ನಾಪೆÇೀಕ್ಲು, ಸೆ. 11: ರಸ್ತೆ, ಕಸ, ವಿದ್ಯುತ್ ದೀಪ, ಮತದಾನ ಕೇಂದ್ರ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ಹಿತರಕ್ಷಣಾ ಸಮಿತಿಯಿಂದ ನಾಪೆÇೀಕ್ಲು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಚೆರಿಯಪರಂಬುವಿನಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣದಲ್ಲಿ ಸಭೆ ನಡೆಸಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂದಾಯ ಪರಿವೀಕ್ಷಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಕೆ.ಎ.ಹಾರೀಸ್ ಚೆರಿಯಪರಂಬುವಿನಲ್ಲಿ ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ನಿರ್ಗತಿಕರು ವಾಸಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಆಡಳಿತದಲ್ಲಿದ್ದ ಸರಕಾರಗಳು ರಸ್ತೆ ಸೇರಿದಂತೆ ಯಾವದೇ ಮೂಲಭೂತ ಸೌಲಭ್ಯ ನೀಡಿಲ್ಲ. ರಸ್ತೆಗಳಲ್ಲಿ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ದೀಪವಿಲ್ಲ, ಪಟ್ಟಣದ ತ್ಯಾಜ್ಯವನ್ನು ಈ ಪ್ರದೇಶದಲ್ಲಿ ವಿಲೇವಾರಿ ಮಾಡುತ್ತಿರುವ ಕಾರಣ ಇಲ್ಲಿ ರೋಗ ರುಜಿನಗಳು ಹೆಚ್ಚಾಗುತ್ತಿದೆ. ಗ್ರಾಮದ ಮತದಾರರು ಐದು ಬೂತ್‍ಗಳಲ್ಲಿ ಹಂಚಿ ಹೋಗಿರುವ ಕಾರಣ ನಮ್ಮ ತೊಂದರೆ ಹೇಳಿಕೊಳ್ಳಲು ಯಾವದೇ ಜನಪ್ರತಿನಿಧಿಯಿಲ್ಲದಂತಾಗಿದೆ. ಆದುದರಿಂದ ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿ, ಕಸವಿಲೇವಾರಿಗೆ ಬೇರೆ ಸ್ಥಳ ಗುರುತಿಸುವದು ಮತ್ತು ಚೆರಿಯಪರಂಬುವಿಗೆ ಪ್ರತ್ಯೇಕ ಮತದಾನ ಕೇಂದ್ರ ತೆರೆಯಲು ಕ್ರಮಕೈಗೊಳ್ಳದಿದ್ದರೆ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವದು ಎಂದು ಎಚ್ಚರಿಸಿದರು.

ಸಮಿತಿ ಅಧ್ಯಕ್ಷೆ ಭವಾನಿ ಮಾತನಾಡಿ ನಮ್ಮ ಹೋರಾಟ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿಯೇ ಹೊರತು ಯಾವದೇ ಪಕ್ಷ, ಜಾತಿ, ಧರ್ಮದ ವಿರುದ್ಧವಲ್ಲ. ಮೂಲಭೂತ ಸೌಲಭ್ಯಗಳು ನಮ್ಮ ಹಕು.್ಕ ಸರಕಾರ ನೀಡುವ ಬಿಕ್ಷೆಯಲ್ಲ. ಅದು ದೊರೆಯುವವರೆಗೆ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.

ಸಮಿತಿ ಕಾರ್ಯಾದರ್ಶಿ ಪಿ.ಎಂ. ಬಷೀರ್ ಮಾತನಾಡಿ ಮೂಲಭೂತ ಸೌಲಭ್ಯಗಳು ಪ್ರತಿಯೊಬ್ಬನ ಹಕ್ಕು. ಹಕ್ಕನ್ನು ನಿಷೇಧ ಮಾಡಿದರೆ ಕ್ರಾಂತಿಯಾಗುತ್ತದೆ. ಚೆರಿಯಪರಂಬು ವ್ಯಾಪ್ತಿಯ ಮೂವರು ಅಧ್ಯಕ್ಷರು ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರದಲ್ಲಿದ್ದರೂ ಯಾವದೇ ಅಭಿವೃದ್ಧಿ ಕಾರ್ಯಕೈಗೊಂಡಿಲ್ಲ ಎಂದು ದೂಷಿಸಿದರು. ಈ ಬಗ್ಗೆ ಸಂಬಂಧಿಸಿದವರು ಕೂಡಲೇ ಕ್ರಮಕೈಗೊಳ್ಳದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ. ಆರ್. ಕೇಶವ್ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಮಂಜೂರಾಗಿ ಟೆಂಡರ್ ಕರೆಯಲಾಗಿದೆ. ಈ ಬಾರಿಯ ಪ್ಯಾಕೇಜ್‍ನಲ್ಲೂ ರೂ. 10 ಲಕ್ಷ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.