ನಾಪೆÉÇೀಕ್ಲು, ಸೆ. 12: ರಾಜ್ಯದ ಜಿಲ್ಲೆಗಳಲ್ಲಿ ನೂತನ ತಾಲೂಕು ರಚನೆಗೆ ಸರಕಾರ ಕ್ರಮ ಕೈಗೊಂಡಿದೆ. ಆದರೆ ಜಿಲ್ಲೆಯ ಕುಶಾಲನಗರ, ನಾಪೆÉÇೀಕ್ಲು ಮತ್ತು ಪೆÇನ್ನಂಪೇಟೆಯನ್ನು ನೂತನ ತಾಲೂಕಾಗಿ ಪರಿವರ್ತಿಸಲು ಹಲವು ವರ್ಷಗಳಿಂದ ಬೇಡಿಕೆಯಿತ್ತರೂ ಸರಕಾರ ಈ ಬಗ್ಗೆ ಗಮನಹರಿಸದಿರುವದು ಖಂಡನೀಯ. ಜಿಲ್ಲೆಯ ಮೂರು ತಾಲೂಕು ಬೇಡಿಕೆಗಳ ಪೈಕಿ ಒಂದನ್ನಾದರೂ ಪರಿಗಣಿಸಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಜಿ. ಜಾಹೀರ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು ಮೂರು ತಾಲೂಕು ರಚನೆಗೆ ಸಮಿತಿಗಳನ್ನು ರಚಿಸಿ ಹಲವಾರು ಬಾರಿ ಹೋರಾಟ ನಡೆಸಿ ಸರಕಾರದ ಗಮನ ಸೆಳೆಯಲಾಗಿದೆ. ಆದರೂ ರಾಜ್ಯದ ಇತರ ಜಿಲ್ಲೆಗಳಲ್ಲಿ ತಾಲೂಕು ರಚನೆಗೆ ಕ್ರಮಕೈಗೊಂಡ ಸರಕಾರ ಕೊಡಗು ಜಿಲ್ಲೆಯನ್ನು ಕಡೆಗೆಣಿಸಿದೆ ಎಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾಪೆÉÇೀಕ್ಲು ತಾಲೂಕು ಹೋರಾಟದ ಬಗ್ಗೆ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ನೂತನ ಸಮಿತಿ ರಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವದು ಎಂದರು.