ಮಡಿಕೇರಿ, ಸೆ.15: ಮಡಿಕೇರಿ ದಸರಾ ಜನೋತ್ಸವ ಸಂದರ್¨ ದಸರಾ ಸಾಂಸ್ಕøತಿಕ ವತಿಯಿಂದ 5 ನೇ ವರ್ಷದ ಮಹಿಳಾ ದಸರಾವನ್ನು ತಾ.24 ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಮಹಿಳಾ ದಸರಾ ಸಂದರ್ಭ ಅಂದು ಬೆಳಗ್ಗೆ 9.30 ಗಂಟೆಯಿಂದಲೇ ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೌರಾಯುಕ್ತೆ ಬಿ.ಶುಭಾ, ದಸರಾ ಸಾಂಸ್ಕøತಿಕ ಸಮಿತಿ ಸದಸ್ಯೆ ಸವಿತಾ ರಾಕೇಶ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖಾಧಿಕಾರಿ ಮಮ್ತಾಜ್, ಈ ಬಾರಿಯ ಮಹಿಳಾ ದಸರಾ ಉಸ್ತುವಾರಿ ಹೊಂದಿದ್ದಾರೆ.

ಮಹಿಳೆಯರಿಗಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮುಖಕ್ಕೆ ಅಲಂಕಾರ ಮಾಡುವ ಸ್ಪರ್ಧೆ, ಭಾರತೀಯ ಶೈಲಿ ಮತ್ತು ಅರೇಬಿಕ್ ಶೈಲಿಯಲ್ಲಿ ಮೆಹಂದಿ ಹಾಕುವ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಹೂವಿನ ಹಾರ ಮಾಡುವ ಸ್ಪರ್ಧೆ, ಲಗೋರಿ ಆಟದ ಸ್ಪರ್ಧೆ, ಗೋಲಿ ಆಟದಂಥ ವಿಶಿಷ್ಟ ಸ್ಪರ್ಧೆಗಳನ್ನೂ ಈ ವರ್ಷ ಆಯೋಜಿಸಲಾಗಿದೆ.

ಮಹಿಳಾ ದಸರಾ ಸಂದರ್ಭ ಸಿರಿಧಾನ್ಯ ಮೇಳವನ್ನೂ ಆಯೋಜಿಸಲಾಗಿದ್ದು, ಗ್ರಾಮೀಣ ಖಾದ್ಯಗಳ ವೈವಿಧ್ಯ ಬಿಂಬಿಸುವ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಸಿರಿದಾನ್ಯ ಮೇಳದಲ್ಲಿ ಏರ್ಪಡಿಸಲಾಗಿದೆ. ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಜಿಲ್ಲೆಯ ಮಹಿಳಾ ಸಂಘಗಳು ಉತ್ಪಾದಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಕೂಡ ವಿಶೇಷವಾಗಿದೆ.

ಜಿಲ್ಲೆಯ ಮಹಿಳೆಯರು ವೈವಿಧ್ಯಮಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೆಸರನ್ನು ತಾ. 22 ರೊಳಗಾಗಿ ನೋಂದಾಯಿಸುವಂತೆ ಸೂಚಿಸಲಾಗಿದೆ. ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆ - ಛದ್ಮವೇಷ ಸ್ಪರ್ಧೆ ಶ್ರೀಮತಿ ಬಂಗೇರಾ - 9448504831, ವೀಣಾಕ್ಷಿ - 8762303208, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ - ಸಂಗೀತ ಪ್ರಸನ್ನ - 9591173292. ಅನಿತಾ ಪೂವಯ್ಯ - 9449982925, ಗೋಲಿ ಆಟ ಮತ್ತು ಲಗೋರಿ ಸ್ಪರ್ಧೆ - ಸವಿತಾ ರಾಕೇಶ್ - 7026360963, ಕಣ್ಣಿಗೆ ಬಟ್ಟೆ ಕಟ್ಟಿ ಮುಖಕ್ಕೆ ಅಲಂಕಾರ ಮಾಡುವ ಸ್ಪರ್ಧೆ - ಎ.ಕೆ. ಲಕ್ಷ್ಮಿ - 9483785466, ಐ.ಜಿ.ಶಿವಕುಮಾರಿ - 9972069602, ಮೆಹಂದಿ ಹಾಕುವ ಸ್ಪರ್ಧೆ - ನೀಮಾ ಅರ್ಷದ್ - 9902612796. ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ - ಲೀಲಾ ಶೇಷಮ್ಮ - 9972167579, ಜುಲೆಕಾಬಿ - 9972957351. ಹೂವಿನ ಹಾರ ಮಾಡುವ ಸ್ಪರ್ಧೆ - ತಜಸುಂ - 7204289191. ಮಹಿಳಾ ಸಂಘಗಳ ವೈವಿಧ್ಯಮಯ ಉತ್ಪನ್ನಗಳ ಪ್ರದರ್&divlusmn;ನಕ್ಕಾಗಿ ಪ್ರಭಾ - 9686280372, ಸಿರಿಧಾನ್ಯ ಮೇಳ - ಸರು ಸತೀಶ್ -9845426744, ಕೆ.ಜಯಲಕ್ಷಿ 9663119670 ಮತ್ತು ದಮಯಂತಿ - 9611091276.