ಸಿದ್ದಾಪುರ, ಸೆ. 15: ಆಟೋ ಚಾಲಕನೋರ್ವ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾಲ್ದಾರೆ ಸಮೀಪದ ಘಟ್ಟದಳ ಖಾಸಗಿ ತೋಟವೊಂದರ ತೋಟದ ಮನೆಯಲ್ಲಿ ವಾಸಿಸುತ್ತಿರುವ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿ ಸಂಜೆ 6.30 ಕ್ಕೆ ಮನೆಯ ಸಮೀಪದಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ತರಕಾರಿ ತೆಗೆದುಕೊಂಡು ಬರಲು ತೆರಳಿ ಹಿಂದಿರುಗಿ ಬರುತ್ತಿದ್ದ ಸಂದರ್ಭ, ಸಿದ್ದಾಪುರ ನಗರದ ಆಟೋ ಚಾಲಕನೋರ್ವ (ಏಂ 12 ಃ 4151) ತನ್ನ ಆಟೋವನ್ನು ಬಾಲಕಿಯ ಸಮೀಪ ನಿಲ್ಲಿಸಿ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ್ದು ನಂತರ ಅವಳನ್ನು ಆಟೋದಲ್ಲಿ ಎಳೆದು, ಬಲತ್ಕಾರಕ್ಕೆ ಯತ್ನಿಸಿದಾಗ ಬಾಲಕಿಯು ಕಿರುಚಿಕೊಂಡ ಪರಿಣಾಮ ಬಾಲಕಿಯ ಸಂಬಂಧಿಕರು ಬರುವದನ್ನು ಕಂಡ ಆಟೋ ಚಾಲಕ ಪರಾರಿಯಾಗಿದ್ದಾನೆ. ಈ ಸಂದರ್ಭ ಸ್ಥಳೀಯರು ವಾಹನ ಸಂಖ್ಯೆಯನ್ನು ಬರೆದಿಟ್ಟಿದ್ದು ಈ ಹಿನೆÀ್ನಲೆಯಲ್ಲಿ ಪೋಷಕರು ಸಿದ್ದಾಪುರ ಠಾಣೆಯಲ್ಲಿ ಪುಕಾರು ನೀಡಿದ್ದಾರೆ. ಪೋಲಿಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.