ಮಡಿಕೇರಿ, ಸೆ. 12: ಅಡ್ಡಂಡ ಕಾರ್ಯಪ್ಪ ‘ಕೊಡಗಿನೊಡೆಯರು ಕೊಡವರು’ ಕೃತಿಯಲ್ಲಿ ಕೊಡವರ ವಿಶಿಷ್ಟ ಸಂಸ್ಕøತಿಯ ಹಿರಿಮೆಯನ್ನು ಚಿತ್ರಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಬಣ್ಣಿಸಿದರು.

ರಂಗಭೂಮಿ ಕೊಡಗು ಪ್ರಕಾಶನದ ವತಿಯಿಂದ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ‘ಕೊಡಗಿ ನೊಡೆಯರು ಕೊಡವರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

34 ಅಧ್ಯಾಯಗಳನ್ನು ಕೃತಿ ಒಳಗೊಂಡಿದ್ದು, 54 ಆಧಾರ ಗ್ರಂಥಗಳನ್ನು ಪರಾಮರ್ಶಿಸಿ, ಶಾಸನಗಳನ್ನು ಆಧರಿಸಿ ಪುಸ್ತಕ ರಚಿಸಿದ್ದಾರೆ. ಲೇಖಕರು ಸ್ವತಃ ಕೊಡವರಾಗಿದ್ದು, ತಮ್ಮ ಜನಾಂಗದ ಪರಂಪರೆಯನ್ನು ಒಳವೊಕ್ಕು ನೋಡಿದ್ದಾರೆ ಎಂದರು.

‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ. ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕøತಿ ಚಿಂತಕ ಗುಬ್ಬಿಗೂಡು ರಮೇಶ್ ಕೃತಿ ಕುರಿತು ಮಾತನಾಡಿದರು.

ಪರಿಸರ ಚಿಂತಕ ಪಿ.ಡಿ. ಮೇದಪ್ಪ, ಕೊಡವ ಸಮಾಜ ಮೈಸೂರು ಅಧ್ಯಕ್ಷ ಮೂವೇರ ಕುಟ್ಟಪ್ಪ, ಕೃತಿ ಕರ್ತೃ ಆದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ರಂಗಭೂಮಿ ಕೊಡಗು ಪ್ರಕಾಶನದ ಸಂಚಾಲಕಿ ಅನಿತಾ ಕಾರ್ಯಪ್ಪ ಮತ್ತಿತರರು ಹಾಜರಿದ್ದರು.