ಮಡಿಕೇರಿ, ಸೆ. 15: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕೇಂದ್ರದ 2017-18 ನೇ ಸಾಲಿನ ಬಿ.ಎ., ಬಿ.ಕಾಂ., ಬಿ.ಬಿ.ಎ. ಮತ್ತು ಎಂ.ಎ., ಎಂ.ಕಾಂ. ಕೋರ್ಸುಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು ತಾ.30 ಕೊನೆಯ ದಿನಾಂಕವಾಗಿರುತ್ತದೆ. ಯಾವದೇ ವೃತ್ತಿಯಲ್ಲಿ ಅಥವಾ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸವನ್ನು ಮುಂದುವರಿಸಲಿರುವವರಿಗೆ ಈ ಕೋರ್ಸುಗಳು ಅನುಕೂಲಕರವಾಗುತ್ತದೆ.

ಮಂಗಳೂರು ವಿಶ್ವವಿದ್ಯಾನಿಲಯ ದೂರಶಿಕ್ಷಣ ಕೋರ್ಸುಗಳಿಗೆ ಪ್ರವೇಶಾತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು, ಉಡುಪಿ, ಎಫ್.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ, ಯೂನಿವರ್ಸಿಟಿ ಕಾಲೇಜು, ಮಂಗಳೂರು ಅಥವಾ ದೂರಶಿಕ್ಷಣ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಇಲ್ಲಿ ಪ್ರವೇಶಾತಿ ಪಡೆಯಬಹುದು.

ದೂರ ಶಿಕ್ಷಣ ಕೋರ್ಸುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ವೆಬ್ ಸೈಟ್:ತಿತಿತಿ.mಚಿಟಿgಚಿಟoಡಿe uಟಿiveಡಿsiಣಥಿ.ಚಿಛಿ.iಟಿನ್ನು ನೋಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.