ನಾಪೆÇೀಕ್ಲು, ಸೆ. 14: ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಲ್ಲುಮೊಟ್ಟೆ ಮತ್ತು ಚೆರಿಯಪರಂಬು ಉಪ ಗ್ರಾಮಗಳಿಗೆ 2015 ಮತ್ತು 16 ನೇ ಸಾಲಿನಲ್ಲಿ ಸುಮಾರು 40 ಲಕ್ಷ ರೂಗಳ ಕಾಮಗಾರಿಯನ್ನು ಕೈಗೊಂಡಿದ್ದರೂ ನಾಗರಿಕ ವೇದಿಕೆಯವರು ಪ್ರತಿಭಟನೆ ಮಾಡುತ್ತಿರುವದು ರಾಜಕೀಯ ದುರುದ್ದೇಶವಾಗಿದೆ ಎಂದು ಈ ವಿಭಾಗದ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಚೇಟ್ಟೀರ ಕುಶು ಕುಶಾಲಪ್ಪ, ಮಹಮ್ಮದ್ ಖುರೇಶಿ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.

ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದ ಅವರು, ಈ ವ್ಯಾಪ್ತಿಯಲ್ಲಿ 1 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯಾಗಿದೆ. ಈಗಾಗಲೇ ಮುಖ್ಯ ಮಂತ್ರಿಗಳ ನಿಧಿಯಿಂದ 60 ಲಕ್ಷ ಬಿಡುಗಡೆ ಆಗಿದ್ದು ಇದರಲ್ಲಿ ಚೆರಿಯಪರಂಬು ರಸ್ತೆ ಅಭಿವೃದ್ಧಿಗೆ ಸುಮಾರು 20 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಯನ್ನು ಆರಂಭಿಸಲಾಗುವದು. ಗ್ರಾಮ ಪಂಚಾಯಿತಿಯ ಒಬ್ಬ ಸದಸ್ಯನಿಗೆ ವಾರ್ಷಿಕವಾಗಿ ಅವರ ಕ್ಷೇತ್ರದ ಅಭಿವೃದ್ಧಿಗೆ 2 ಲಕ್ಷ ಅನುದಾನ ದೊರೆಯಲಿದ್ದು, ಇದರಲ್ಲಿ ಎಲ್ಲಾ ವಿಭಾಗಗಳಿಗೆ ಅನುಕೂಲವಾಗುವ ಕಾಮಗಾರಿಯನ್ನು ಕೈಗೊಳ್ಳಬೇಕಿದ್ದು ಈ ಬಗ್ಗೆ ಪ್ರತಿಭಟನಕಾರರು ಅರಿತು ಕೊಳ್ಳಬೇಕೆಂದ ಅವರು ಮುಂದೆ ಈ ವಿಭಾಗದ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುವದು ಎಂದು ತಿಳಿಸಿದ್ದಾರೆ.

- ದುಗ್ಗಳ