ಮಡಿಕೇರಿ, ಸೆ. 15: ಯುವತಿ ಯರನ್ನು ಪ್ರೀತಿಸುವದಾಗಿ ನಂಬಿಸಿ, ಅತ್ಯಾಚಾರಗೈದು ಸರಣಿ ಹತ್ಯೆಗೈದಿದ್ದ ಸೈನೆಡ್ ಕುಖ್ಯಾತಿಯ ಮೋಹನ್ ಕುಮಾರ್(54) ಮೇಲಿನ ನಾಲ್ಕನೆಯ ಪ್ರಕರಣ ಸಾಭೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.2004 ರಿಂದ 2009ರ ಅವಧಿಯಲ್ಲಿ ಒಟ್ಟು 20 ಯುವತಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪ ಮೋಹನ್ ಕುಮಾರ್ ಮೇಲಿದೆ. ಈ ಪೈಕಿ ಮೂರು ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಈಗಾಗಲೇ ಮರಣ ದಂಡನೆ ವಿಧಿಸಲಾಗಿದೆ. ನಾಲ್ಕನೆ ಪ್ರಕರಣದಲ್ಲಿ ಪುತ್ತೂರು

(ಮೊದಲ ಪುಟದಿಂದ) 'ತಾಲೂಕಿನ ಪಟ್ಟೆಮಜಲು ನಿವಾಸಿ 22 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂ„ಸಿ ನ್ಯಾಯಾಲಯವು ಮೋಹನ್ ಕುಮಾರ್‍ನನ್ನು ದೋಷಿಯೆಂದು ಬುಧವಾರ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.

ಐಪಿಸಿ ಸೆಕ್ಷನ್ 302ರಂತೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ 5 ಸಾವಿರ ರೂ. ದಂಡ, ಐಪಿಸಿ ಸೆಕ್ಷನ್ 376 ಅತ್ಯಾಚಾರ ಪ್ರಕರಣದಲ್ಲಿ 7ವರ್ಷ ಕಠಿಣ ಸಜೆ 5 ಸಾವಿರ ರೂ.ದಂಡ, 366 ಅಪಹರಣ ಪ್ರಕರಣದಲ್ಲಿ 6 ವರ್ಷ ಕಠಿಣ ಶಿಕ್ಷೆ 4 ಸಾವಿರ ರೂ. ದಂಡ, 328 ವಿಷ ಉಣಿಸಿದ ಪ್ರಕರಣದಲ್ಲಿ 7ವರ್ಷ ಕಠಿಣ ಸಜೆ 5 ಸಾವಿರ ರೂ. ದಂಡ, 201 ಸಾಕ್ಷಿ ನಾಶ ಆರೋಪದಲ್ಲಿ 5 ವರ್ಷ ಶಿಕ್ಷೆ 3 ಸಾವಿರ ರೂ. ದಂಡ, 392 ಆಭರಣ ದೋಚಿದ ಪ್ರಕರಣದಲ್ಲಿ 5 ವರ್ಷ ಕಠಿಣ ಸಜೆ 4 ಸಾವಿರ ದಂಡ ರೂ. ವಿ„ಸಿದೆ. ಈ ಎಲ್ಲಾ ಪ್ರಕರಣದಲ್ಲೂ ದಂಡ ತೆರಲು ತಪ್ಪಿದಲ್ಲಿ ತಲಾ 2 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ. ಐಪಿಸಿ 417 ಮೋಸ ಪ್ರಕರಣದಲ್ಲಿ 6 ತಿಂಗಳು ಸಜೆ ವಿಧಿಸಿದೆ. ಅಪರಾಧಿಯೂ ಈ ಎಲ್ಲ ಪ್ರಕರಣಗಳನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ ಎಂದು ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ತೀರ್ಪು ನೀಡಿದ್ದಾರೆ.

ಹೆಸರು ಬದಲಿಕೊಂಡಿದ್ದ : ಆರೋಪಿ ಮೋಹನ ತನ್ನ ಹೆಸರನ್ನು ಆನಂದ್ ಎಂದು ಹೇಳಿಕೊಂಡು ಪಟ್ಟೆಮಜಲಿನ ಬೀಡಿ ಕಟ್ಟುವ ಯುವತಿಯೊಂದಿಗೆ ಸಖ್ಯ ಬೆಳೆಸಿಕೊಂಡಿದ್ದ. ಬಳಿಕ ಪ್ರೀತಿಸುವ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿದ್ದ. 2009ರ ಸೆ.17ರಂದು ಯುವತಿಯನ್ನು ಪುತ್ತೂರಿನ ಬಸ್ ನಿಲ್ದಾಣಕ್ಕೆ ಚಿನ್ನಾಭರಣ ಹಾಕಿಕೊಂಡು ಬರುವಂತೆ ಹೇಳಿದ್ದ. ಅದರಂತೆ ಯುವತಿ ಅಲ್ಲಿಗೆ ಬಂದಿದ್ದು, ಬಳಿಕ ಇಬ್ಬರೂ ಮಡಿಕೇರಿಗೆ ಹೋಗಿ ಅಲ್ಲಿನ ವಸತಿ ನಿಲಯದಲ್ಲಿ ತಂಗಿದ್ದರು. ಅಲ್ಲಿ ಆನಂದ ಎಂಬ ಹೆಸರಲ್ಲಿ ರೂಮ್ ಪಡೆದಿದ್ದ ಮೋಹನ್ ಕುಮಾರ್ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದ. ಬಳಿಕ ಯುವತಿಯನ್ನು ಮಡಿಕೇರಿಯ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು, ಮಾತ್ರೆಯ ಹೆಸರಿನಲ್ಲಿ ಸೈನೆಡನ್ನು ನೀಡಿದ್ದ. ಅದನ್ನು ತಿಂದಿದ್ದ ಯುವತಿ ಶೌಚಾಲಯದಲ್ಲಿ ಸಾವನ್ನಪ್ಪಿದ್ದಳು. ಮೋಹನ್ ಕುಮಾರ್ ಬಳಿಕ ರೂಮಿಗೆ ಮರಳಿ ಆಕೆಯ ಚಿನ್ನ, ಮೊಬೈಲ್‍ನೊಂದಿಗೆ ಪರಾರಿಯಾಗಿದ್ದ. ಯುವತಿಯದ್ದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು.

ಬಂಟ್ವಾಳದ ಬರಿಮಾರಿನ ಯುವತಿಯ ಕೊಲೆ ಪ್ರಕರಣದ ಪತ್ತೆಯೊಂದಿಗೆ ಸೈನೈಡ್ ಕಿಲ್ಲರ್ ಮೋಹನನ ಸರಣಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. 2009ರ ನ.16ರಂದು ಮೋಹನ್ ಕುಮಾರ್‍ನನ್ನು ಬಂಧಿಸಿ ಕಸ್ಟಡಿಗೆ ಪಡೆಯಲಾಗಿತ್ತು.

ಪ್ರಸಕ್ತ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಬಳ್ಳಾರಿ ಜೈಲಿನಲ್ಲಿದ್ದು ಇಂದು ಪ್ರಕರಣ ಸಂಬಂಧ ಮಂಗಳೂರು ನ್ಯಾಯಾಲಯಕ್ಕೆ ಭದ್ರತೆಯಲ್ಲಿ ಹಾಜರುಪಡಿಸಲಾಗಿತ್ತು.