ಗೋಣಿಕೊಪ್ಪಲು, ಸೆ. 14: ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ವೀರಾಜಪೇಟೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಮಟ್ಟದ ಹಾಕಿ ಪಂದ್ಯಾಟ ನಡೆಯಿತು.

ಬಾಲಕಿಯರಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು, ಬಾಲಕರಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ಕಾಲೇಜು ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಬಾಲಕಿಯರಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ವೀರಾಜಪೇಟೆ ಕಾವೇರಿ ಕಾಲೇಜು ವಿರುದ್ಧ 1-0 ಗೋಲುಗಳ ಅಂತರದಿಂದ ಫೈನಲ್‍ನಲ್ಲಿ ಜಯ ಸಾಧಿಸಿತು. ಗೋಣಿಕೊಪ್ಪ ಕಾವೇರಿ ಕಾಲೇಜು ಪರ ಎಸ್. ಅಭಿತಾ ಏಕೈಕ ಗೋಲು ಹೊಡೆದು ಮಿಂಚಿದರು. ಬಾಲಕರ ವಿಭಾಗದಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ತಂಡವು ಕಳತ್ಮಾಡು ಲಯನ್ಸ್ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಬಾಲಕರಲ್ಲಿ 16 ತಂಡಗಳು ಪಾಲ್ಗೊಂಡವು.

ತೀರ್ಪುಗಾರುಗಳಾಗಿ ದಿಲನ್ ಬೋಪಣ್ಣ, ಬೊಳ್ಳಚಂಡ ನಾಣಯ್ಯ, ಪೊನ್ನಣ್ಣ, ನಾಚಪ್ಪ, ಸಂತೋಶ್, ಅರುಣ್ ಕಾರ್ಯನಿರ್ವಹಿಸಿದರು.