಪಕ್ಕದ ಮಸೀದಿಯ ಸಿ.ಸಿ. ಕ್ಯಾಮರದಲ್ಲಿ ದಾಖಲಾಗಿದ್ದು ಸತ್ಯವನ್ನು ಅರಿಯದೆ ಮಾಧ್ಯಮಕ್ಕೆ ಹೇಳಿಕೆ ನೀಡುವದು ತರವಲ್ಲ ಇದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಚೆರಿಯಪರಂಬು ಜಮಾಅತ್ ಅಧ್ಯಕ್ಷ ಬಸೀರ್‍ಹಾಜಿ, ಮಾಜಿ ಅಧ್ಯಕ್ಷ ಸಾದಲಿ, ಸಿ.ಎಂ.ಆಹಮ್ಮದ್, ಇದ್ದರು.