ಮಡಿಕೇರಿ, ಸೆ.15 : ಕರ್ನಾಟಕ ರಾಜ್ಯ ಏಕೀಕರಣಗೊಂಡ ನವೆಂಬರ್ 1ನ್ನು ದುರಾಕ್ರಮಣದ ದಿನವನ್ನಾಗಿ ಆಚರಿಸುತ್ತಿರುವದಾಗಿ ತಿಳಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘÀಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ, ಅಂದು ದೆಹಲಿಯ ಜಂತರ್ ಮಂತರ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಲ್ಯಾಂಡ್ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಪ್ರತಿ ನವೆಂಬರ್ 1 ರಂದು ಧರಣಿ ನಡೆಸುತ್ತಾ ಬರಲಾಗಿದೆ. ಈ ಬಾರಿ 24ನೇ ವರ್ಷದ ಸತ್ಯಾಗ್ರಹವನ್ನು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ನಡೆಸುವ ಮೂಲಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಲಾಗುವದು ಎಂದರು.

1956 ನವೆಂಬರ್ 1 ರಂದು ಕೊಡಗನ್ನು ದೂರದೃಷ್ಟಿಯ ಅಭಾವದಿಂದ ನರಳುತ್ತಿರುವ ರಾಜಕಾರಣಿಗಳು ಕರ್ನಾಟಕದೊಂದಿಗೆ ವಿಲೀನಗೊಳಿಸಿದರು. ಅಲ್ಲಿಂದ ಕೊಡಗು ಆಕ್ರಮಣಕ್ಕೆ ಒಳಗಾಯಿತು ಎಂದು ಆರೋಪಿಸಿದ ಎನ್.ಯು. ನಾಚಪ್ಪ, ಕಳೆದ 61 ವರ್ಷಗಳಿಂದ ಕೊಡವರ ಎಲ್ಲಾ ಹಕ್ಕುಗಳನ್ನು ಹಂತ ಹಂತವಾಗಿ ಕಸಿಯುತ್ತಾ ಬರಲಾಗಿದೆಂ iÉುಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಸರವಾದಿಗಳು, ಅಧಿಕಾರ ಶಾಹಿಗಳು ಸ್ವಾರ್ಥ ರಾಜಕಾರಣಿಗಳು ಕೊಡಗಿಗೆ ಅನ್ಯಾಯ ಮಾಡುತ್ತಲೆ ಬರುತ್ತಿದ್ದು, ದೇವಟ್ ಪರಂಬುವಿನಲ್ಲಿ ಸ್ಮಾರಕ ನಿರ್ಮಿಸುವದಕ್ಕು ವಿರೋಧ ವ್ಯಕ್ತವಾಗಿದ್ದು, ಟಿಪ್ಪುವಿನ ಧಾಳಿಗೆ ಸಿಲುಕಿ ಮೃತಪಟ್ಟಿರುವವರ ಆತ್ಮಕ್ಕೆ ಶಾಂತಿಕೋರಿ ತಾ.18 ರಂದು ತಲಕಾವೇರಿಯಲ್ಲಿ ಪÀÇಜೆ ಸಲ್ಲಿಸುವದಾಗಿ ಇದೇ ಸಂದರ್ಭ ತಿಳಿಸಿದರು.

ಮ್ಯಾನ್ಮಾರ್‍ನಿಂದ ವಲಸೆ ಬರುತ್ತಿರುವ ರೊಹಿಂಗ್ಯಾ ನಿರಾಶ್ರಿತರ ಬಗ್ಗೆ ಆತಂಕ ವ್ಯಕ್ತಡಿಸಿದ ನಾಚಪ್ಪ, ಅಸ್ಸಾಂ ನಿವಾಸಿಗಳೆಂದು ಹೇಳಿP Éೂಂಡು ಭಾರತದ ಗುರುತಿನ ಚೀಟಿಗಳನ್ನು ಸೃಷ್ಟಿಸಿ ದೇಶದಲ್ಲಿ ಅಕ್ರಮವಾಗಿ ನೆಲೆ ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂಬಂಡ ಜನತ್, ಕೂಪದಿರ ಸಾಬು, ಪÀÅಲ್ಲೇರ ಕಾಳಪ್ಪ, ಅರೆಯಡ ಗಿರೀಶ್ ಹಾಗೂ ಕಾಟುಮಣಿಯಂಡ ಉಮೇಶ್ ಉಪಸ್ಥಿತರಿದ್ದರು.