ಸಿದ್ದಾಪುರ, ಸೆ. 12: ಮಾಲ್ದಾರೆ ಸಮೀಪದ ಮೈಲಾದ್‍ಪುರ ಕಾಫಿ ತೋಟದಲ್ಲಿ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ಬೋನ್ ಅಳವಡಿಸಲಾಗಿದೆ.

ಮೈಲಾದ್‍ಪುರದ ಬಿ.ಬಿ.ಟಿ.ಸಿ. ಕಂಪೆನಿಗೆ ಸೇರಿದ ಕಾಫಿ ತೋಟದಲ್ಲಿ ಹುಲಿ ಜಾನುವಾರಗಳ ಮೇಲೆ ಧಾಳಿ ನಡೆಸಿ ಜಾನುವಾರಗಳನ್ನು ಸಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯ ಭೀತರಾಗಿದ್ದರು. ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಕಾಫಿ ತೋಟದ ಒಳಗೆ 5 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿದ್ದು ಕ್ಯಾಮೆರಾದಲ್ಲಿ ಹುಲಿಯ ಚಲನ ವಲನ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹಾಗೂ ಆರ್.ಆರ್.ಟಿ. ತಂಡ ಸೇರಿ ಮೈಲಾದ್‍ಪುರದ ಕಾಫಿ ತೋಟದ ಮಧ್ಯ ಭಾಗದಲ್ಲಿ ಹುಲಿ ಜಾನುವಾರಗಳ ಮೇಲೆ ಧಾಳಿ ನಡೆಸಿದ ಸ್ಥಳದಲ್ಲಿ ಇದೀಗ ಕಬ್ಬಿಣದ ಬೋನ್ ಅಳವಡಿಸಲಾಗಿದೆ. ಕಾಫಿ ತೋಟದ ಮಧ್ಯೆ ಅಳವಡಿಸಿರುವ ಕಬ್ಬಿಣದ ಬೋನಿನ ಸುತ್ತಲು ಮರದ ಮೈಲಾದ್‍ಪುರದ ಕಾಫಿ ತೋಟದ ಮಧ್ಯ ಭಾಗದಲ್ಲಿ ಹುಲಿ ಜಾನುವಾರಗಳ ಮೇಲೆ ಧಾಳಿ ನಡೆಸಿದ ಸ್ಥಳದಲ್ಲಿ ಇದೀಗ ಕಬ್ಬಿಣದ ಬೋನ್ ಅಳವಡಿಸಲಾಗಿದೆ. ಕಾಫಿ ತೋಟದ ಮಧ್ಯೆ ಅಳವಡಿಸಿರುವ ಕಬ್ಬಿಣದ ಬೋನಿನ ಸುತ್ತಲು ಮರದ