ಮಡಿಕೇರಿ, ಸೆ. 11: ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ನೂರೈವತ್ತಕ್ಕೂ ಅಧಿಕ ವರ್ಷಗಳಿಂದ ಪಾಲ್ಗೊಳ್ಳುತ್ತಾ ಬಂದಿರುವ ದಶಮಂಟಪಗಳ ಸಾರಥಿಯಾಗಿ ಖ್ಯಾತಿ ಪಡೆದಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ಉತ್ಸವಕ್ಕೆ ಸಜ್ಜಾಗುತ್ತಿ ರುವದಾಗಿ ಸಮಿತಿಯ ಅಧ್ಯಕ್ಷ ಓ.ಎನ್. ಬಾಬು ತಿಳಿಸಿದ್ದಾರೆ.

‘ಅನಂತ ಪದ್ಮನಾಭ ದರ್ಶನ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು, ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದೆ. ದಿಂಡಿಗಲ್‍ನ ಸೆಲ್ವಂ ಲೈಟಿಂಗ್ಸ್‍ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಬೆಂಗಳೂರಿನ ವಿಕ್ರಂ ಸಂಸ್ಥೆ ಧ್ವನಿವರ್ಧಕವನ್ನು ಒದಗಿಸಲಿದ್ದಾರೆ. ಪ್ಲಾಟ್ ಫಾರಂ ಅನ್ನು ವಿಶ್ವನಾಥ್ ತಂಡ ನಿರ್ಮಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಅನ್ನು ಮಡಿಕೇರಿಯ ಸಫನ್, ಅಂಜು ತಂಡದವರು ಮಾಡಲಿದ್ದಾರೆ.

ಒಟ್ಟು 13 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಬೆಂಗಳೂರಿನ ಕಲಾವಿದ ಮಧುಕರ್ ಬಳಗ ಕಲಾಕೃತಿಗಳನ್ನು ತಯಾರಿಸಲಿದ್ದಾರೆ.

ಒಟ್ಟು 7 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಪಾರಾಣೆಯ ಬಾವಲಿ ವಾದ್ಯಗೋಷ್ಠಿ ಮಂಟಪ ವನ್ನು ಮುನ್ನಡೆಸಲಿದೆ. ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲಾಗುತ್ತದೆ ಎಂದು ಬಾಬು ವಿವರಿಸಿದರು.

-ಉಜ್ವಲ್ ರಂಜಿತ್